ಸ್ಯಾಂಡಲ್ವುಡ್ ಡ್ರ’ಗ್ ವಿಚಾರಕ್ಕೆ ದಿನದಿಂದ ದಿನಕ್ಕೆ ಸ್ಪೋ ಟಕ ತಿರುವುಗಳು ಸಿಗುತ್ತಿವೆ.. ಹೌದು ರಾಗಿಣಿ ಆಯ್ತು.. ಸಂಜನಾ ಆಯ್ತು.. ಅವರಿಬ್ಬರಿಗೂ ನ್ಯಾಯಾಂಗ ಬಂ ಧನವಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದೂ ಆಯ್ತು..
ಆನಂತರ ದಿಗಂತ್ ಹಾಗೂ ಐಂದ್ರಿತಾ ರೈ ಅವರನ್ನು ಸಿಸಿಬಿ ವಿಚಾರಣೆ ನಡೆಸಿ ಮರಳಿ ಕಳುಹಿಸಿದ್ದರು.. ನಂತರ ಕೆಲ ದಿನಗಳ ಹಿಂದೆ ಸಾಲು ಸಾಲು ಕಿರುತೆರೆ ಕಲಾವಿದರ ಹೆಸರು ಡ್ರ’ಗ್ ಜಾಲದಲ್ಲಿ ಕೇಳಿ ಬಂದಿದ್ದು ಐ ಎಸ್ ಡಿ ಅವರೆಲ್ಲರನ್ನೂ ವಿಚಾರಣೆಗೆ ಒಳಪಡಿಸಿತ್ತು.. ಆದರೆ ನಿನ್ನೆ ಮಾತ್ರ ಅಕ್ಷರಶಃ ಕಿರುತೆರೆಗೆ ದೊಡ್ಡ ಶಾಕ್ ಆಗಿದ್ದಂತೂ ಸತ್ಯ.. ಹೌದು ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರು ಡ್ರ’ಗ್ ಜಾಲದಲ್ಲಿ ಸಿಕ್ಕಿಕೊಂಡಿರುವ ಮಾಹಿತಿ ಹೊರಬಿತ್ತು.. ಹೌದು ಮಂಗಳೂರಿ ಸಿಸಿಬಿ ಪೊಲೀಸರು ಅದಾಗಲೇ ಹದಿನೈದು ದಿನಗಳ ಹಿಂದೆ ಕಿಶೋರ್ ಶೆಟ್ಟಿ ಹಾಗೂ ತರುಣ್ ಎನ್ನುವವರನ್ನು ವಶಕ್ಕೆ ಪಡೆದಿದ್ದರು..
ಅವರಿಬ್ಬರೂ ಡ್ರ’ಗ್ ಪೆಡ್ಲ ರ್ ಗಳಾಗಿದ್ದು ಸಾಕ್ಷಿ ಸಮೇತ ಸಿಕ್ಕಿ ಬಿದ್ದಿದ್ದರು.. ಆ ಇಬ್ಬರು ನಿರೂಪಕಿ ಅನುಶ್ರೀ ಅವರ ಹೆಸರನ್ನು ಬಾಯಿಬಿಟ್ಟಿದ್ದರು.. ಆದರೆ ತಕ್ಷಣ ಯಾವುದೇ ಕ್ರಮ ಕೈಗೊಳ್ಳದೆ ಸರಿಯಾದ ಸಾಕ್ಷಿಗಳನ್ನು ಕಲೆ ಹಾಕಿ ನಿನ್ನೆಯಷ್ಟೇ ಅನುಶ್ರೀಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು.. ಆದರೆ ನನಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಮಾದ್ಯಮಕ್ಕೆ ತಿಳಿಸಿದ್ದರು..
