Breaking News

ರಾಧಾರಮಣ ಧಾರಾವಾಹಿಯ ದೀಪಿಕಾ ಪಾತ್ರಧಾರಿ ಈಗೇನು ಮಾಡ್ತಿದ್ದಾರೆ ಗೊತ್ತಾ?

Advertisement

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ರಾಧಾ ರಮಣದಲ್ಲಿ ನಾಯಕ ರಮಣನ ಸೋದರತ್ತೆ ಸಿತಾರಾದೇವಿ ಮಗಳು ದೀಪಿಕಾ ಆಗಿ ನಟಿಸಿ ಕಿರುತೆರೆ ಲೋಕದಲ್ಲಿ ಮನೆ ಮಾತಾದ ಚೆಂದುಳ್ಳಿ ಚೆಲುವೆಯ ಹೆಸರು ಅನುಷಾ ಹೆಗ್ಡೆ. ಮೊದಲ ಧಾರಾವಾಹಿಯಲ್ಲಿಯೇ ಖಳನಾಯಕಿಯಾಗಿ ನಟಿಸಿ ಕಿರುತೆರೆ ಜಗತ್ತಿನಲ್ಲಿ ಹೊಸ ಅಲೆ ಸೃಷ್ಟಿ ಮಾಡಿದ್ದ ಚೆಂದುಳ್ಳಿ ಚೆಲುವೆ ಅನುಷಾ ಸದ್ಯ ಕನ್ನಡ ಕಿರುತೆರೆಯಿಂದ ದೂರವಾಗಿದ್ದು, ತೆಲುಗು ಕಿರುತೆರೆಯಲ್ಲಿ ಮೋಡಿ ಮಾಡುತ್ತಿದ್ದಾರೆ. ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೂರ್ಯಕಾಂತಂ ಧಾರಾವಾಹಿಯಲ್ಲಿ ನಾಯಕಿ ಸೂರ್ಯ ಆಗಿ ನಟಿಸುವ ಮೂಲಕ ಪರಭಾಷೆಯ ಕಿರುತೆರೆಯಲ್ಲಿ ನಟನಾ ಕಂಪನ್ನು ಪಸರಿಸುತ್ತಿರುವ ಅನುಷಾ ನಟನೆಯ ಹೊರತಾಗಿ ಅತ್ಯದ್ಭುತ ನೃತ್ಯಗಾರ್ತಿಯೂ ಹೌದು.

Advertisement

ನಟನೆಯ ಹೊರತಾಗಿ ನನಗೆ ನೃತ್ಯ ಎಂದರೆ ತುಂಬಾ ಇಷ್ಟ ಎಂದು ಹೇಳುವ ಮುದ್ದು ಮುಖದ ಚೆಲುವೆ ಅನುಷಾ ಭರತನಾಟ್ಯದಲ್ಲಿ ವಿದ್ವತ್ ಪದವಿಯನ್ನು ಪಡೆದಿದ್ದಾರೆ. “ನೃತ್ಯ ಎಂದ ಮೇಲೆ ಅದಕ್ಕೆ ಮುಖದಲ್ಲಿ ಮೂಡುವ ಭಾವನೆಗಳು ತುಂಬಾ ಮುಖ್ಯವಾಗುತ್ತದೆ. ಅದರಲ್ಲೂ ನೃತ್ಯ ಎಂದ ಮೇಲೆ ನವರಸಗಳು ಕೂಡಾ ಇರಲೇಬೇಕು. ಅದೇ ಕಾರಣದಿಂದ ನಟನಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಲಿಲ್ಲ”ಎಂದು ಹೇಳಿದ್ದಾರೆ ಅನುಷಾ.

