Breaking News

ಅನಾಥವಾಗಿ ಕಸದ ರಾಶಿ ಪಕ್ಕ ದೊರೆತ ಬಿ. ಜಯ ಶ’ವ… ಕುಟುಂಬದ ಸದಸ್ಯರು ಹೇಳೋದೇನು, ಯಾವುದು ನಿಜ, ಯಾವುದು ಸುಳ್ಳು…?

Advertisement

‘ತಾಯಿ ತಾನು ಹೆತ್ತ ಹತ್ತು ಮಕ್ಕಳನ್ನಾದರೂ ಪೋಷಿಸುತ್ತಾಳೆ, ಆದರೆ ಮುಂದೆ ಅದೇ ಮಕ್ಕಳು ಒಬ್ಬ ತಾಯಿಯನ್ನು ನೋಡಿಕೊಳ್ಳುವುದಿಲ್ಲ’ ಎಂಬ ಮಾತಿದೆ. ಇಂತಹ ಎಷ್ಟೋ ಉದಾಹರಣೆಗಳನ್ನು ನಾವು ನೋಡಿದ್ದೇವೆ. ಗರ್ಭಿಣಿಯಾದಾಗಿನಿಂದ ಮಗುವನ್ನು ತನ್ನ ಒಡಲಲ್ಲಿ ಇರಿಸಿಕೊಂಡು ಪೋಷಿಸಿ, ಜೀವವನ್ನೂ ಲೆಕ್ಕಿಸದೆ ಮಗುವಿಗೆ ಜನ್ಮ ನೀಡುತ್ತಾಳೆ. ಮಗು ಮಡಿಲಿಗೆ ಬಂದಾಗ ಕಷ್ಟಪಟ್ಟು ಮಗುವನ್ನು ಬೆಳೆಸುತ್ತಾಳೆ. ತಾನು ತಿನ್ನದಿದ್ದರೂ ಮಕ್ಕಳು ಹೊಟ್ಟೆ ತುಂಬಾ ತಿಂದು ಸುಖವಾಗಿದ್ದರೆ ಸಾಕು ಎಂದು ಬಯಸುತ್ತಾಳೆ. ವಿದ್ಯೆ ಬುದ್ಧಿ ನೀಡಿ ಉನ್ನತ ಸ್ಥಾನಕ್ಕೆ ಏರಿಸುತ್ತಾಳೆ. ಆದರೆ ಮುಂದೆ ಅದೇ ಮಕ್ಕಳು ತನಗೆ ಇಷ್ಟೆಲ್ಲಾ ತ್ಯಾಗ ಮಾಡಿದ ಅಮ್ಮನನ್ನು ಕಾಳಜಿ ಮಾಡಲು ಹಿಂಜರಿಯುತ್ತಾರೆ. ಅದರಲ್ಲೂ ಈ ಕೊರೊನಾ ಸಮಸ್ಯೆ ಆರಂಭವಾದಾಗಿನಿಂದ ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಜನ್ಮ ನೀಡಿದ ತಂದೆ-ತಾಯಿಗಳು ಕೊರೊನಾಗೆ ಬಲಿಯಾದರೆ ಅವರನ್ನು ಕನಿಷ್ಠ ಕೊನೆಯ ಬಾರಿ ನೋಡಲು ಮಕ್ಕಳು ಬರುತ್ತಿಲ್ಲ.

