Breaking News

ಮಾಡದಿರುವ ತಪ್ಪಿಗೆ ದಯವಿಟ್ಟು ಟೀಕಿಸಬೇಡಿ, ಸಾಧ್ಯವಾದರೆ ಸಹಾಯ ಮಾಡಿ ಎಂದು ಅಕೌಂಟ್ ವಿವರ ನೀಡಿದ ನಟಿ ವಿಜಯಲಕ್ಷ್ಮಿ

Advertisement

ನಾಗಮಂಡಲ ಸಿನಿಮಾ ಖ್ಯಾತಿಯ ವಿಜಯಲಕ್ಷ್ಮಿ ಮತ್ತೆ ಎರಡು ವಿಡಿಯೋಗಳನ್ನು ಬಿಡುಗಡೆ ಮಾಡಿದ್ಧಾರೆ. ಕಳೆದ ಒಂದು ತಿಂಗಳ ಹಿಂದೆ ಸಹೋದರಿ ಉಷಾ ಅನುಭವಿಸುತ್ತಿರುವ ಕಷ್ಟವನ್ನು ವಿವರಿಸಿ ಜನರ ಮುಂದೆ ಅಳಲು ತೋಡಿಕೊಂಡಿದ್ದರು. ಮತ್ತೆ ಕಳೆದ ವಾರ ಸಹೋದರಿ ಉಷಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಚಾರವನ್ನು ತಿಳಿಸಿ, ಉಷಾ ಅವರನ್ನೂ ವಿಡಿಯೋದಲ್ಲಿ ತೋರಿಸಿ ಆಕೆಯ ಚಿಕಿತ್ಸೆಗೆ ಹಣ ಸಹಾಯ ಮಾಡಿ ಎಂದು ಮನವಿ ಮಾಡಿದ್ದರು. ವಿಜಯಲಕ್ಷ್ಮಿ ಸ್ಥಿತಿ ಬಗ್ಗೆ ಕೆಲವರು ಕನಿಕರ ವ್ಯಕ್ತಪಡಿಸಿದರೆ ಮತ್ತೆ ಕೆಲವರು ಆಕೆಯದ್ದೇ ತಪ್ಪು ಎಂದು ಟೀಕಿಸಿದ್ದರು. 2 ವರ್ಷಗಳ ಹಿಂದೆ ಶಿವರಾಜ್​​ಕುಮಾರ್ ಮಾತನಾಡಿದ್ದ ವಿಚಾರವನ್ನು ಪ್ರಸ್ತಾಪಿಸಿದ್ದರು. ಅಷ್ಟೇ ಅಲ್ಲ, ಸೃಜನ್ ಲೋಕೇಶ್ ಅವರ ಹೆಸರನ್ನೂ ಮಧ್ಯೆ ಎಳೆತಂದಿದ್ದರು. ಇದರ ಬಗ್ಗೆ ಬೇಸರ ವ್ಯಕ್ತಪಡಿಸಿರುವ ವಿಜಯಲಕ್ಷ್ಮಿ, ಮತ್ತೆರಡು ವಿಡಿಯೋ ಮಾಡಿ ಬಿಡುಗಡೆ ಮಾಡಿದ್ದಾರೆ. ಮಾಡದಿರುವ ತಪ್ಪಿಗೆ ನನ್ನನ್ನು ಟೀಕಿಸುವವರು, ನನ್ನ ತಂಗಿಯನ್ನು ಈ ಸ್ಥಿತಿಗೆ ತಂದ ಜಯಪ್ರದಾ ಅವರನ್ನು ಏಕೆ ಪ್ರಶ್ನಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Advertisement

“ನಾನು ಸೃಜನ್ ಲೋಕೇಶ್​​​​​​​​​​​ ಅವರನ್ನು ಮದುವೆಯಾಗದಿದ್ದಕ್ಕೆ ಬೀದಿಗೆ ಬಂದೆ ಎಂದು ಕೆಲವರು ನನ್ನ ಬಗ್ಗೆ ಅಪಹಾಸ್ಯ ಮಾಡುತ್ತಿದ್ದಾರೆ. ಆದರೆ ನಾನು ಯಾವ ತಪ್ಪನ್ನೂ ಮಾಡಿಲ್ಲ, ಪ್ರಪಂಚದಲ್ಲಿ ಇನ್ನೂ ಸತ್ಯ, ಧರ್ಮ ಇದೆ. ಆ ದೇವರಿಗೆ ಎಲ್ಲಾ ಗೊತ್ತು. ಮೋಸ ಮಾಡಬೇಕು ಎಂಬ ಉದ್ದೇಶ ಇದ್ದರೆ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಏಕೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದೆ…? ಎಲ್ಲರೂ ನನ್ನನ್ನು ವಿಲನ್ ಆಗಿ ನೋಡುತ್ತಿದ್ದೀರ. ಆದರೆ ನಾನು ಮಾಡದಿರುವ ತಪ್ಪಿನ ಬಗ್ಗೆ ಇಷ್ಟೆಲ್ಲಾ ಮಾತನಾಡುವ ಕೆಲವರು ನನ್ನ ತಂಗಿ ಜೀವನವನ್ನು ಹಾಳು ಮಾಡಿರುವ ಜಯಪ್ರದಾ ಕುಟುಂಬದ ಬಗ್ಗೆ ಏಕೆ ಪ್ರಶ್ನಿಸುತ್ತಿಲ್ಲ..? ಉಷಾ ತನ್ನ ಮಗನನ್ನು ನೋಡಲು ಯಾರೂ ಅವಕಾಶ ಮಾಡಿಕೊಡುತ್ತಿಲ್ಲ, ಆಕೆಯ ಆಸ್ಪತ್ರೆ ಚಿಕಿತ್ಸೆಗೆ ಅವರು ಹಣದ ಸಹಾಯ ಮಾಡುತ್ತಿಲ್ಲ. ತಂಗಿಯನ್ನು ನಡು ನೀರಲ್ಲಿ ಕೈ ಬಿಟ್ಟ ಅವರ ಬಗ್ಗೆ ಏಕೆ ಯಾರೂ ಮಾತನಾಡುತ್ತಿಲ್ಲ” ಎಂದು ಪ್ರಶ್ನಿಸಿದ್ದಾರೆ.

“ನನಗೆ ನೀವು ಬೈಯ್ಯಬೇಕೆಂದರೆ ಎಷ್ಟು ಬೇಕೋ ಬೈದುಕೊಳ್ಳಿ. ಆದರೆ ನಾನು ಇನ್ನೂ ನಿಮ್ಮನ್ನು ನಂಬಿದ್ದೇನೆ. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ನನಗೆ ಬೇಕು” ಎಂದು ವಿಜಯಲಕ್ಷ್ಮಿ ಬೇಸರದಿಂದಲೇ ವಿಡಿಯೋ ಮಾಡಿದ್ದಾರೆ. ಅಕ್ಕ ಉಷಾ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ವಿಜಯಲಕ್ಷ್ಮಿ ಆಕೆಯಿಂದಲೂ ಮಾತನಾಡಿಸಿದ್ದಾರೆ. “ನಾನು ಶೀಘ್ರ ಗುಣಮುಖಳಾಗಲೆಂದು ಹಾರೈಸಿದ ಕರ್ನಾಟಕದ ಪ್ರತಿಯೊಬ್ಬರಿಗೂ ನನ್ನ ಧನ್ಯವಾದಗಳು ಎಂದು ಉಷಾ ತಮಗೆ ಸಹಾಯ ಮಾಡಿದವರಿಗೆ ಧನ್ಯವಾದ ಅರ್ಪಿಸಿದ್ಧಾರೆ. ಜೊತೆಗೆ ವಿಜಯಲಕ್ಷ್ಮಿ ಕೂಡಾ ಮಾತನಾಡಿ, “ನನಗೆ ಸಹಾಯ ಮಾಡಿದ, ಮಾಡದೆ ಇರುವ ಎಲ್ಲರಿಗೂ ಧನ್ಯವಾದಗಳು. ನನ್ನಿಂದ ಏನಾದರೂ ತಪ್ಪಾದಲ್ಲಿ ಕ್ಷಮಿಸಿ. ಅಭಿಮಾನಿಗಳು ಕೂಡಾ ನನಗೆ ಕರೆ ಮಾಡಿ ಶುಭ ಹಾರೈಸಿದ್ದಾರೆ. ನೀವು ಇಲ್ಲದಿದ್ದರೆ ನಾನು ಅನಾಥೆ. ನಿಮ್ಮ ಪ್ರೀತಿ, ಆಶೀರ್ವಾದ ನನಗೆ ಎಂದಿಗೂ ಇರಬೇಕು” ಎಂದು ಥ್ಯಾಂಕ್ಸ್ ಹೇಳಿದ್ದಾರೆ.

Advertisement

ವಿಜಯಲಕ್ಷ್ಮಿ ಇಂದಿಗೂ ಅಕ್ಕ ಉಷಾ ಜೊತೆ ಆಸ್ಪತ್ರೆಯಲ್ಲೇ ಇದ್ದು ಅವರ ಕಾಳಜಿ ವಹಿಸಿದ್ದಾರೆ. ಅಷ್ಟೇ ಅಲ್ಲ, ತಮ್ಮ ಅಕೌಂಟ್​​​​ ವಿವರ ನೀಡಿರುವ ವಿಜಯಲಕ್ಷ್ಮಿ, ಸಹಾಯಕ್ಕೆ ಮನವಿ ಮಾಡಿದ್ಧಾರೆ. ಯಾರಾದರೂ ಹಣದ ಸಹಾಯ ಮಾಡಬೇಕೆಂದು ಇಚ್ಛಿಸಿದರೆ Vijayalaskhmi,a/n​ 919010051098843,IFSC code-UTI B0000014, Axis bank, T.Nagar, chennai ಅಕೌಂಟ್ ನಂಬರಿಗೆ ಹಣ ಕಳಿಸಬಹುದು.

-ರಕ್ಷಿತ ಕೆ.ಆರ್. ಸಾಗರ

Advertisement
Advertisement
Advertisement

About RJ News Kannada

Check Also

ಕಷ್ಟ ಎಂದು ಮನೆ ಮುಂದೆ ಬಂದವರಿಗಾಗಿ ಕಲ್ಲಿಗೆ ದುಡ್ಡು ಸುತ್ತಿ ಬಾಲ್ಕನಿಯಿಂದ ಎಸೆಯುತ್ತಿದ್ದರಂತೆ ಆ ಖ್ಯಾತ ನಟ…!

Advertisement ದೇವರ ದಯೆ, ಅದೃಷ್ಟ, ಶ್ರಮ ನಮ್ಮೊಂದಿಗೆ ಇದ್ದರೆ ಪ್ರಪಂಚದಲ್ಲಿ ನಮ್ಮಷ್ಟು ಪರಮಸುಖಿಗಳು ಮತ್ತೊಬ್ಬರು ಇರುವುದಿಲ್ಲ. ಆದರೆ ಎಷ್ಟು ಸಂಪಾದಿಸಿದರೂ, …

Leave a Reply

Your email address will not be published.

Recent Comments

No comments to show.