Breaking News

ಗಟ್ಟಿಮೇಳ ಧಾರಾವಾಹಿಯ ನಟ ಧೃವ ನಿಜಕ್ಕೂ ಯಾರು ಗೊತ್ತಾ?

Advertisement

ಸದ್ಯ ಕೊರೊನಾ ಕಾರಣದಿಂದಾಗಿ ಸಿನಿಮಾಗಳ‌ ಮನರಂಜನೆಗೆ ಸಂಪೂರ್ಣ ಬ್ರೇಕ್ ಬಿದ್ದಿದ್ದು, ಪುಣ್ಯಕ್ಕೆ ಧಾರಾವಾಹಿಗಳು ಕೆಲ ನಿಯಮಗಳನ್ನು ಹಾಕಿಕೊಂಡು ಎಂದಿನಂತೆ ಪ್ರಸಾರವಾಗುತ್ತಿವೆ.. ಅದೆಷ್ಟೋ‌ ಧಾರಾವಾಹಿ ಕಾರ್ಮಿಕರ ಜೀವನ ಅಲ್ಪ ಮಟ್ಟಕ್ಕಾದರೂ ಸುಧಾರಿಸುತ್ತಿದೆ.. ಎಂದಿನಂತೆ ಲಾಕ್ ಡೌನ್ ಬಳಿಕ ಧಾರಾವಾಹಿಗಳು ತಮ್ಮ ರೇಟಿಂಗ್ ನಲ್ಲಿಯೂ ಕಂಬ್ಯಾಕ್‌ ಮಾಡಿದ್ದು ಮನರಂಜಿಸುತ್ತಿದೆ.. ಇನ್ನು ಕನ್ನಡ ಕಿರುತೆರೆಯಲ್ಲಿ ಸದ್ಯ ಜೀ ವಾಹಿನಿಯ ಧಾರಾವಾಹಿಗಳದ್ದೇ ಕಾರುಬಾರು.. ಇನ್ನು ಗಟ್ಟಿಮೇಳ ಹಾಗೂ ಜೊತೆಜೊತೆಯಲಿ ಧಾರಾವಾಹಿಗಳು ಟಾಪ್ ರೇಟಿಂಗ್ ನಲ್ಲಿದ್ದು ಸಾಕಷ್ಟು ಹೆಸರು ಮಾಡಿತು.. ಧಾರಾವಾಹಿ ಮಾತ್ರವಲ್ಲದೇ ಅಲ್ಲಿನ ಪಾತ್ರಗಳು ಸಹ ಪಾತ್ರಧಾರಿಗಳು ಸಹ ಪ್ರಖ್ಯಾತಿ ಪಡೆದರು..

ಇನ್ನು ಗಟ್ಟಿಮೇಳ ಧಾರಾವಾಹಿಯಲ್ಲಿ ಸದ್ಯ ಕೆಲ ತಿಂಗಳ ಹಿಂದೆ ಹೊಸ ಎಂಟ್ರಿ ಪಡೆದುಕೊಂಡ ಧೃವ ಜನರ ಮನ ಗೆಲ್ಲುವಲ್ಲಿ ಯಶಸ್ವಿಯೂ ಆದರು.. ಇದೀಗ ಸಾಕಷ್ಟು ಸಿನಿಮಾಗಳ ಆಫರ್ ಕೂಡ ಬರುತ್ತಿರುವ ಈ ಧೃವ ನಿಜಕ್ಕೂ ಯಾರು? ಇಲ್ಲಿದೆ ನೋಡಿ ಉತ್ತರ..

Advertisement

ಧೃವ ಪಾತ್ರಧಾರಿಯ ನಿಜವಾದ ಹೆಸರು ರಂಜನ್.. ಹುಟ್ಟಿ ಬೆಳದದ್ದು ಮಂಡ್ಯದಲ್ಲಿಯೇ.. ಅಲ್ಲಿಯೇ ತನ್ನ ವಿಧ್ಯಾಭ್ಯಾಸ ಮುಗಿಸಿ ಮುಂದೇನು ಎನ್ನುವ ಸಮಯದಲ್ಲಿ ನಟನಾಗುವ ಆಸೆ ಚಿಗುರೊಡೆಯಿತು.. ನೋಡಲು ಹ್ಯಾಂಡ್ಸಮ್ ಆಗಿರುವ ರಂಜನ್ ಸುಮ್ಮನೆ ಚಿತ್ರರಂಗಕ್ಕೆ ಕಾಲಿಡಲಿಲ್ಲ.. ಬದಲಿಗೆ ಸಾಕಷ್ಟು ತಯಾರಿ‌ ನಡೆಸಿದರು.. 2017 ರಲ್ಲಿ ನಾಗಾಭರಣ ಅವರ ಅಭಿನಯ ತರಬೇತಿ ಶಾಲೆಗೆ ಸೇರಿಕೊಂಡರು.. ಅಂದುಕೊಂಡಂತೆ ನಟನೆಯಲ್ಲಿ ತರಬೇತಿ ಪಡೆದು ಅವಕಾಶಕ್ಕಾಗಿ ಹುಡುಕುತ್ತಾ ಇರುವಾಗ ಸಿಕ್ಕ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಾ ಬಂದರು.. 2018 ರಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಸಹ ಕಲಾವಿದನಾಗಿ ಅಭಿನಯಿಸಿದ್ದಾರೆ..