ಸರಿಸುಮಾರು 800 ಕ್ಕೂ ಅಧಿಕ ವೇದಿಕೆಗಳಲ್ಲಿ ಭರತನಾಟ್ಯ ಕಾರ್ಯಕ್ರಮ ನೀಡಿರುವ ಅನುಷಾ ಬಣ್ಣ ಬಣ್ಣದ ಬದುಕು ಸಿನಿಮಾದಲ್ಲಿ ನೃತ್ಯ ನಿರ್ದೇಶಕಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಮಾತ್ರವಲ್ಲ ಇದರ ಜೊತೆಗೆ ಆ ಸಿನಿಮಾದಲ್ಲಿ ಆಕೆ ಅತಿಥಿ ಪಾತ್ರದಲ್ಲಿಯೂ ಆಕೆ ಬಣ್ಣ ಹಚ್ಚಿದ್ದಾರೆ. ಇದರ ಹೊರತಾಗಿ ಎನ್.ಎಚ್. 37 ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿರುವ ಮುದ್ದು ಮುಖದ ಚೆಲುವೆ ಅನುಷಾ ದೀಪಿಕಾ ಆಗಿ ಕನ್ನಡ ಕಿರುತೆರೆಯಲ್ಲಿ ಕಮಾಲ್ ಮಾಡಿದ್ದರು. ನಿನ್ನೇ ಪೆಳ್ಳಾಡಾತಾ ಧಾರಾವಾಹಿಯ ಮೂಲಕ ತೆಲುಗು ಕಿರುತೆರೆಗೆ ಕಾಲಿಟ್ಟಿರುವ ಮುದ್ದು ಮುಖದ ಚೆಲುವೆ ಇದೀಗ ಸೂರ್ಯ ಆಗಿ ಮೋಡಿ ಮಾಡುತ್ತಿದ್ದಾರೆ.

Advertisement

ಅನುಷಾ ಪತಿ ಕೂಡಾ ಕಿರುತೆರೆಯ ಫೇಮಸ್ಸು ನಟ!
ಸದ್ಯ ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಅನುಷಾ ಕಳೆದ ವರ್ಷ ತೆಲುಗು ಕಿರುತೆರೆ ನಟ ಪ್ರತಾಪ್ ಸಿಂಗ್ ಶಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ನಿನ್ನೇ ಪೆಳ್ಳಾಡಾತಾ ಎನ್ನುವ ತೆಲುಗು ಧಾರಾವಾಹಿಯಲ್ಲಿ ಪ್ರತಾಪ್ ಸಿಂಗ್ ಶಾ ಅವರಿಗೆ ನಾಯಕಿಯಾಗಿ ಅಭಿನಯಿಸಿದರು. ಧಾರಾವಾಹಿಯಲ್ಲಿ ಇವರಿಬ್ಬರನ್ನು ನೋಡಿದ ಅನೇಕರು ನಿಮ್ಮ ಜೋಡಿ ಚೆನ್ನಾಗಿದೆ, ಮದುವೆ ಆದರೆ ಚೆನ್ನ ಎಂದು ಹೇಳಿದ್ದರು. ಮುಂದೆ ಇಬ್ಬರ ಮನೆಯಲ್ಲಿ ಮದುವೆಯ ವಿಚಾರ ಬಂದಾಗ ಪ್ರತಾಪ್ ಹಾಗೂ ದೀಪಿಕಾ ಮದುವೆಯಾಗುವ ನಿರ್ಧಾರ ಮಾಡಿದರು. ರೀಲ್ ಜೋಡಿಯಾಗಿದ್ದ ಅನುಷಾ ಹಾಗೂ ಪ್ರತಾಪ್ ಇದೀಗ ರಿಯಲ್ ಲೈಫ್ ನಲ್ಲಿ ಸತಿ ಪತಿಗಳಾಗಿದ್ದಾರೆ. ಮಾತ್ರವಲ್ಲ ಇವರಿಬ್ಬರೂ ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ.
– ಅಹಲ್ಯಾ

Advertisement
Advertisement
Advertisement

About RJ News Kannada

Check Also

ಕಷ್ಟ ಎಂದು ಮನೆ ಮುಂದೆ ಬಂದವರಿಗಾಗಿ ಕಲ್ಲಿಗೆ ದುಡ್ಡು ಸುತ್ತಿ ಬಾಲ್ಕನಿಯಿಂದ ಎಸೆಯುತ್ತಿದ್ದರಂತೆ ಆ ಖ್ಯಾತ ನಟ…!

Advertisement ದೇವರ ದಯೆ, ಅದೃಷ್ಟ, ಶ್ರಮ ನಮ್ಮೊಂದಿಗೆ ಇದ್ದರೆ ಪ್ರಪಂಚದಲ್ಲಿ ನಮ್ಮಷ್ಟು ಪರಮಸುಖಿಗಳು ಮತ್ತೊಬ್ಬರು ಇರುವುದಿಲ್ಲ. ಆದರೆ ಎಷ್ಟು ಸಂಪಾದಿಸಿದರೂ, …

Leave a Reply

Your email address will not be published.

Recent Comments

No comments to show.