Breaking News

ಕೋವಿಡ್​​​​ನಿಂದ ವಾರದಲ್ಲೇ ಚೇತರಿಸಿಕೊಂಡ 82 ವರ್ಷದ ತಮ್ಮ ಅಜ್ಜಿ ಬಗ್ಗೆ ಸ್ವಾರಸ್ಯಕರ ವಿಚಾರ ಹಂಚಿಕೊಂಡ ಅದಿತಿ ಪ್ರಭುದೇವ

Advertisement

ಕಳೆದ ಒಂದು ವರ್ಷದಿಂದ ಇಡೀ ವಿಶ್ವವೇ ಕೊರೊನಾದಿಂದ ನಲುಗುತ್ತಿದೆ. ಬಹಳಷ್ಟು ರಾಷ್ಟ್ರಗಳು ಈ ಸಮಸ್ಯೆಯಿಂದ ಹೊರ ಬಂದರೆ ಭಾರತದಲ್ಲಿ ಮಾತ್ರ ಈ ವೈರಸ್​​​ ಎಷ್ಟೋ ಮಂದಿಯನ್ನು ಬಲಿ ಪಡೆದಿದೆ. ಕೊರೊನಾ ಶೀಘ್ರದಲ್ಲೇ ನಮ್ಮೆಲ್ಲರನ್ನು ಬಿಡುವುದಿಲ್ಲ ಇನ್ನೂ ಎಷ್ಟೋ ವರ್ಷಗಳ ಕಾಲ ನಾವು ಅದರೊಂದಿಗೆ ಬದುಕಬೇಕು ಎಂಬ ಮಾತು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಆದರೆ ಕೊರೊನಾಗೆ ಔಷಧ ಅಭಿವೃದ್ಧಿಪಡಿಸಿದ್ದು ಶೀಘ್ರದಲ್ಲೇ ಈ ಸಮಸ್ಯೆ ಅಂತ್ಯವಾಗಲಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಆದರೆ ಯಾವುದನ್ನು ನಂಬಬೇಕು..ಯಾವುದನ್ನು ಬಿಡಬೇಕು ಎಂಬುದು ದೊಡ್ಡ ತಲೆ ನೋವಾಗಿದೆ. ಕೊರೊನಾ ಯಾರನ್ನೂ ಬಿಡುತ್ತಿಲ್ಲ. ಬಹಳ ಎಚ್ಚರಿಕೆಯಿಂದ ಇರುವವರೂ ತಮಗೇ ಅರಿವಿಲ್ಲದೆ ಈ ವೈರಸ್ ಅಟ್ಯಾಕ್ ಆಗಿರುವ ಸಾಕಷ್ಟು ಉದಾಹರಣೆಗಳಿವೆ. ಇದು ಸೆಲಬ್ರಿಟಿಗಳು, ಬಡವರು ಯಾರನ್ನೂ ಬಿಡುತ್ತಿಲ್ಲ. ಇತ್ತೀಚೆಗೆ ನಟ ದುನಿಯಾ ವಿಜಯ್ ತಮ್ಮ ತಂದೆ-ತಾಯಿಯನ್ನು ಹೇಗೆ ಕೊರೊನಾದಿಂದ ರಕ್ಷಿಸಿಕೊಂಡರು ಎಂಬುದನ್ನು ವಿಡಿಯೋ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ಅದಿತಿ ಪ್ರಭುದೇವ ಕೂಡಾ ತಮ್ಮ ಅಜ್ಜಿ ಬಗ್ಗೆ ಮಾತನಾಡಿದ್ದಾರೆ.

 

Advertisement

ಸ್ಯಾಂಡಲ್​ವುಡ್ ನಟಿ ಅದಿತಿ ಪ್ರಭುದೇವ ತಮ್ಮ ಅಜ್ಜಿಗೆ ಕೊರೊನಾ ಕಾಡಿದ್ದು, ಅದರಿಂದ ಅವರು ತ್ವರಿತಗತಿಯಲ್ಲಿ ಗುಣಮುಖರಾಗಿದ್ದ ವಿಚಾರವನ್ನು ಹಂಚಿಕೊಂಡಿದ್ದಾರೆ. ಲಾಕ್​ಡೌನ್ ಇರುವುದರಿಂದ ಅದಿತಿ ಸದ್ಯಕ್ಕೆ ತಮ್ಮ ಸ್ವಂತ ಊರಾದ ಹರಿಹರದಲ್ಲಿದ್ದಾರೆ. “ಹರಿಹರದ ಸುತ್ತಮುತ್ತಲೇ ಬಹಳ ಮಂದಿ ಸಂಬಂಧಿಗಳು ನೆಲೆಸಿದ್ದಾರೆ. ಅಜ್ಜಿ ಮನೆ ಕೂಡಾ ಇಲ್ಲೇ ಇದೆ. 82 ವರ್ಷದ ನಮ್ಮ ಅಜ್ಜಿಗೆ ಇತ್ತೀಚೆಗೆ ಕೊರೊನಾ ಪಾಸಿಟಿವ್ ದೃಢವಾಗಿತ್ತು. ವಿಚಾರ ಕೇಳಿ ನಮೆಗೆಲ್ಲಾ ಬಹಳ ಶಾಕ್ ಆಯ್ತು. ಆದರೆ ನಮ್ಮ ಅಜ್ಜಿ ಬಹಳ ಧೈರ್ಯದಿಂದ ಇದ್ದರು. ಅವರಿಗಿದ್ದಷ್ಟು ಧೈರ್ಯ ಕೂಡಾ ನಮಗೆ ಇರಲಿಲ್ಲ. 3-4 ದಿನಗಳು ಅಜ್ಜಿ ಬಹಳ ಸುಸ್ತಾದಂತೆ ಕಂಡುಬಂದರು. ಆದರೆ ಆಶ್ಚರ್ಯ ಎಂಬಂತೆ ಅವರು ಬಹಳ ಬೇಗ ಗುಣಮುಖರಾದರು.”

Advertisement

“ಅಜ್ಜಿಗೆ ಕೊರೊನಾ ಅಟ್ಯಾಕ್ ಆಗಿದೆ ಎಂದು ತಿಳಿದಾಗಿನಿಂದ ನಾನು ಅವರೊಂದಿಗೆ ಫೋನ್ ಮೂಲಕ ಪ್ರತಿದಿನ ಮಾತನಾಡುತ್ತಿದ್ದೆ. ಒಂದು ವಾರದಲ್ಲೇ ಅಜ್ಜಿ ಗುಣಮುಖರಾದರು. ಇದಕ್ಕೆ ಅವರ ಜೀವನ ಶೈಲಿಯೇ ಕಾರಣ. ನಮ್ಮ ಅಜ್ಜಿ, ಸೋದರಮಾವನ ಕುಟುಂಬದೊಂದಿಗೆ ನೆಲೆಸಿದ್ದಾರೆ. ಆದರೆ ಯಾರ ಮೇಲೂ ಅವಲಂಬಿತರಾಗದೆ ಅವರು ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಾರೆ. ಅಡುಗೆ ಅವರೇ ಮಾಡುತ್ತಾರೆ. ವ್ಯವಸಾಯ ಮಾಡುತ್ತಾರೆ. ಜೊತೆಗೆ ಮನೆ ಕೆಲಸಗಳನ್ನೂ ಬಹಳ ಚುರುಕಿನಿಂದ ಮಾಡುತ್ತಾರೆ. ವಯಸ್ಸಾಯ್ತು ಅಂತ ಎಂದಿಗೂ ಅವರು ಕೂತಲ್ಲಿ ಕುಳಿತವರಲ್ಲ. ಆಹಾರದ ವಿಚಾರದಲ್ಲೂ ಅವರು ಬಹಳ ಕಟ್ಟುನಿಟ್ಟು. ಯಾವಾಗಲೂ ಅವರು ಪೋಷಕಾಂಶವುಳ್ಳ ಆಹಾರವನ್ನೇ ಸೇವಿಸುವುದು. ಈ ಕಾರಣದಿಂದಲೇ ಅಜ್ಜಿ ಕೋವಿಡ್​​ನಿಂದ ಬೇಗನೆ ಗುಣಮುಖರಾದರು. ”