Advertisement

ಇನ್ನು ಮೊನ್ನೆಯಷ್ಟೇ ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ. ಜಯ ನಿ’ಧನರಾಗಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇತ್ತೀಚೆಗೆ ಪಾರ್ಶ್ವವಾಯುಗೆ ಕೂಡಾ ತುತ್ತಾಗಿದ್ದರು. ಈ ಸುದ್ದಿ ತಿಳಿದ ಸಿನಿಪ್ರಿಯರು ಬೇಸರ ವ್ಯಕ್ತಪಡಿಸಿದ್ದರು. ಆದರೆ ನಿನ್ನೆ ಬೆಳಗ್ಗೆ ಮತ್ತೊಂದು ಸುದ್ದಿ ಹರಿದಾಡಿತ್ತು. ಕೆಲವು ದಿನಗಳ ಹಿಂದೆ ಪಾರ್ಶ್ವವಾಯುಗೆ ತುತ್ತಾದ ಬಿ.ಜಯಾ ಅವರನ್ನು ಮನೆಯವರು ನಿರ್ಲಕ್ಷ್ಯದಿಂದ ಆಶ್ರಮಕ್ಕೆ ಬಿಟ್ಟು ಬಂದಿದ್ದರು. ಆದರೆ ಆಶ್ರಮಕ್ಕೆ ಸೇರಿದ ಮರುದಿನವೇ ಅವರು ನಿಧನರಾಗಿದ್ಧಾರೆ. ಆ್ಯಂಬುಲೆನ್ಸ್ ಡ್ರೈವರ್ ಜಯ ಅವರ ಕಳೇಬರವನ್ನು ರುದ್ರ’ಭೂಮಿಗೆ ತಂದು ಎಷ್ಟು ಹೊತ್ತು ಕಾದು ಕುಳಿತರೂ ಕುಟುಂಬದವರು ಬರದ ಕಾರಣ ಶ’ವವನ್ನು ಅಲ್ಲೇ ಬಿಟ್ಟು ಹೋಗಿದ್ದಾನೆ. ರಸ್ತೆ ಬದಿ ಯಾವುದೋ ಅನಾಥ ಶ’ವ ಇದ್ದದ್ದನ್ನು ನೋಡಿ ಗಾಬರಿಗೊಂಡ ಸ್ಥಳೀಯರು ನಂತರ ಅದು ಬಿ. ಜಯ ಎಂದು ತಿಳಿದು ತಾವೇ ವಿಧಿ ವಿಧಾನಗಳನ್ವಯ ಅಂತ್ಯಕ್ರಿಯೆ ಮಾಡಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಈ ಸುದ್ದಿ ಕೇಳಿ ಜನರು ಬಿ. ಜಯ ಮನೆಯವರಿಗೆ ಹಿಡಿಶಾಪ ಹಾಕಿದ್ದರು. ಆದರೆ ಅವರ ಕುಟುಂಬದವರು ತಮ್ಮ ಮೇಲಿನ ಈ ಅಪವಾದವನ್ನು ನಿರಾಕರಿಸಿದ್ದಾರೆ.

ನಿನ್ನೆ ವೈರಲ್ ಆಗಿದ್ದ ವಿಡಿಯೋ ಇಷ್ಟೆಲ್ಲಾ ವದಂತಿ ಹಬ್ಬಲು ಕಾರಣವಾಯ್ತು. ಈ ವಿಡಿಯೋದಲ್ಲಿ ಜಯ ಅವರ ಪಾರ್ಥೀವ ಶರೀರವನ್ನು ಕಸದ ರಾಶಿ ಪಕ್ಕ ಇಡಲಾಗಿದೆ. ಅಲ್ಲಿದ್ದ ಕೆಲವರು ಚಿತ್ರರಂಗದವರನ್ನು ದೂಷಿಸುತ್ತಿದ್ದಾರೆ. ಆದರೆ, ಜಯಾ ಅವರ ತಮ್ಮನ ಮಗಳು (ನಿರ್ದೇಶಕ ಮಲ್ಲೇಶ್ ಮಗಳು) ನಿನ್ನೆ ಸಂಜೆ ಫೇಸ್​​ಬುಕ್ ಲೈವ್ ಬಂದು ಅಲ್ಲಿ ನಡೆದ ವಿಚಾರವನ್ನು ತಿಳಿಸಿದ್ದಾರೆ. “ಅತ್ತೆ ತೀರಿಕೊಂಡಾಗ ಅವರನ್ನು ನೋಡಲು ಯಾರೂ ಬರುವುದು ಬೇಡ ಎಂದು ನಾವು ಮೊದಲೇ ತಿಳಿಸಿದ್ದೆವು. ದೇಹವನ್ನು ರುದ್ರ’ಭೂಮಿಗೆ ಕೊಂಡೊಯ್ದಾಗ ಅಲ್ಲಿನ ನಿಯಮದ ಪ್ರಕಾರ ನಾವು ಹೊರಗಡೆಯೇ ಅಂತಿಮ ವಿಧಿ ವಿಧಾನಗಳನ್ನು ಮುಗಿಸಿ ಒಳಗೆ ಹೋದರೆ ಅವರು ತಕ್ಷಣವೇ ಶವ ಸುಡುತ್ತಾರೆ. ಅದರಂತೆ ರಸ್ತೆ ಪಕ್ಕ ನಾವು ಎಲ್ಲಾ ಕಾರ್ಯಗಳನ್ನು ಮುಗಿಸಿ ಅಲ್ಲೇ ಪಕ್ಕದಲ್ಲೇ ಇದ್ದೆವು. ಆದರೆ ಕೆಲವರು ಶ’ವದ ವಿಡಿಯೋ ಮಾತ್ರ ರೆಕಾರ್ಡ್ ಮಾಡಿ ಇಲ್ಲಸಲ್ಲದ ಸುದ್ದಿ ಹಬ್ಬಿಸುತ್ತಿದ್ದಾರೆ.”

