ಮೊನ್ನೆ ಮೊನ್ನೆಯಷ್ಟೇ ನಟಿ ಮೇಘನಾ ರಾಜ್ ಅವರಿಗೆ ಸರ್ಜಾ ಕುಟುಂಬ ಹಾಗೂ ಸುಂದರ್ ರಾಜ್ ಅವರ ಕುಟುಂಬದ ನಡುವೆ ಸರಳವಾಗಿ ಸೀಮಂತ ಶಾಸ್ತ್ರವನ್ನು ನೆರವೇರಿಸಲಾಗಿತ್ತು.. ಎಲ್ಲವೂ ಚಿರು ಆಸೆ ಪಟ್ಟ ರೀತಿಯಲ್ಲಿಯೇ ನೆರವೇರಿತ್ತು.. ನಂತರ ಅತ್ತಿಗೆಗಾಗಿ ಬೇಬಿ ಶೋವರ್ ಕಾರ್ಯಕ್ರಮವನ್ನು ಧೃವ ಸರ್ಜಾ ಅವರು ಆಯೋಜಿಸಿ ತುಂಬು ಗರ್ಭಿಣಿಗೆ ಸಂತೋಷ ನೀಡಿದ್ದರು.. ಇನ್ನೇನು ಕೆಲ ದಿನಗಳಲ್ಲಿ ಕುಟುಂಬಕ್ಕೆ ಚಿರು ಸರ್ಜಾರ ಪ್ರತಿರೂಪದ ಆಗಮನವಾಗಲಿದೆ.. ಈ ನಡುವೆ ಇದೀಗ ಮೇಘನಾ ರಾಜ್ ಚಿರು ಮತ್ತೆ ಉದಯಿಸಿದ ಸಿಹಿ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ..
ಹೌದು ಧೃವ ಸರ್ಜಾ ಹಾಗೂ ಮೇಘನಾ ರಾಜ್ ಇಬ್ಬರೂ ಸಹ ಚಿರು ಅವರ ಕುರಿತು ಅಭಿಮಾನಿಗಳೊಂದಿಗೆ ಒಳ್ಳೆಯ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.. ಎಲ್ಲರಿಗೂ ತಿಳಿದಂತೆ ಕಲೇದ ಆರು ತಿಂಗಳಿಂದ ಸಿನಿಮಾ ಇಂಡಸ್ಟ್ರಿ ಸ್ತಬ್ಧವಾಗಿತ್ತು.. ಯಾವುದೇ ಸಿನಿಮಾ ಬಿಡುಗಡೆಯಾಗಿಲ್ಲ.. ಆದರೆ ಮಾರ್ಚ್ ತಿಂಗಳಿನಲ್ಲಿ ಚಿರು ಸರ್ಜಾ ಅವರ ಶಿವಾರ್ಜುನ ಸಿನಿಮಾ ಬಿಡುಗಡೆಯಾಗಿತ್ತು.. ದುರ್ದೈವವೆಂದರೆ ಚಿರು ಸರ್ಜಾ ಅವರ ಕೈ ತುಂಬಾ ಸಿನಿಮಾ ಅವಕಾಶವಿದ್ದರೂ ಅಂದು ಬಿಡುಗಡೆಯಾದ ಶಿವಾರ್ಜುನ ಸಿನಿಮಾವೇ ಕೊನೆ ಸಿನಿಮಾವಾಗಿ ಹೋಯ್ತು.. ಆದರೆ ಅಂದು ಶಿವಾರ್ಜುನ ಸಿನಿಮಾ ಬಿಡುಗಡೆಯಾದ ಮರುದಿನವೇ ಲಾಕ್ ಡೌನ್ ಆದ ಕಾರಣ ಚಿತ್ರಮಂದಿರಗಳು ಬಂದ್ ಆದವು.. ಇದರಿಂದ ನಿರ್ಮಾಒಅಕರಿಗೆ ತೊಂದರೆಯಾಯಿತೆಂದು ಚಿರು ಸರ್ಜಾ ನೊಂದುಕೊಂಡಿದ್ದರಂತೆ..
ಇದೀಗ ಮತ್ತೆ ಚಿತ್ರಮಂದಿರಗಳನ್ನು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು ಇದೇ ಅಕ್ಟೋಬರ್ 15 ರಿಂದ ಚಿತ್ರಮಂದಿರಗಳನ್ನು ತೆರೆಯಬಹುದಾಗಿದೆ.. ಇದೀಗ ಈ ಸಮಯದಲ್ಲಿ ಚಿರು ಸರ್ಜಾ ಅವರ ಜೀವನದ ಕೊನೆಯ ಸಿನಿಮಾ ಶಿವಾರ್ಜುಮ ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತಿದೆ..
ಹೌದು ಈ ಕುರಿತು ಪೋಸ್ಟ್ ಮಾಡಿರುವ ಮೇಘನಾ ರಾಜ್ ಅವರು ಚಿರು ಮತ್ತೆ ಉದಯಿಸುತ್ತಿದ್ದಾರೆ.. ಚಿರು ಎಂದಿಗೂ ಚಿರಂಜೀವಿ.. ಇದೇ ಅಕ್ಟೋಬರ್ 16 ರಂದು ಶಿವಾರ್ಜುನ ಸಿನಿಮಾ ಮರು ಬಿಡುಗಡೆಯಾಗುತ್ತಿದೆ.. ಎಂದು ತಿಳಿಸಿದ್ದಾರೆ.. ಧೃವ ಸರ್ಜಾ ಅವರೂ ಸಹ ಶಿವಾರ್ಜುನ ಸಿನಿಮಾ ಮರು ಬಿಡುಗಡೆಯಾಗುತ್ತಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ..