ನಟ ಅನಿರುದ್ದ್ ಅವರು ಕಿರುತೆರೆಗೆ ಕಾಲಿಟ್ಟ ನಂತರ ಕಿರುತೆರೆಯ ಸೆನ್ಸೇಷನಲ್ ಹೀರೋ ಎಂದೇ ಖ್ಯಾತರಾದರು.. ಜೀ ಕನ್ನಡ ವಾಹಿನಿಯ ಟಾಪ್ ಧಾರಾವಾಹಿಗಳಲ್ಲಿ ಒಂದಾಗಿ ಜೊತೆಜೊತೆಯಲಿ ತನ್ನ ಯಶಸ್ಸಿನ ಪಯಣವನ್ನು ಮುಂದುವರೆಸುತ್ತಿದೆ.. ಇತ್ತ ಜೊತೆ ಜೊತೆಯಲಿ ಧಾರಾವಾಹಿಯ ಮೂಲಕ ಅನಿರುದ್ಧ್ ಅವರು ಆರ್ಯವರ್ಧನ್ ಎಂದೇ ಖ್ಯಾತರಾದರು.. ಧಾರಾವಾಹಿಯಲ್ಲಿ ಅವರ ನಟನ ಚಾತುರ್ಯ, ಆ ಗಾಂಭಿರ್ಯ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದೆ.
ಆರ್ಯವರ್ಧನ್ ಆಗಿ ಮಿಂಚುತ್ತಿರುವ ನಟ ಅನಿರುದ್ಧ ಅವರ ಅಭಿಮಾನಿಗಳ ಬಳಗ ಬಹಳ ದೊಡ್ಡದಿದೆ. ಹಾಗಾಗಿ ಅಭಿಮಾನಿಗಳು ಅನಿರುದ್ಧ್ ಅವರನ್ನು ಭೇಟಿ ಮಾಡುವುದಕ್ಕೆ ಬಹಳ ಮನವಿ ಮಾಡಿಕೊಂಡಿದ್ದರು.. ನಟ ಅನಿರುದ್ಧ ಅವರಿಗೆ ಉಡುಗೊರೆಗಳನ್ನು ಕಳುಹಿಸಿಕೊಡಲು ಕೂಡ ಅಭಿಮಾನಿಗಳು ಅವರ ವಿಳಾಸವನ್ನು ಕೇಳುತ್ತಿದ್ದಾರೆ.
ಅನಿರುದ್ಧ ಅವರು ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು, ಅಭಿಮಾನಿಗಳ ಅಭಿಮಾನಕ್ಕೆ ಸೂಕ್ತವಾಗಿ ಪ್ರತಿಕ್ರಿಯಿಸುತ್ತಾರೆ. ಹಾಗಾಗಿ ಅವರನ್ನು ಭೇಟಿ ಮಾಡಬೇಕು ಎನ್ನುವವರ ಆಸೆಯನ್ನೂ ಈಡೇರಿಸಲಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿಯ 250 ಕಂತುಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಎಲ್ಲರೊಂದಿಗೆ ಈ ಯಶಸ್ಸನ್ನು ಹಂಚಿಕೊಂಡಿದ್ದರು.
‘250 ಸಂಚಿಕೆಗಳ ಸಾರ್ಥಕ ಪಯಣದಲಿ.. ನಿಮ್ಮೊಂದಿಗೆ ಸದಾ ಜೊತೆಜೊತೆಯಲಿ.. ನಿಮ್ಮ ಆಶೀರ್ವಾದ ಸದಾ ಹೀಗೆ ಇರಲಿ.. ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹ ಮುಂದುವರಿಯುತ್ತಿರಲಿ.. ನಿಮ್ಮೊಡನೆ ನಮ್ಮೀ ಪಯಣ ಸಾಗಲಿ ಜೊತೆ ಜೊತೆಯಲಿ.. ನಿಮಗಾಗಿ ಅಂತರಾಳದ ಧನ್ಯವಾದಗಳನ್ನು ಅರ್ಪಿಸುವುದು ಬಿಟ್ಟು ಬೇರೇನನು ನಾ ಹೇಳಲಿ.. ನಿಮ್ಮ ಈ ಪ್ರೀತಿಗೆ ನಾವೆಂದಿಗೂ ಸದಾ ಚಿರಋಣಿ ನಿಮಗೆ ತಿಳಿದಿರಲಿ..’ ಹೀಗೆ ಅನಿರುದ್ಧ ಅವರು ಫೇಸ್ ಬುಕ್ ಪೇಜ್ ನಲ್ಲಿ ಹಾಕಿಕೊಂಡಿದ್ದು ಅಭಿಮಾನಿಗಳಲ್ಲಿ ಇನ್ನಷ್ಟು ಪ್ರೀತಿ ಮೂಡಿಸಿದೆ.