Advertisement

“ಮೇ 29 ರಂದು ನಮ್ಮ ಅತ್ತೆಗೆ ಸ್ಟ್ರೋಕ್ ಆದಾಗಿನಿಂದ ಆಸ್ಪತ್ರೆಗೆ ಸೇರಿಸಿ 20 ದಿನಗಳ ಕಾಲ ಚಿಕಿತ್ಸೆ ಕೊಡಿಸಿ ಲಕ್ಷಾಂತರ ಹಣ ಬಿಲ್ ಪಾವತಿಸಿದ್ದೇವೆ. ನಾವು ಅವರನ್ನು ಎಂದಿಗೂ ನಿರ್ಲಕ್ಷಿಸಿಲ್ಲ. ಆದರೆ ಈ ರೀತಿ ನಮ್ಮ ಮೇಲೆ ಅಪ ಪ್ರಚಾರ ಮಾಡಿದವರಿಗೆ ಯಾವ ಸಂತೋಷ ಸಿಗುತ್ತದೆ…? ನಮಗೆ ಬಹಳ ನೋವಾಗಿದೆ. ದಯವಿಟ್ಟು ಯಾರೂ ಸುಳ್ಳು ಸುದ್ದಿಯನ್ನು ನಂಬಬೇಡಿ. ರುದ್ರ’ಭೂಮಿಗೆ ಬಂದಿದ್ದವರು ಬಿ.ಜಯ ಇನ್ನಿಲ್ಲ ಎಂಬ ವಿಚಾರ ತಿಳಿದು ಬಹಳ ಬೇಸರ ವ್ಯಕ್ತಪಡಿಸಿ ಅಂತಿಮ ದರ್ಶನ ಪಡೆದರು. ನಂತರ ನಾವೂ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದೆವು” ಎಂದು ತಿಳಿಸಿದ್ಧಾರೆ.

Advertisement

ಇಷ್ಟಾದರೂ ಕೆಲವರು ಇದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಮೊದಲು ವೈರಲ್ ಆದ ವಿಡಿಯೋದಲ್ಲೇ ಎಲ್ಲಾ ಸ್ಪಷ್ಟವಾಗಿ ಕಾಣುತ್ತಿದೆ. ಕಸದ ರಾಶಿ ಪಕ್ಕ ಶ’ವ ಇದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಕುಟುಂಬದವರು ಬಂದು ಅಂತ್ಯಕ್ರಿಯೆ ನೆರವೇರಿಸಿದ್ದಾರೆ ಎನ್ನುತ್ತಿದ್ದಾರೆ. ಆದರೆ ಯಾವುದು ಸುಳ್ಳು…ಯಾವುದು ನಿಜ ಎಂಬುದು ಬಿ. ಜಯ ಕುಟುಂಬದವರಿಗೇ ಗೊತ್ತು.

-ರಕ್ಷಿತ ಕೆ.ಆರ್. ಸಾಗರ

Advertisement
Advertisement
Advertisement

About RJ News Kannada

Check Also

ಕಷ್ಟ ಎಂದು ಮನೆ ಮುಂದೆ ಬಂದವರಿಗಾಗಿ ಕಲ್ಲಿಗೆ ದುಡ್ಡು ಸುತ್ತಿ ಬಾಲ್ಕನಿಯಿಂದ ಎಸೆಯುತ್ತಿದ್ದರಂತೆ ಆ ಖ್ಯಾತ ನಟ…!

Advertisement ದೇವರ ದಯೆ, ಅದೃಷ್ಟ, ಶ್ರಮ ನಮ್ಮೊಂದಿಗೆ ಇದ್ದರೆ ಪ್ರಪಂಚದಲ್ಲಿ ನಮ್ಮಷ್ಟು ಪರಮಸುಖಿಗಳು ಮತ್ತೊಬ್ಬರು ಇರುವುದಿಲ್ಲ. ಆದರೆ ಎಷ್ಟು ಸಂಪಾದಿಸಿದರೂ, …

Leave a Reply

Your email address will not be published.

Recent Comments

No comments to show.