Breaking News

ರಾಜಕೀಯ ಎಂಟ್ರಿ ಬಗ್ಗೆ ಬಾಲಿವುಡ್ ನಟ ಸೋನು ಸೂದ್ ಹೇಳಿದ್ದೇನು ಗೊತ್ತೆ?

Advertisement

ಕೊರೊನಾ ಮೊದಲನೇ ಅಲೆ ಆರ್ಭಟ, ಲಾಕ್ ಡೌನ್ ಸಂಕಷ್ಟದಿಂದ ಹಿಡಿದೂ ಕೋವಿಡ್ ಎರಡನೇ ಅಲೆಯಲ್ಲಿಯೂ ತತ್ತರಿಸಿರುವ ಹಲವರಿಗೆ ಬಾಲಿವುಡ್ ನಟ ಸೋನು ಸೂದ್ ನೆರವಾಗುತ್ತಲೆ ಇದ್ದಾರೆ. ಸಮಸ್ಯೆಯಿದೆ ಸಹಾಯ ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಒಂದು ಮೆಸೇಜ್, ಒಂದು ಫೋನ್ ಕಾಲ್ ಮಾಡಿದರೆ ಸಾಕು ತಕ್ಷಣ ಸ್ಪಂದಿಸಿ ಸಹಾಯ ಮಾಡುತ್ತಿದ್ದಾರೆ. ಹಾಗಾಗಿ ಅದೆಷ್ಟೋ ಜನರಿಗೆ ರೀಯಲ್ ಹೀರೋ ಆಗಿದ್ದಾರೆ. ಈ ನಡುವೆ ಸೋನು ಸೂದ್ ರಾಜಕೀಯಕ್ಕೆ ಬರಬೇಕುಬೇಕು, ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬುದು ಅವರ ಹಲವು ಅಭಿಮಾನಿಗಳ ಆಶಯ. ಇತ್ತೀಚೆಗೆ ಇದು ಬಹುಚರ್ಚಿತ ವಿಷಯವೂ ಆಗಿದೆ. ಈ ಬಗ್ಗೆ ಸ್ವತ: ಸೋನು ಸೂದ್ ಅವರೇ ಪ್ರತಿಕ್ರಿಯೆ ನೀಡಿ ಸ್ಪಷ್ಟನೆ ನೀಡಿದ್ದಾರೆ. ಸೋನು ಸೂದ್ ಅವರ ಸಮಾಜಮುಖಿ ಕಾರ್ಯಗಳನ್ನು ನೋಡಿ ಅದೆಷ್ಟೋ ಜನರು ಅವರು ರಾಜಕಾರಣಿಯಾಗಬೇಕು. ಇದರಿಂದ ಇನ್ನಷ್ಟು ಜನರಿಗೆ ಅವರ ನೆರವು ಸಿಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Advertisement

ಆದರೆ ಇನ್ನು ಹಲವರಿಗೆ ಸೋನು ಸೂದ್ ಅವರನ್ನು ಓರ್ವ ರಾಜಕೀಯ ವ್ಯಕ್ತಿಯಾಗಿ ನೋಡಲು ಇಷ್ಟವಿಲ್ಲ. ಓರ್ವ ಪೊಲಿಟಿಶಿಯನ್ ಅಲ್ಲದೆಯೂ ಸಮಾಜಿಕ ಕಾರ್ಯಗಳ್ಲಲಿ ತೊಡಗಿಸಿಕೊಳ್ಳಬಹುದು ಎಂಬುದು ಅನೇಕರ ಅಭಿಪ್ರಾಯ. ಎಲ್ಲಾ ಅಭಿಮತಗಳ ನಡುವೆ ಇದೀಗ ಸೋನು ಸೂದ್ ಅವರೇ ತಮ್ಮ ನಿಲುವಿನ ಬಗ್ಗೆ ಸ್ಪಷ್ಟ ಪಡಿಸಿದ್ದಾರೆ. ಅಂದಹಾಗೇ ಇತ್ತೀಚೆಗೆ ಬಾಲಿವುಡ್ ನಟಿ ಹಿಮಾ ಖುರೇಶಿ ಅವರಿಗೆ ಸಂದರ್ಶನವೊಂದರಲ್ಲಿ ಬಾಲಿವುಡ್ ನ ಯಾವ ಕಲಾವಿದರು ನಿಮ್ಮ ಪ್ರಕಾರ ರಾಜಕೀಯಕ್ಕೆ ಎಂಟ್ರಿಕೊಡಬೇಕು ಎಂದು ಕೇಳಲಾದ ಪ್ರಶ್ನೆಗೆ ಸೋನು ಸೂದ್ ಹೆಸರು ಹೇಳಿದ್ದರು. ಪ್ರಾಮಾಣಿಕವಾಗಿ ಹೇಳಬೆಕೆಂದರೆ ಸೋನು ಸೂದ್ ಚುನಾವಣೆಯಲ್ಲಿ ಸ್ಪರ್ಧಿಸಬೇಕು. ನಾವೆಲ್ಲರೂ ಅವರಿಗೆ ವೋಟ್ ಹಾಕುತ್ತೇವೆ ಮತ್ತು ಅವರು ಈ ದೇಶದ ಪ್ರಧಾನಿಯಾಗಬೇಕು ಎಂದಿದ್ದರು.

Advertisement

ಇದಕ್ಕೆ ಉತ್ತರ ನೀಡಿರುವ ಸೋನು ಸೂದ್ ಹುಮಾ ಅವರ ಮಾತು ಕೇಳಿ ಖುಷಿಯಾಗಿದೆ. ಆದರೆ ಅಷ್ಟುದೊಡ್ಡ ಜವಾಬ್ದಾರಿ ನಿಭಾಯಿಸುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ರಾಜೀವ್ ಗಾಂಧಿ ತಮ್ಮ 40ನೇ ವರ್ಷಕ್ಕೆ ಪ್ರಧಾನಿಯಾದರು. ಆದರೆ ಅವರಿಗೆ ರಾಜಕೀಯ ಹಿನ್ನೆಲೆ ಇತ್ತು. ನನಗೆ ರಾಜಕೀಯದಲ್ಲಿ ಯಾವುದೇ ಅನುಭವವೂ ಇಲ್ಲ. ಅಂತಹ ಆಸಕ್ತಿಯೂ ಇಲ್ಲ ಎಂದಿದ್ದಾರೆ. ಅಲ್ಲದೇ ಕೆಲವರಿಗೆ ನಾನು ರಾಜಕೀಯಕ್ಕೆ ಬರುವುದು ಇಷ್ಟವಿಲ್ಲ. ಹಾಗಾಗಿ ಅವರಿಗೆ ಬೇಸರ ಮಾಡಲು ನನಗೂ ಇಷ್ಟವಿಲ್ಲ. ನಾನು ನಟನಾಗಿ, ಸಾಮಾಜಿಕ ಕಾರ್ಯಕರ್ತನಾಗಿ ಸೇವೆ ಮಾಡುತ್ತಿರುವುದಕ್ಕೆ ಖುಷಿಯಿದೆ. ಯಾವುದೇ ಅಧಿಕಾರವಿಲ್ಲದೆಯೂ ಸಾಧ್ಯವಾದಷ್ಟು ಸಹಾಯ ಮಾಡಬಹುದು ಎಂದು ಹೇಳಿದ್ದಾರೆ.

Advertisement
Advertisement

Advertisement

About RJ News Kannada

Check Also

ದರ್ಶನ್​​ಗೆ ‘ಗೋಲ್ಡ್​​​ ರಿಂಗ್’ ತೊಡಿಸಲಿದ್ದಾರಾ ನಿರ್ದೇಶಕ ಪ್ರೇಮ್​​​​….ಈ ಬಗ್ಗೆ ಕ್ರೇಜಿ ಕ್ವೀನ್ ಹೇಳಿದ್ದೇನು…?

Advertisement ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗಳೆಂದರೆ ಅಭಿಮಾನಿಗಳು ಚಾತಕ ಪಕ್ಷಿಗಳಂತೆ ಕಾಯುತ್ತಿರುತ್ತಾರೆ. 2019 ರ ‘ಒಡೆಯ’ ನಂತರ ದರ್ಶನ್ ಘೋಷಿಸಿದ್ದ …

Leave a Reply

Your email address will not be published.

Recent Comments

No comments to show.