ಇದೀಗ ಅನಿರುದ್ದ ಅವರು ಒಂದು ಕಂಡೀಶನ್ ಮೇಲೆ ತನ್ನನ್ನು ಭೇಟಿ ಮಾಡಲು ಮನೆಗೆ ಅಥವಾ ಶೂಟಿಂಗ್ ಸ್ಥಳಕ್ಕೆ ಬರಲು ವಿಳಾಸ ಕೊಡುವುದಾಗಿ ಹೇಳಿದ್ದಾರೆ. ಆ ಕಂಡೀಶನ್ ಏನು ಅಂತಿರಾ? ಕರೊನಾ ಬಿಸಿ ಕಡಿಮೆ ಆಗಿ ಎಲ್ಲರೂ ನಿರಾಳವಾದ ನಂತರ ಭೇಟಿ ಮಾಡುವುದಾಗಿ ತಿಳಿಸಿದ್ದಾರೆ. ಇಲ್ಲಿದೆ ನೋಡಿ ಅನಿರುದ್ಧ್ ಅವರ ಮಾತುಗಳು.. ಎಲ್ಲರಿಗೂ ಶುಭೋದಯ.. ಮೊದಲನೆಯದಾಗಿ ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ನನ್ನ ಅಂತರಾಳದ ಅನಂತ ಧನ್ಯವಾದಗಳು.. ತಮ್ಮಲ್ಲಿ ಎಷ್ಟೋ ಅಭಿಮಾನಿಗಳು ನನಗೆ ಉಡುಗೊರೆ ನೀಡಬೇಕು ಹೇಗೆ ತಲುಪಿಸುವುದು ಎಂದೆಲ್ಲಾ ಕೇಳಿದ್ದೀರಿ.. ನೀವೆಲ್ಲರು ನನ್ನ ಮೇಲೆ ಇಟ್ಟಿರುವ ಪ್ರೀತಿ.. ತೋರುತ್ತಿರುವ ವಿಶ್ವಾಸವೇ ನನಗೆ ಅತಿ ದೊಡ್ಡ ಉಡುಗೊರೆ.. ನಾನು ತಮ್ಮೆಲ್ಲರಿಗೂ ಸದಾ ಚಿರ ಋಣಿ..
ಹಾಗೆ ತಮ್ಮಲ್ಲಿ ಬಹಳಷ್ಟು ಅಭಿಮಾನಿಗಳು ನನ್ನನ್ನು ಭೇಟಿಯಾಗಬೇಕು.. ಮಾತನಾಡಿಸಬೇಕು.. ಎಲ್ಲಿ ಭೇಟಿಯಾಗುವುದೆಂದು ಕೇಳಿದ್ದೀರಿ.. ಸದ್ಯದ ಪರಿಸ್ಥಿತಿಯಲ್ಲಿ ಅಂದರೆ ಈ ಕರೋನ ಸೋಂಕಿನ ಪ್ರಭಾವ ಮುಗಿದ ನಂತರ ನಾನು ತಮಗೆಲ್ಲಾ ನನ್ನ ಚಿತ್ರೀಕರಣದ, ಅಥವಾ ಮನೆಯ ವಿಳಾಸ ಕೊಡುವೆ. ಆಗ ತಾವು ಅಲ್ಲಿ ಬಂದು ನನ್ನನ್ನು ಭೇಟಿ ಆಗಬಹುದು..
ತಮ್ಮೆಲ್ಲರ ಪ್ರೀತಿ, ವಿಶ್ವಾಸ, ಹಾರೈಕೆ, ಆಶೀರ್ವಾದ ಸದಾ ಹೀಗೆ ಇರಲಿ ಅಂತ ನಾನು ತಮ್ಮಲ್ಲಿ ಕಳಕಳಿಯಿಂದ ಕೇಳಿ ಕೊಳ್ಳುತ್ತೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.. ಸದ್ಯ ಅನಿರುದ್ಧ್ ಅವರ ಮಾತಿಗೆ ಅಭಿಮಾನಿಗಳು ಸಂತೋಷ ವ್ಯಕ್ತ ಪಡಿಸಿದ್ದಾರೆ..