Advertisement

“ಅಜ್ಜಿ ನಿಮ್ಮ ಆರೋಗ್ಯ ಹೇಗಿದೆ ಎಂದು ಕೇಳಿದರೆ ನನಗೇನಮ್ಮಾ ಗುಂಡುಕಲ್ಲಿನಂತೆ ಇದ್ದೇನೆ ಎಂಬುದು ಅವರು ಯಾವಾಗಲೂ ನೀಡುವ ಉತ್ತರ. ಅವರು ಎಂದಿಗೂ ಕಷ್ಟದಿಂದ ಇದ್ದದ್ದನ್ನೇ ನಾನು ನೋಡಿಲ್ಲ. ಅಜ್ಜಿ ಯಾವಾಗಲೂ ಖುಷಿಯಿಂದ ಇರುತ್ತಾರೆ, ಜೊತೆಯಲ್ಲಿರುವವನ್ನು ನಗಿಸುತ್ತಾರೆ. ಯಾವಾಗಲೂ ಚೌಕಾಬಾರ ಅಥವಾ ಇನ್ನಿತರ ಆಟಗಳನ್ನು ಆಡುವ ಮೂಲಕ ಹುರುಪಿನಿಂದ ಇರುತ್ತಾರೆ, ಗೆದ್ದರೆ ಚಿಕ್ಕಮಕ್ಕಳಂತೆ ಸಂಭ್ರಮಿಸುತ್ತಾರೆ. ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯ ಚೆನ್ನಾಗಿರುವುದರಿಂದಲೇ ಈ ಕೊರೊನಾದಿಂದ ಕಾಯಿಲೆಯಿಂದ ಬೇಗ ಗುಣಮುಖರಾದರು. ಯಾರೇ ಆಗಲಿ ಮನಸ್ಸು ಗಟ್ಟಿಯಾಗಿದ್ದರೆ ದೈಹಿಕ ಆರೋಗ್ಯವೂ ಚೆನ್ನಾಗಿರುತ್ತದೆ. ಇದೇ ನಮ್ಮ ಅಜ್ಜಿ ನಮಗೆ ಕಲಿಸಿರುವ ದೊಡ್ಡ ಪಾಠ” ಎಂದು ಅದಿತಿ ಹೇಳಿಕೊಂಡಿದ್ದಾರೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ ಅದಿತಿ, ಭಗವಾನ್ ಶ್ರೀ ಕೃಷ್ಣ ಪರಮಾತ್ಮ, ತ್ರಿಬಲ್ ರೈಡಿಂಗ್, ಅಂದೊಂದಿತ್ತು ಕಾಲ ಸೇರಿದಂತೆ ಇನ್ನೂ ಹೆಸರಿಡದ ಕೆಲವೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಸದ್ಯಕ್ಕೆ ಲಾಕ್​ಡೌನ್ ಇರುವುದರಿಂದ ಚಿತ್ರೀಕರಣ ಸ್ಥಗಿತವಾಗಿದೆ. ಅದಿತಿ ಅಭಿನಯದ ತೋತಾಪುರಿ, ಒಂಬತ್ತನೇ ದಿಕ್ಕು, ಚಾಂಪಿಯನ್, ಓಲ್ಡ್ ಮಾಂಕ್ ಸಿನಿಮಾಗಳು ಪೋಸ್ಟ್​ ಪ್ರೊಡಕ್ಷನ್ ಹಂತದಲ್ಲಿದ್ದು ಶೀಘ್ರವೇ ಬಿಡುಗಡೆಯಾಗಲಿದೆ.

Advertisement

-ರಕ್ಷಿತ ಕೆ.ಆರ್. ಸಾಗರ

Advertisement
Advertisement

About RJ News Kannada

Check Also

ಕಷ್ಟ ಎಂದು ಮನೆ ಮುಂದೆ ಬಂದವರಿಗಾಗಿ ಕಲ್ಲಿಗೆ ದುಡ್ಡು ಸುತ್ತಿ ಬಾಲ್ಕನಿಯಿಂದ ಎಸೆಯುತ್ತಿದ್ದರಂತೆ ಆ ಖ್ಯಾತ ನಟ…!

Advertisement ದೇವರ ದಯೆ, ಅದೃಷ್ಟ, ಶ್ರಮ ನಮ್ಮೊಂದಿಗೆ ಇದ್ದರೆ ಪ್ರಪಂಚದಲ್ಲಿ ನಮ್ಮಷ್ಟು ಪರಮಸುಖಿಗಳು ಮತ್ತೊಬ್ಬರು ಇರುವುದಿಲ್ಲ. ಆದರೆ ಎಷ್ಟು ಸಂಪಾದಿಸಿದರೂ, …

Leave a Reply

Your email address will not be published.

Recent Comments

No comments to show.