ಮನುಷ್ಯ ಇದ್ದಾಗ ಆತನ ಒಳ್ಳೆಯ ಸಮಯದಲ್ಲಿ ಜೊತೆಯಿಲ್ಲದಿದ್ದರೂ.. ಆತ ಇಲ್ಲವಾದಾಗ ಆತನ ಕುಟುಂಬವನ್ನು ಕೈ ಹಿಡಿಯುವ ಕೆಲಸ ಇದೆಯಲ್ಲಾ ನಿಜಕ್ಕೂ ಅದಕ್ಕಿಂತ ಮನುಷ್ಯತ್ವದ ಕೆಲಸ ಮತ್ತೊಂದಿಲ್ಲ.. ಇನ್ನು ದರ್ಶನ್ ಅವರ ಬಗ್ಗೆ ಎಲ್ಲರಿಗೂ ತಿಳಿದೇ ಇದೆ.. ಈ ಹಿಂದೆ ಕಾಶಿನಾಥ್ ಅವರು ತೀರಿಕೊಂಡಾಗ ಎರಡು ದಿನಗಳ ನಂತರ ಅವರ ಮಗನ ಮೇಲೆ ಎಲ್ಲಾ ಜವಾಬ್ದಾರಿಗಳೂ ಬಿದ್ದವು.. ಎಲ್ಲವೂ ಆತನಿಗೆ ಹೊಸದು.. ಅಂತಹ ಸಮಯದಲ್ಲಿ ದರ್ಶನ್ ಅವರು ಕಾಶಿನಾಥ್ ಅವರ ಮಗನಿಗೆ ಫೋನ್ ಮಾಡಿ ಅದೇನೆ ಕೆಲಸ ಇದ್ದರೂ, ಅದೇನೆ ಸಹಾಯ ಬೇಕಿದ್ದರೂ ಯಾವ ಸಮಯದಲ್ಲಿ ಬೇಕಾದರೂ ನನಗೊಂದು ಫೋನ್ ಮಾಡು ಎಂದಿದ್ದರಂತೆ.. ಈ ಬಗ್ಗೆ ಕಾಶಿನಾಥ್ ಅವರ ಮಗ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು..
ಇನ್ನು ಇದೀಗ ಚಿರು ಇಲ್ಲವಾದ ನೋವಿನಲ್ಲಿರುವ ಧೃವನ ಕೈ ಹಿಡಿಯುವ ಮೂಲಕ ದೊಡ್ಡತನ ತೋರಿದ್ದಾರೆ.. ಹೌದು ಚಿರು ದರ್ಶನ್ ಅವರಿಗೆ ಬಹಳ ಆತ್ಮೀಯ ಸ್ನೇಹಿತ.. ಸದಾ ಪಾರ್ಟನರ್ ಪಾರ್ಟನರ್ ಎಂದೇ ಕರೆಯುತ್ತಿದ್ದರು.. ದರ್ಶನ್ ಅವರ ಮೈಸೂರಿನ ಫಾರ್ಮ್ ಹೌಸ್ ಗೆ ಆಗಾಗ ಹೋಗುತ್ತಿದ್ದ ಚಿರು ಅಲ್ಲಿಯೇ ಸಮಯ ಕಳೆದು ಬರುತ್ತಿದ್ದರು..
ಇನ್ನು ಚಿರು ಇಲ್ಲವಾಗಿ 23 ದಿನಗಳು ಕಳೆದವು.. ಮಾಡಬೇಕಾದ ಎಲ್ಲಾ ಕಾರ್ಯಗಳನ್ನು ಕುಟುಂಬ ಮಾಡಿ ಮುಗಿಸಿದೆ.. ಇನ್ನು ಸಿನಿಮಾ ವಿಚಾರ ಅಂತ ಬಂದಾಗ ಎಲ್ಲಾ ಜವಾಬ್ದಾರಿಯೂ ಧೃವ ಅವರ ಹೆಗಲ ಮೇಲಿದೆ.. ಚಿರು ಸಾಕಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿದ್ದರು.. ಅದರಲ್ಲಿ ಕೆಲವು ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದ್ದು ಡಬ್ಬಿಂಗ್ ಕೆಲಸ ಬಾಕಿ ಉಳಿದಿತ್ತು.. ಲಾಕ್ ಡೌನ್ ಇದ್ದದ್ದರಿಂದ ಆ ಕೆಲಸ ಬಾಕಿ ಉಳಿಯಿತು.. ಇದೀಗ ಡಬ್ಬಿಂಗ್ ಉಳಿದ ಸಿನಿಮಾ.. ಕೆಲ ಭಾಗ ಶೂಟಿಂಗ್ ಉಳಿದ ಸಿನಿಮಾಗಳನ್ನು ಧೃವ ಮುಕ್ತಾಯ ಗೊಳಿಸಿಕೊಡುವುದಾಗಿ ಮಾತು ಕೊಟ್ಟಿದ್ದಾರೆ.. ತನ್ನ ಅಣ್ಣನಿಂದ ಮತ್ಯಾರಿಗೂ ನಷ್ಟವಾಗಬಾರದು.. ಯಾರಿಂದಲೂ ಅಣ್ಣನಿಗೆ ಕೆಟ್ಟ ಹೆಸರು ಬರಬಾರದೆಂದು ಈ ನಿರ್ಧಾರಕ್ಕೆ ಬಂದಿದ್ದಾರೆ..
