Breaking News

ಎಸ್ ಪಿ ಬಿ ಅವರ ಚಿಕಿತ್ಸೆಗಾಗಿ ದೊಡ್ಡ ಮೊತ್ತದ ಬಿಲ್ ಕೊಟ್ಟ ಆಸ್ಪತ್ರೆ.. ಸ್ಪಷ್ಟನೆ ನೀಡಿದ ಪುತ್ರ ಚರಣ್..

Advertisement

ಗಾನ ಗಂಧರ್ವ ಎಸ್ ಪಿ ಬಾಲ ಸುಬ್ರಹ್ಮಣ್ಯಂ ಅವರು ಇಲ್ಲವಾಗಿ ಮೂರು ದಿನಗಳು ಆಗಿವೆ ಅದಾಗಲೇ ಎಸ್ ಪಿ ಬಿ ಅವರ ಕುರಿತು ಸಾಕಷ್ಟು ಸುದ್ದಿಗಳು ಹಬ್ಬುತ್ತಿವೆ.. ಹೌದು ಎಸ್ ಪಿ ಬಿ ಅವರಿಲ್ಲದ ಸುದ್ದಿ ಕೇಳಿ ಇಡೀ ದೇಶವೇ ಕಣ್ಣೀರಿಟ್ಟಿತ್ತು.. ಇನ್ನು ಅವರ ಕುಟುಂಬಕ್ಕೆ ಇನ್ನೂ ಸಹ ವಿಚಾರವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗಿಲ್ಲ.. ಎಸ್ ಪಿ ಬಿ ಗುಣಮುಖರಾಗಿಯೇ ಮರಳುವರು ಎಂಬ ನಂಬಿಕೆ ಹುಸಿಯಾಗಿ ಹೋಯ್ತು.. ಇನ್ನೂ ಸಹ ನೋವಿನಲ್ಲಿಯೇ ಇರುವ ಕುಟುಂಬಕ್ಕೆ ಇದೀಗ ಮತ್ತೊಂದು ನೋವು ಎದುರಾಗಿದೆ..

Advertisement

ಹೌದು ಎಸ್ ಪಿ ಬಿ ಅವರಿಗೆ 52 ದಿನಗಳ ವರೆಗೆ ಚಿಕಿತ್ಸೆ ನೀಡಿದ ಸಲುವಾಗಿ ಎಂ ಜಿ ಎಂ ಆಸ್ಪತ್ರೆಯವರು ಕೊಟ್ಟಿರುವ ಬಿಲ್ ಬಗ್ಗೆ ದೊಡ್ಡ ಸುದ್ದಿಯಾಗಿದೆ.. ಹೌದು ಆಸ್ಪತ್ರೆಯವರು ದೊಡ್ಡ ಮೊತ್ತದ ಬಿಲ್ ನೀಡಿದ್ದಾರೆ.. ಅದನ್ನು ಕಟ್ಟಲಾಗದೆ ಎಸ್ ಪಿ ಬಿ ಕುಟುಂಬ ತಮಿಳು ನಾಡು ಸರ್ಕಾರ ಹಾಗೂ ಉಪರಾಷ್ಟ್ರಪತಿಯವರಲ್ಲಿ ಮನವಿ ಮಾಡಿದ್ದಾರೆ ಎಂಬ ಗಾಳಿ ಸುದ್ದಿ ಹಬ್ಬಿತ್ತು.. ಆದರೆ ಅಸಲಿ ವಿಚಾರ ಬೇರೆಯೇ ಇತ್ತು.. ಹೌದು ಇದೆಲ್ಲವೂ ಕಿ ಡಿಗೇಡಿಗಳು ಸಮ್ಮನೆ ಹಬ್ಬಿಸಿದ ಸುದ್ದಿಯಾಗಿದ್ದು ಈ ಬಗ್ಗೆ ಇದೀಗ ಪುತ್ರ ಚರಣ್ ನೋವಿನಿಂದಲೇ ವಿಚಾರವನ್ನು ಸ್ಪಷ್ಟ ಪಡಿಸಿದ್ದಾರೆ.. ಅಷ್ಟೇ ಅಲ್ಲದೇ ಎಂ ಜಿ ಎಂ ಆಸ್ಪತ್ರೆ ನೀಡಿರುವ ಬಿಲ್ ಬಗ್ಗೆ ಮಾತನಾಡಿದ್ದಾರೆ..

Advertisement

ಹೌದು “ಅಪ್ಪ ಆಗಸ್ಟ್ 5 ರಿಂದ ಸೆಪ್ಟೆಂಬರ್ 26 ರವರೆಗೂ ಆಸ್ಪತ್ರೆಯಲ್ಲಿ ಇದ್ದರು.. ಆಸ್ಪತ್ರೆಯು ದೊಡ್ಡ ಮೊತ್ತದ ಬಿಲ್ ನೀಡಿದ್ದು ಇದನ್ನಿ ಭರಿಸಲಾಗದೆ ನಾವು ತಮಿಳು ನಾಡು ಸರ್ಕಾರ ಹಾಗೂ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ಬಳಿ ಹೋಗಿದ್ದೆವು ಎಂಬ ಸುದ್ದಿ ಹಬ್ಬಿದೆ.. ಆದರೆ ಇದೆಲ್ಲವೂ ಸು ಳ್ಳುಸುದ್ದಿಯಾಗಿದೆ.. ಆ ರೀತಿಯಾಗಿ ಏನೂ ನಡೆದಿಲ್ಲ.. ಸುಮ್ಮನೆ ಯಾಕೆ ಈ ರೀತಿ ಸುದ್ದಿ ಹಬ್ಬಿಸುವರೋ ತಿಳಿದಿಲ್ಲ..

Advertisement

ಆಸ್ಪತ್ರೆಯವರು ಅಪ್ಪನನ್ನು ಬಹಳ ಚೆನ್ನಾಗಿ ನೋಡಿಕೊಂಡಿದ್ದರು.. ಅವರಿಗೆ ನಮ್ಮ ಕುಟುಂಬ ಧನ್ಯವಾದಗಳನ್ನು ತಿಳಿಸುತ್ತದೆ.. ಇನ್ನು ಅಪ್ಪನ ಆಸ್ಪತ್ರೆ ಬಿಲ್ ಕುರಿತು ನಾನು ಹಾಗೂ ಆಸ್ಪತ್ರೆಯವರು ಸೇರಿ ಒಂದು ಸುದ್ದಿ ಗೋಷ್ಠಿಯನ್ನು ನಡೆಸುತ್ತೇವೆ.. ಆಗ ಎಲ್ಲವನ್ನೂ ಸ್ಪಷ್ಟ ಪಡಿಸುತ್ತೇವೆ.. ಯಾರೋ ಹಬ್ಬಿಸಿದ ಸುದ್ದಿಗೆ ಸ್ಪಷ್ಟನೆ ನೀಡುವ ಸಲುವಾಗಿ ಇಷ್ಟೆಲ್ಲಾ ಮಾಡಬೇಕಾಗಿದೆ ಎಂದು ನೋವಿನಿಂದಲೇ ಎಸ್ ಪಿ ಬಿ ಅವರ ಮಗ ಚರಣ್ ಬೇಸರ ವ್ಯಕ್ತ ಪಡಿಸಿದರು.. ಅಷ್ಟೇ ಅಲ್ಲದೇ ಈ ರೀತಿ ಸುದ್ದಿ ಹಬ್ಬಿಸಿದವರನ್ನು ಸಹ ನಾನು ಕ್ಷಮಿಸುತ್ತೇನೆ.. ಮುಂದೆ ಈ ರೀತಿ ಮಾಡಬೇಡಿ ಎಂದು ಆಸ್ಪತ್ರೆಯ ಬಿಲ್ ವಿಚಾರಕ್ಕೆ ತೆರೆ ಎಳೆದರು..

Advertisement
Advertisement
Advertisement

About admin

Check Also

ടെലിഗ്രാമിലെ ഞാന്‍ ഇല്ല.. എന്റെ പേരും പറഞ്ഞ് മറ്റു തരത്തില്‍ ഉള്ള മെസ്സേജ് അയക്കുന്നത് ഏതോ വ്യാജന്‍ ആണ്.. എന്‍റെ ആരാധകര്‍ സൂക്ഷിക്കുക.. ഞെട്ടിക്കുന്ന മുന്നറിയിപ്പുമായി മാളവിക..

Advertisement സോഷ്യൽ മീഡിയയിൽ സെലിബ്രിറ്റികൾ നേരിടുന്ന ഏറ്റവും വലിയ പ്രശ്‌നങ്ങളിലൊന്നാണ് വ്യാജ പ്രൊഫൈലുകൾ. മിക്ക സെലിബ്രിറ്റികൾക്കും ഇത്തരം അവസ്ഥകൾ ഉണ്ടായിട്ടുണ്ട്. …

Leave a Reply

Your email address will not be published.

Recent Comments

No comments to show.