ಲಾಕ್ ಡೌನ್ ಸಡಿಲಿಕೆಯಾದ ಬಳಿಕ ಧಾತಾವಾಹಿಗಳ ಚಿತ್ರೀಕರಣಕ್ಕೆ ಅವಕಾಶ ಕಲ್ಪಿಸಲಾಗಿದ್ದು ಕೆಲ ನಿಯಮಗಳ ಜೊತೆಗೆ ಎಂದಿನಂತೆ ಚಿತ್ರೀಕರಣ ನಡೆಯುತ್ತಿದ್ದು ಧಾರಾವಾಹಿಗಳ ಪ್ರಸಾರ ಆಗುತ್ತಿದೆ.. ಆದರೆ ಕಲಾವಿದರು ತಂತ್ರಜ್ಞರು ಎಲ್ಲರೂ ಸಹ ಸಕಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೂ ಸಹ ಭಯದಲ್ಲಿಯೇ ಕೆಲಸ ಮಾಡುವಂತಾಗಿದೆ.. ಕಾರಣ ಅವರಗಳ ಹೊಟ್ಟೆ ಪಾಡು ಸಹ ನಡೆಯಬೇಕಿದೆ.. ಕಲಾವಿದರೆಲ್ಲಾ ಸಿರಿವಂತರಲ್ಲ.. ಚಿತ್ರೋದ್ಯಮದ ಅನೇಕ ದಿನಗೂಲಿ ನೌಕರರು ಅದಾಗಲೇ ಬೀದಿಗೆ ಬಿದ್ದಿದ್ದಾರೆ.. ಅಕಸ್ಮಾತ್ ಕೊಂಚ ಹೆಚ್ಚು ಕಡಿಮೆ ಆದರೂ ಸಹ ಸಂಪೂರ್ಣ ಚಿತ್ರೀಕರಣ ಸ್ಥಗಿತಗೊಳ್ಳುತ್ತದೆ..
ಇದೀಗ ಅಂತಹುದೇ ಘಟನೆ ಲಕ್ಷ್ಮಿ ಬಾರಮ್ಮ ಧಾರಾವಾಹಿಯ ನಟಿ ಚಿನ್ನು ಅಭಿನಯಿಸುತ್ತಿದ್ದ ಧಾರಾವಾಹಿಯ ಚಿತ್ರೀಕರಣದಲ್ಲಿ ನಡೆದಿದೆ.. ಹೌದು ಲಕ್ಷ್ಮಿ ಬಾರಮ್ಮ ಖ್ಯಾತಿಯ ನಟಿ ಚಿನ್ನು.. ರಶ್ಮಿ ಅಭಿನಯದ ತೆಲುಗಿನ ಪೌರ್ಣಮಿ ಧಾರಾವಾಹಿಯ ನಟನಿಗೆ ಕೊರೊನಾ ಪಾಸಿಟಿವ್ ಬಂದಿದೆ.. ಆ ನಟ ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದು ತಂತ್ರಜ್ಞರ ಜೊತೆ ಸಂಪರ್ಕದಲ್ಲಿದ್ದರು.. ಅದೇ ಕಾರಣಕ್ಕೆ ಇದೀಗ ಆತ ಅಭಿನಯಿಸುತ್ತಿದ್ದ ಧಾರಾವಾಹಿಗಳು ಹಾಗೂ ಆತನ ಸಂಪರ್ಕದಲ್ಲಿದ್ದ ತಂತ್ರಜ್ಞರು ಕೆಲಸ ಮಾಡುತ್ತಿದ್ದ ಎಲ್ಲಾ ಧಾರಾವಾಹಿಗಳ ಚಿತ್ರೀಕರಣವನ್ನು ರದ್ದು ಮಾಡಲಾಗಿದ್ದು ಎಲ್ಲರನ್ನು ಕ್ವಾರಂಟೈನ್ ಮಾಡಲಾಗಿದೆ.. ಜೊತೆಗೆ ಪ್ರತೊಯೊಬ್ಬರೂ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲೇ ಬೇಕೆಂದು ತಿಳಿಸಲಾಗಿದೆ..
ಸದ್ಯ ನಟಿ ರಶ್ಮಿ ಕೂಡ ಕ್ವಾರಂಟೈನ್ ನಲ್ಲಿ ಇದ್ದು ಕೆಲ ದಿನಗಳ ನಂತರ ಅವರೂ ಸಹ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕಿದೆ.. ಕಲಾವಿದರು ಹಾಗೂ ತಂತ್ರಜ್ಞರು ಒಂದೇ ಧಾರಾವಾಹಿಗೆ ಸೀಮಿತವಾಗಿರುವುದಿಲ್ಲ.. ಅನೇಕ ಧಾರಾವಾಹಿ ಸೆಟ್ ಗಳಲ್ಲಿ ಓಡಾಡುತ್ತಿರುತ್ತಾರೆ.. ಕನ್ನಡದ ಎಲ್ಲಾ ಧಾರಾವಾಹಿಗಳ ಪ್ರೊಡಕ್ಷನ್ ಹೌಸ್ ಗಳು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.. ಅಕಸ್ಮಾತ್ ಒಬ್ಬರಿಗ್ ಸೋಂಕು ಕಾಣಿಸಿಕೊಂಡರೂ ಸಂಪೂರ್ಣ ಎಲ್ಲಾ ಧಾರಾವಾಹಿಗಳು ಕೂಡ ರದ್ದು ಮಾಡಬೇಕಾದ ಸಂದರ್ಭ ಎದುರಾಗಲಿದೆ.. ದೇವರ ದಯೆಯಿಂದ ಅಂತಹ ಯಾವುದೇ ಘಟನೆ ನಡೆಯದಿರಲಿ..