ಬಿಗ್ ಬಾಸ್ ಸೀಸನ್ ಎಂಟರಲ್ಲಿ ಆಗಾಗ ಸರ್ಪ್ರೈಸ್ ಗಳು ಬರುತ್ತಲೇ ಇವೆ.. ಈಗಾಗಲೇ ಸ್ಪರ್ಧಿಗಳ ಆಯ್ಕೆ ವಿಚಾರದಲ್ಲಿ ಈ ಸೀಸನ್ ನಲ್ಲಿ ಪ್ರೇಕ್ಷಕರಿಂದ ಬಹಳಷ್ಟು ಮೆಚ್ಚುಗೆಯೂ ವ್ಯಕ್ತವಾಗಿತ್ತು.. ಆದರೆ ಕಳೆದ ವಾರ ವೈಲ್ಡ್ ಕಾರ್ಡ್ ಮೂಲಕ ಮನೆಗೆ ಆಗಮಿಸಿದ ಚಕ್ರವರ್ತಿ ಚಂದ್ರಚೂಡ ಯಾಕಾದರು ಬಂದರೋ ಎಂದು ಕೆಲವರಿಗೆ ಅನಿಸಿದರೆ ಮತ್ತೆ ಕೆಲವರಿಗೆ ಆತನಿಂದ ಮನರಂಜನೆ ಎನಿಸಿದ್ದೂ ಉಂಟು.. ಆದರೀಗ ಬಿಗ್ ಬಾಸ್ ಮನೆಯೊಳಕ್ಕೆ ಮತ್ತೆರೆಡು ವೈಲ್ಡ್ ಕಾರ್ಡ್ ಎಂಟ್ರಿಯಾಗಿದೆ..
ಹೌದು ಬಿಗ್ ಬಾಸ್ ಸೀಸನ್ ಎಂಟರ ಆರನೇ ವಾರದಲ್ಲಿ ಇಬ್ಬರು ಮಹಿಳಾ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಬಿಗ್ ಮನೆಯೊಳಕ್ಕೆ ಕಾಲಿಟ್ಟಿದ್ದಾರೆ.. ಆದರೆ ಮಹಿಳಾ ಸ್ಪರ್ಧಿ ಬರಲಿ ಎನ್ನುತ್ತಿದ್ದ ಮಂಜು ಪಾವಗಡ ಅವರಿಗೆ ಶಾಕ್ ಆಗಿದೆ.. ಹೌದು ಒಬ್ಬರು ಮಹಿಳಾ ಸ್ಪರ್ಧಿ ಮುಖ್ಯ ದ್ವಾರದ ಮೂಲಕ ಮನೆಯೊಳಗೆ ಎಂದಿನಂತೆ ಎಂಟ್ರಿ ಕೊಟ್ಟು ಸರ್ಪ್ರೈಸ್ ಕೊಟ್ಟರು.. ಮನೆಯ ಸದಸ್ಯರು ಸಹ ಮನಸ್ಸಿನೊಳಗೆ ಕೊಂಚ ಕುತೂಹಲ ಆತಂಕ ಇದ್ದರೂ ಸಹ ಮೇಲೆ ಬಹಳ ಸಂತೋಷ ವ್ಯಕ್ತಪಡಿಸಿದ್ದರು.ಮ್ ಹೀಗಿರುವಾಗಲೇ ಬಿಗ್ ಬಾಸ್ ಧ್ವನಿ ಮೂಲಕ ಮಂಜು ಪಾವಗಡ ಅವರನ್ನು ಕನ್ಫೆಷನ್ ರೂಮಿನೊಳಗೆ ಕರೆಯಲಾಯಿತು..
ಅತ್ತ ಕನ್ಫೆಷನ್ ರೂಮಿನೊಳಗೆ ಹೋದ ಮಂಜು ಪಾವಗಡ ಮರಳಿ ಬಿಗ್ ಬಾಸ್ ಮನೆಗೆ ಬರಲೇ ಇಲ್ಲ.. ಬಂದದ್ದು ಮಾತ್ರ ಮತ್ತೊಬ್ಬ ಮಹಿಳಾ ಸದಸ್ಯೆ.. ಹೌದು ವೈಲ್ಡ್ ಕಾರ್ಡ್ ಮೂಲಕ ಮತ್ತೊಬ್ಬ ಮಹಿಳಾ ಸದಸ್ಯೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು.. ಆದರೆ ಎಲ್ಲರಿಗೂ ಮಂಜು ಪಾವಗಡ ಅವರದ್ದೇ ಆತಂಕವಾಗಿದ್ದು ಮಂಜು ಎಲ್ಲಿ ಎಂದು ಹುಡುಕಾಡಿದ್ದಾರೆ..
ಇನ್ನೂ ಇತ್ತ ಇದ್ದ ಮೂರು ಮತ್ತೊಂದು ಮಹಿಳಾ ಸ್ಪರ್ಧಿಗಳ ನಡುವೆ ಮತ್ತಿಬ್ಬರು ಮಹಿಳಾ ಸದಸ್ಯರ ಆಗಮನವಾಗಿದ್ದು ಕಾಂಪಿಟೇಷನ್ ಎಂದು ಮಹಿಳಾ ಮಣಿಗಳಿಗೆ ಅನಿಸಿದ್ದರೆ ಅತ್ತ ಕಣ್ಣಿಗೆ ತಂಪಾಯ್ತು ಅಂತ ನಮ್ ಪುರುಷ ಸದಸ್ಯರು ಒಳಗೊಳಗೆ ಸಂತೋಷ ಪಟ್ಟಿದ್ದಂತೂ ಸುಳ್ಳಲ್ಲ.. ಆದರೆ ಕನ್ಫೆಷನ್ ರೂಮಿಗೆ ಹೋದ ಮಂಜು ಪಾವಗಡ ಎಲ್ಲಿ ಹೋದರು.. ಸೀಕ್ರೆಟ್ ರೂಮಾ? ಅಥವಾ ಮರಳಿ ಬರುವರಾ? ಎಂದು ಕಾದು ನೋಡಬೇಕಿದೆ. ಜೊತೆಗೆ ಬಿಗ್ ಬಾಸ್ ಮನೆ ಪ್ರವೇಶ ಮಾಡಿರುವ ಆ ಇಬ್ಬರು ಮಹಿಳಾ ಮಣಿಗಳು ಯಾರೆಂಬ ಕುತೂಹಲಕ್ಕೂ ಸಹ ಇಂದಿನ ಸಂಚಿಕೆಯಲ್ಲಿ ತೆರೆ ಬೀಳಲಿದೆ..