ಆದರೆ ಅದಾಗಲೇ ವಾಟ್ಸಪ್ ಮೂಲಕ ಮಂಗಳೂರು ಸಿಸಿಬಿ ಪೊಲೀಸರು ಅನುಶ್ರೀ ಅವರಿಗೆ ನೋಟಿಸ್ ನೀಡಿದ್ದರು.. ಆದರೆ ಅನುಶ್ರೀ ಅವರು ತಮ್ಮ ಗಮನಕ್ಕೆ ಬಾರದಂತೆ ಇದ್ದ ಕಾರಣ ನಿನ್ನೆ ಸಂಜೆ ಖುದ್ದಾಗಿ ಮಂಗಳೂರಿನಿಂದ ಬೆಂಗಳೂರಿಗೆ ಬಂದ ಪೊಲೀಸರು 7 ಗಂಟೆ ಸಮಯದಲ್ಲಿ ಅನುಶ್ರೀಗೆ ಖುದ್ದು ನೋಟಿಸ್ ನೀಡಿ ಸಹಿ ಪಡೆದಿದ್ದರು..
ನಂತರ ನೋಟಿಸ್ ಪಡೆದು ಪ್ರತಿಕ್ರಿಯೆ ನೀಡಿದ್ದ ಅನುಶ್ರೀ ನನಗೆ ಈಗ ನೋಟಿಸ್ ಬಂದಿದೆ.. ನಾನು ನಾಳೆಯೇ ವಿಚಾರಣೆಗೆ ಹಾಜರಾಗುವೆ ಎಂದು ಮಾದ್ಯಮಕ್ಕೆ ತಿಳಿಸಿದ್ದರು.. ಅದರಂತೆಯೇ ಇಂದು ಬೆಳಿಗ್ಗೆ 5 ಗಂಟೆಗೆ ಬೆಂಗಳೂರಿನಿಂದ ತೆರಳಿದ ಅನುಶ್ರೀ 11 ಗಂಟೆ ಸುಮಾರಿಗೆ ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಲಿದ್ದಾರೆ ಎನ್ನಲಾಗಿತ್ತು.. ಆದರೆ ಅನುಶ್ರೀ ಅವರು ಮಂಗಳೂರಿಗೆ ತಲುಪಿದ್ದೇನೋ ನಿಜ.. ಆದರೆ ಸಿಸಿಬಿ ತನಿಖೆಗೆ ಹಾಜರಾಗಿಲ್ಲ..
ಹೌದು ಅವರೇ ಹೇಳಿದಂತೆ ಇಂದು ತನಿಖೆಗೆ ಹಾಜರಾಗದೆ ನಾಟ್ ರೀಚೆಬಲ್ ಆಗಿದ್ದಾರೆ.. ಅಷ್ಟೇ ಅಲ್ಲದೇ ಅತ್ತ ಸಿಸಿಬಿ ವಶದಲ್ಲಿರುವ ತರುಣ್ ಹಾಗೂ ಕಿಶೋರ್ ಅನುಶ್ರೀ ಕುರಿತಾಗಿ ಮಹತ್ವದ ಸತ್ಯವನ್ನು ತಿಳಿಸಿದ್ದಾರೆ ಎನ್ನಲಾಗಿದ್ದು ಅನುಶ್ರೀ ಪಾತ್ರ ಈ ಜಾಲದಲ್ಲಿ ಇರುವುದು ಖಚಿತ ಎನ್ನಲಾಗುತ್ತಿದೆ.. ಆದರೆ ಸದ್ಯ ಇಂದು ವಿಚಾರಣೆಗೆ ಹಾಜರಾಗುವೆ ಎಂದು ಹೇಳಿ ಕೈ ಕೊಟ್ಟು ನಾಪತ್ತೆಯಾಗಿರುವ ಅನುಶ್ರೀ ವಿಚಾರಣೆಗೆ ಹಾಜರಾದ ನಂತರವೇ ಸತ್ಯಾ ಸತ್ಯತೆ ಬಯಲಾಗಬೇಕಿದೆ.. ನಿಜಕ್ಕೂ ಅನುಶ್ರೀ ಇದರಲ್ಲಿ ಇದ್ದಾರಾ ಎಂಬ ಸತ್ಯ ಸಹ ವಿಚಾರಣೆ ಬಳಿಕ ಹೊರ ಬೀಳಲಿದೆ.. ಆದರೆ ಇಂದು ವಿಚಾರಣೆಗೆ ಹಾಜರಾಗದೆ ಗೈರಾಗಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ..