ಬಿಗ್ ಬಾಸ್ ನಿಂದ ಹೊರ ಬಂದ ದಿವ್ಯಾ ಉರುಡುಗ ಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ..

ಬಿಗ್ ಬಾಸ್ ಸೀಸನ್ ಎಂಟರ ಸ್ಪರ್ಧಿ ದಿವ್ಯಾ ಉರುಡುಗ ಅನೇಕ ವಿಚಾರಗಳಿಗೆ ಸುದ್ದಿಯಾಗಿದ್ದರು.. ಕಿರುತೆರೆ ಕೋಟಾದಿಂದ ಬಿಗ್ ಬಾಸ್ ಸೀಸನ್ ಎಂಟಕ್ಕೆ ಅವಕಾಶ ಪಡೆದ ದಿವ್ಯಾ ಉರುಡುಗ ಟಾಒ ಐದು ಫೈನಲಿಸ್ಟ್ ಗಳಲ್ಲೊ ಒಬ್ಬರಾಗಿ ಕೊನೆಯ ವಾರದ ವರೆಗೂ ಬಿಗ್ ಮನೆಯಲ್ಲಿ ಉಳಿಯಲು ಯಶಸ್ವಿಯಾದರು.. ಅದಕ್ಕೂ ಮೀರಿ ವೈಷ್ಣವಿ ಹಾಗೂ ಪ್ರಶಾಂತ್ ಸಂಬರ್ಗಿ ಅವರನ್ನು ಹಿಂದಿಕ್ಕಿ ಬಿಗ್ ಬಾಸ್ ನ ಎರಡನೇ ರನ್ನರ್ ಅಪ್ ಆಗಿ ಹೊರ ಹೊಮ್ಮಿದರು..

ಆದರೆ ಮೊದಲ ದಿನದಿಂದಲೂ ಟಾಸ್ಕ್ ಗಳನ್ನು ಚೆನ್ನಾಗಿ ಆಡಿಕೊಂಡು ನಂತರದಲ್ಲಿ ಅರವಿಂದ್ ವಿಚಾರವಾಗಿ ಸುದ್ದಿಯಾಗಿ ಕೊನೆಗೆ ಹೊರಗೆ ಒಂದಷ್ಟು ಹಳೇ ಫೋಟೋಗಳು ವೈರಲ್ ಆಗಿ ಸದ್ದು ಮಾಡಿ ಎರಡನೇ ರನ್ನರ್ ಅಪ್ ಆಗುವಲ್ಲಿ ಯಶಸ್ವಿಯಾದ ದಿವ್ಯಾ ಉರುಡುಗ ಅವರಿಗೆ ನಿಜಕ್ಕೂ ಸಿಕ್ಕ ಸಂಭಾವನೆಯಾದರು ಎಷ್ಟು ಎಂಬ ಸಣ್ಣ ಕುತೂಹಲ ಇದ್ದೇ ಇರುತ್ತದೆ..

ಹೌದು ದಿವ್ಯಾ ಉರುಡುಗ ಅವರಿಗೆ ಬಿಗ್ ಬಾಸ್ ನಲ್ಲಿ ದುಬಾರಿ ಸಂಭಾವನೆಯೇ ನಿಗಧಿಯಾಗಿತ್ತು ಎನ್ನಲಾಗಿದೆ.. ಹೌದು ಬಿಗ್ ಬಾಸ್ ನಲ್ಲಿ ಪ್ರತಿಯೊಬ್ಬ ಸ್ಪರ್ಧಿಗೂ ವಾರಕ್ಕೆ ಇಂತಿಷ್ಟು ಎಂದು ಸಂಭಾವನೆಯನ್ನು ನಿಗಧಿ ಮಾಡಲಾಗುತ್ತದೆ.. ಕೆಲವರಿಗೆ ವರ್ಷದ ಅಗ್ರಿಮೆಂಟ್ ಸಹ ಮಾಡಿಕೊಂಡು ಮುಂಬರುವ ಶೋಗಳಲ್ಲಿ ಭಾಗವಹಿಸಬೇಕಾಗಿರುತ್ತದೆ.. ಆದರೆ ದಿವ್ಯಾ ಉರುಡುಗ ಅವರಿಗೆ ವಾರದ ಸಂಭಾವನೆಯಷ್ಟೇ ನಿಗಧಿಯಾಗಿತ್ತು.. ಬಿಗ್ ಬಾಸ್ ಮನೆಯಲ್ಲಿ‌ ಉಳಿದಷ್ಟು ವಾರಗಳ ಸಂಭಾವನೆ ನೀಡಲಾಗುತಿತ್ತು..

ಅದೇ ರೀತಿ ಬಿಗ್ ಬಾಸ್ ಮನೆಯಲ್ಲಿ ನೂರ ಇಪ್ಪತ್ತು ದಿನಗಳ ಕಾಲ ಉಳಿಯಲು ಯಶಸ್ವಿಯಾದ ದಿವ್ಯಾ ಉರುಡುಗ ಅವರಿಗೆ ಒಟ್ಟು ಹದಿನೇಳು ವಾರಗಳ ಸಂಭಾಅವನೆಯನ್ನು‌ ನೀಡಲಾಗಿದೆ.ಮ್ ಹೌದು ದಿವ್ಯಾ ಉರುಡುಗ ಅವರಿಗೆ ವಾರಕ್ಕೆ ಮೂವತ್ತು ಸಾವಿರ ರೂಪಾಯಿ ಸಂಭಾವನೆ ನಿಗಧಿಯಗಿದ್ದು ಅದೇ ರೀತಿ ಹದಿನೇಳು ವಾರಕ್ಕೆ ಒಟ್ಟು ಐದು ಲಕ್ಷದ ಹತ್ತು ಸಾವಿರ ರೂಪಾಯಿಗಳನ್ನು ಸಂಭಾವನೆ ರೂಪದಲ್ಲಿ ನೀಡಲಾಗಿದೆ.. ಇದರ ಜೊತೆಗೆ ಎರಡನೇ ರನ್ನರ್ ಅಪ್ ಆದ ಕಾರಣ ಬಹುಮಾನವಾಗಿ ಆರು ಲಕ್ಷ ರೂಪಾಯಿಗಳನ್ನು ನೀಡಲಾಗಿದೆ..

Be the first to comment

Leave a Reply

Your email address will not be published.


*