Advertisement

ಆನಂತರ ರಂಜನ್ ಗೆ ಅವಕಾಶ ಸಿಕ್ಕಿದ್ದು ಇಷ್ಟದೇವತೆ ಧಾರಾವಾಹಿಯಲ್ಲಿ.. ಹೌದು ಇಷ್ಟದೇವತೆ ಧಾರಾವಾಹಿ ಆ ಸಮಯದಲ್ಲಿ ಒಳ್ಳೆಯ ಹೆಸರು ಮಾಡಿತ್ತು.. ಅದರಲ್ಲಿ ವಿಲನ್ ಆಗಿ‌ ಕಾಣಿಸಿಕೊಂಡರು ರಂಜನ್..

Advertisement

ಆನಂತರ ರಂಜನ್ ಕಲಾ ಜೀವನಕ್ಕೆ ದೊಡ್ಡ ಬ್ರೇಕ್ ಕೊಟ್ಟದ್ದು‌ ಮಾತ್ರ ಗಟ್ಟಿಮೇಳ ಧಾರಾವಾಹಿ.. ಹೌದು ಕೆಲ ತಿಂಗಳ ಹಿಂದಷ್ಟೇ ವೇದಾಂತ್ ವಸಿಷ್ಠನ ತಮ್ಮ ನ ಪಾತ್ರ ಧೃವ ವಸಿಷ್ಠ ಪಾತ್ರಕ್ಕೆ ಆಯ್ಕೆಯಾದ ರಂಜನ್ ಆನಂತರ ತಿರುಗಿ‌ ನೋಡಲೇ ಇಲ್ಲ.. ಈಗಲೂ ಜನರು ಎಲ್ಲಿ ಹೋದರೂ ಧೃವ ಎಂದೇ ಗುರುತಿಸಿತ್ತಾರೆ.. ತಾವು ಸಿನಿಮಾದಲ್ಲಿ ನಟನಾಗಬೇಕೆಂಬ ಕನಸು ಕೂಡ ಇದೇ ಧಾರಾವಾಹಿಯಿಂದ ಸಾಕಾರಗೊಳ್ಳುವಂತೆ ಕಾಣುತ್ತಿದೆ.. ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿಯೂ ಸಹ ಅವಕಾಶ ಬಂದಿದೆಯಂತೆ.. ಮುಂದಿನ ಜೀವನದಲ್ಲಿ ಎಲ್ಲ ಅಂದುಕೊಂಡಂತೆ ಆಗುವ ನಿರೀಕ್ಷೆ ಇದೆ ಎನ್ನುತ್ತಾರೆ ಧೃವ.. ನಟನೆ ಮಾತ್ರವಲ್ಲದೆ ಜಿಮ್ ಟ್ರೈನರ್ ಕೂಡ ಆಗಿರುವ ಧೃವ ಸ್ನೇಹಿತರಿಗೆ ಸಹಾಯ ಮಾಡುವ ಸಲುವಾಗಿ ಲಾಕ್ ಡೌನ್ ಸಮಯದಲ್ಲಿ ಜಿಮ್ ತೆರೆಯಲು ಅನುಮತಿ ನೀಡಿ ಎಂದು ಸರ್ಕಾರದ ಬಳಿ ಮನವಿಯನ್ನೂ ಸಹ ಮಾಡಿಕೊಂಡಿದ್ದರು..

ಇನ್ನು ಸಿನಿಮಾರಂಗದಲ್ಲಿ ಪುನೀತ್ ರಾಜ್ ಕುಮಾರ್ ಅವರೇ ನನಗೆ ಸ್ಪೂರ್ತಿ ಎನ್ನುವ ಧೃವ.. ನಿಜ ಜೀವನದಲ್ಲಿಯೂ ಸಹ ಪುನೀತ್ ಅವರ ಸರಳತೆ.. ಅವರ ವ್ಯಕ್ತಿತ್ವ ಬಹಳ ಇಷ್ಟವಾಗುತ್ತದೆ ಎನ್ನುತ್ತಾರೆ.. ಸದ್ಯ ಕಿರುತೆರೆ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಧೃವ ಮುಂಬರುವ ದಿನಗಳಲ್ಲಿ ಸಿನಿಮಾರಂಗದಲ್ಲಿಯೂ ಹೆಸರು ಮಾಡುವಂತಾಗಲಿ..

Advertisement
Advertisement
Advertisement

About admin

Check Also

ರಾಜಕೀಯ ಎಂಟ್ರಿ ಬಗ್ಗೆ ಬಾಲಿವುಡ್ ನಟ ಸೋನು ಸೂದ್ ಹೇಳಿದ್ದೇನು ಗೊತ್ತೆ?

Advertisement ಕೊರೊನಾ ಮೊದಲನೇ ಅಲೆ ಆರ್ಭಟ, ಲಾಕ್ ಡೌನ್ ಸಂಕಷ್ಟದಿಂದ ಹಿಡಿದೂ ಕೋವಿಡ್ ಎರಡನೇ ಅಲೆಯಲ್ಲಿಯೂ ತತ್ತರಿಸಿರುವ ಹಲವರಿಗೆ ಬಾಲಿವುಡ್ …

Leave a Reply

Your email address will not be published.

Recent Comments

No comments to show.