Breaking News

ಆ ರಾತ್ರಿ ನಡೆದ ಕಥೆಯೊಂದನ್ನು ಫ್ಯಾನ್ಸ್ ಜೊತೆ ಹಂಚಿಕೊಂಡ ನಟಿ….ಅಳಬೇಕೋ, ನಗಬೇಕೋ ಗೊತ್ತಾಗ್ತಿಲ್ಲ ಎಂದ ನೆಟಿಜನ್ಸ್…!

Advertisement

ಕರ್ನಾಟಕದಲ್ಲಿ ಸದ್ಯ ಸಿನಿಮಾ, ಧಾರಾವಾಹಿಗಳ ಚಿತ್ರೀಕರಣಕ್ಕೆ ಅನುಮತಿ ಇಲ್ಲದ ಕಾರಣ ಪ್ರಸಾರ ನಿಲ್ಲಿಸಬಾರದು ಎಂಬ ಕಾರಣಕ್ಕೆ ಹೈದರಾಬಾದ್​​​ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಕಳೆದ ಬಾರಿ ಲಾಕ್​ಡೌನ್​​ನಲ್ಲಿ ಕೂಡಾ ಚಿತ್ರೀಕರಣ ಸ್ಥಗಿತಗೊಂಡಿದ್ದರಿಂದ ಹಳೆಯ ಧಾರಾವಾಹಿಗಳನ್ನು ವಾಹಿನಿಗಳಲ್ಲಿ ಮರು ಪ್ರಸಾರ ಮಾಡಲಾಗಿತ್ತು. ಕನ್ನಡ, ತೆಲುಗು ಸೇರಿ ಇನ್ನಿತರ ಭಾಷೆಗಳ ಧಾರಾವಾಹಿಗಳು ಫಿಲ್ಮ್​ ಸಿಟಿಯಲ್ಲಿ ನಡೆಯುತ್ತಿವೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಕನ್ನಡತಿ’ ಧಾರಾವಾಹಿ ಚಿತ್ರೀಕರಣ ಕೂಡಾ ಹೈದರಾಬಾದ್​​​ನಲ್ಲಿ ನಡೆಯುತ್ತಿದ್ದು ಸದ್ಯಕ್ಕೆ ಧಾರಾವಾಹಿ ತಂಡ ಮುತ್ತಿನ ನಗರಿಯಲ್ಲಿ ಬೀಡು ಬಿಟ್ಟಿದೆ. ಧಾರಾವಾಹಿಯಲ್ಲಿ ರಂಜನಿ ರಾಘವನ್, ಕಿರಣ್, ಸಾರಾ ಅಣ್ಣಯ್ಯ ಹಾಗೂ ಇನ್ನಿತರರು ನಟಿಸುತ್ತಿದ್ದಾರೆ. ನಾಯಕಿ ರಂಜನಿ ರಾಘವನ್ ಇತ್ತೀಚೆಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹೈದರಾಬಾದ್​​​ನಲ್ಲಿ ನಡೆದ ಥ್ರಿಲ್ಲರ್​​​ ಕಥೆಯೊಂದನ್ನು ಹಂಚಿಕೊಂಡಿದ್ದು ಇದನ್ನು ನೋಡಿದ ನೆಟಿಜನ್ಸ್ ಹೊಟ್ಟೆ ಹುಣ್ಣಾಗುವಂತೆ ನಗಾಡಿದ್ಧಾರೆ.

Advertisement

ಅಂತ ಸ್ಪೆಷಲ್ ಕಥೆ ಯಾವ್ದು ಅಂತೀರಾ…? ರಂಜನಿ ರಾಘವನ್, ಕಿರಣ್, ಸಾರಾ ಹಾಗೂ ಇನ್ನಿತರರಿಗೆ ರಾಮೋಜಿ ಫಿಲ್ಮ್ ಸಿಟಿ ಬಳಿ ಇರುವ ಉಮರ್​ಖಾನ್​ಗುಡ ಎಂಬಲ್ಲಿ ಹೋಟೆಲ್ ರೂಮ್ ನೀಡಲಾಗಿದೆ. ಚಿತ್ರೀಕರಣ ಸ್ಥಳದಿಂದ ಇಲ್ಲಿಗೆ ಸುಮಾರು 6-7 ಕಿ.ಮೀ ದೂರವಿದೆ. ಚಿತ್ರೀಕರಣ ಮುಗಿಸಿ ರೂಮ್​​​ಗೆ ಹೊರಡುವಾಗ ನಡೆದ ಕಥೆಯಂತೆ ಇದು. ”ಇಂದು ನಮ್ಮ ಭಾಗದ ಚಿತ್ರೀಕರಣ ಬೇಗ ಮುಗಿದಿತ್ತು. ಆದರೆ ಇನ್ನೂ ಪ್ಯಾಕ್ ಅಪ್ ಆಗಿರಲಿಲ್ಲ. ಎಲ್ಲರೂ ಬರುವವರೆಗೂ ತಡವಾಗಬಹುದು. ರೂಮ್​​​ಗೆ ಹೋಗಿ ರೆಸ್ಟ್ ಮಾಡೋಣ ಎಂದು ಯೋಚಿಸುತ್ತಿರುವಾಗ, ಲಗ್ಗೇಜ್ ಆಟೋವೊಂದು ಹೋಟೆಲ್​​​ವರೆಗೂ ಹೋಗಲಿದೆ ಎಂದು ತಿಳಿಯಿತು. ತೆರೆದ ವಾಹನದಲ್ಲಿ ಪ್ರಯಾಣಿಸಿದರೆ ಮಜಾ ಸಿಗುತ್ತೆ ಅಂತ ಮೂವರೂ ಆಟೋ ಹತ್ತಿದೆವು. ಪ್ರತಿದಿನ ಚಿತ್ರೀಕರಣ ಸ್ಥಳಕ್ಕೆ ಪ್ರಾಪರ್ಟಿ ತರುತ್ತಿದ್ದ ಲಗ್ಗೇಜ್ ಆಟೋ ಅದು. ಆದರೆ ಚಿತ್ರೀಕರಣ ಸ್ಥಳದಿಂದ ಸ್ವಲ್ಪ ದೂರ ಹೋಗುವಷ್ಟರಲ್ಲಿ ನಮಗೆ ಭಯ ಶುರುವಾಯ್ತು.”

 

Advertisement
View this post on Instagram

 

A post shared by ರಂಜನಿ ರಾಘವನ್ (@ranjani.raghavan)

Advertisement

”ರೂಮ್​​ಗೆ ಹೋಗಿ ತಲುಪುವ ಮುನ್ನವೇ ಈ ನಿರ್ಜನ ಪ್ರದೇಶದಲ್ಲಿ ನಮಗೇನಾದರೂ ತೊಂದರೆ ಆದಲ್ಲಿ ಏನು ಮಾಡುವುದು ಎಂದು ನನಗೆ ಭಯ ಶುರುವಾಯ್ತು. ನನ್ನ ಮೈಮೇಲೆ 3 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಒಡವೆ ಇದೆ ಎಂದು ಕಿರಣ್ ಹೇಳಿದಾಗ ನನಗೆ ಇನ್ನೂ ಭಯ ಹೆಚ್ಚಾಯ್ತು. ಆದ್ದರಿಂದ ನಮಗೆ ಏನಾದರೂ ಆದರೆ ಸಾಕ್ಷಿಗೆ ಇರಲಿ ಎಂಬ ಕಾರಣಕ್ಕೆ ನಾವು ರೂಮ್ ತಲುಪುವವರೆಗೂ ವಿಡಿಯೋ ರೆಕಾರ್ಡ್ ಮಾಡಿದೆ” ಎಂದು ರಂಜನಿ ಹೇಳಿಕೊಂಡಿದ್ದಾರೆ. ಅದೇ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ರಂಜನಿ, ಅಂದು ನಡೆದ ಘಟನೆಯನ್ನು ಸವಿಸ್ತಾರವಾಗಿ ಬರೆದುಕೊಂಡಿದ್ದಾರೆ.

Advertisement

ತಮಾಷೆ ಎಂದರೆ ಆ ಆಟೋ ಚಾಲಕ ಕನ್ನಡದವರಾಗಿದ್ದು ಆತನಿಗೆ ತಿಳಿಯಬಾರದು ಎಂಬ ಕಾರಣಕ್ಕೆ ರಂಜನಿ ವಿಡಿಯೋದಲ್ಲಿ ಇಂಗ್ಲೀಷ್​​​​ನಲ್ಲಿ ಮಾತನಾಡಿದ್ದಾರೆ. ”ನಿರ್ಜನ ಪ್ರದೇಶವನ್ನು ದಾಟಿದ ನಂತರ ಲೈಟ್​​​​ಗಳು ಕಣ್ಣಿಗೆ ಕಂಡಾಗ ನನ್ನೊಳಗೂ ಲೈಟ್ ಆನ್ ಆಯ್ತು” ಎಂದು ರಂಜನಿ ಹೇಳಿಕೊಂಡಿದ್ದಾರೆ. ರೂಮ್​​​ಗೆ ಬಂದ ನಂತರ ವಿಡಿಯೋ ಸಹಿತ ಶೂಟಿಂಗ್​​​ನಿಂದ ಹೊರಟಾಗಿನಿಂದ, ರೂಮ್ ತಲುಪುವವರೆಗೂ ಏನಾಯ್ತು ಎಂದು ಸುಧೀರ್ಘವಾಗಿ ವಿವರಿಸಿದ್ಧಾರೆ.

ರಂಜನಿ ಪೋಸ್ಟ್ ನೋಡಿ ಕೆಲವರಿಗೆ ನಗು ಬಂದಿದೆ. ಈ ಥ್ರಿಲ್ಲರ್ ಕಥೆಯಿಂದ ನೀವು ಒಂದು ಸಿನಿಮಾವನ್ನೇ ಮಾಡಬಹುದು ಎಂದು ಕೆಲವರು ಕಮೆಂಟ್ ಮಾಡಿದರೆ ಮತ್ತೆ ಕೆಲವರು ನಿಮ್ಮ ಈ ಕಥೆ ಕೇಳಿ ಅಳಬೇಕೋ…ನಗಬೇಕೋ ಗೊತ್ತಾಗ್ತಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಬಹುಶ: ರಂಜನಿ ರಾಘವನ್, ಈ ಘಟನೆಯನ್ನೂ ಜೀವನಪೂರ್ತಿ ಮರೆಯುವುದಿಲ್ಲ ಅನ್ಸುತ್ತೆ.

-ರಕ್ಷಿತ ಕೆ.ಆರ್. ಸಾಗರ

Advertisement
Advertisement

About RJ News Kannada

Check Also

ಕಷ್ಟ ಎಂದು ಮನೆ ಮುಂದೆ ಬಂದವರಿಗಾಗಿ ಕಲ್ಲಿಗೆ ದುಡ್ಡು ಸುತ್ತಿ ಬಾಲ್ಕನಿಯಿಂದ ಎಸೆಯುತ್ತಿದ್ದರಂತೆ ಆ ಖ್ಯಾತ ನಟ…!

Advertisement ದೇವರ ದಯೆ, ಅದೃಷ್ಟ, ಶ್ರಮ ನಮ್ಮೊಂದಿಗೆ ಇದ್ದರೆ ಪ್ರಪಂಚದಲ್ಲಿ ನಮ್ಮಷ್ಟು ಪರಮಸುಖಿಗಳು ಮತ್ತೊಬ್ಬರು ಇರುವುದಿಲ್ಲ. ಆದರೆ ಎಷ್ಟು ಸಂಪಾದಿಸಿದರೂ, …

Leave a Reply

Your email address will not be published.

Recent Comments

No comments to show.