ಇನ್ನು ಈಗಾಗಲೇ ಜೀವ ಎಂದುಕೊಂಡಿದ್ದ ಅಣ್ಣನನ್ನು ಕಳೆದುಕೊಂಡ ಧೃವ ಈ ಸಿನಿಮಾಗಳ ಜವಾಬ್ದಾರಿಯನ್ನು ಒಬ್ಬರೇ ನಿಭಾಯಿಸಬೇಕಿದೆ.. ಇಂತಹ ಸಮಯದಲ್ಲಿ ಅಣ್ಣನಾಗಿ ನಿಂತದ್ದು ಮತ್ಯಾರೂ ಅಲ್ಲ ಅದು ದರ್ಶನ್ ಅವರು.. ಹೌದು ದರ್ಶನ್ ಅವರು ಖುದ್ದು ಚಿರು ಅವರ ಸಿನಿಮಾಗಳ ನಿರ್ಮಾಪಕರಿಗೆ ಫೋನ್ ಮಾಡಿ ಹೇಳಿದ್ದು ಚಿರು ಭಾಗದ ಡಬ್ಬಿಂಗ್ ಅನ್ನು ನಾನೇ ಮಾಡಿಕೊಡುತ್ತೇನೆ.. ಧೃವನಿಗೆ ತೊಂದರೆ ಆಗೋದು ಬೇಡ.. ಅವನೀಗ ಸಾಕಷ್ಟು ನೋವಿನಲ್ಲಿದ್ದಾನೆ.. ಡಬ್ಬಿಂಗ್ ಮಾಡಲು ಬಂದರೆ ಧೃವನಿಗೆ ಇನ್ನಷ್ಟು ನೋವಾಗತ್ತೆ ಎಂದಿದ್ದಾರೆ.. ಅವಶ್ಯಕತೆ ಬಿದ್ದರೆ ನನಗೆ ಫೋನ್ ಮಾಡಿ ನಾನೇ ಬರ್ತೇನೆ ಎಂದಿದ್ದಾರೆ.. ನಿಜಕ್ಕೂ ಮನುಷ್ಯತ್ವ ಎಂದರೆ ಇದು.. ದೊಡ್ಡ ಸ್ಟಾರ್ ಪಟ್ಟ.. ಕೋಟ್ಯಾಂತರ ಅಭಿಮಾನಿಗಳು.. ಆದರೆ ಒಂದು ಚೂರು ಅಹಂಭಾವವಿಲ್ಲದೇ ಚಿರು ಅವರ ಸಿನಿಮಾಗೆ ನಾನೇ ಡಬ್ಬಿಂಗ್ ಮಾಡಿಕೊಡುತ್ತೇನೆ ಎಂದಿದ್ದಾರೆ.. ಧೃವನಿಗೆ ಅಣ್ಣನಾಗಿ ನಿಂತಿದ್ದಾರೆ.. ನಿಜಕ್ಕೂ ನಿಮ್ಮ ದೊಡ್ಡ ಗುಣಕ್ಕೆ ಧನ್ಯವಾದಗಳು ಸರ್.. ಧೃವ ಅವರ ನೋವು ಕಡಿಮೆ ಮಾಡಲು ಸಾಧ್ಯವಾಗದಿದ್ದರೂ ತಾನು ಒಂಟಿ ಅಲ್ಲ ಎನ್ನುವ ಭಾವನೆಯಂತೂ ದರ್ಶನ್ ಅವರಿಂದ ದೂರಾಗಲಿದೆ..