ಕನ್ನಡ ಕಿರುತೆರೆಯ ಖ್ಯಾತ ನಟ ನಾಡಿಗ್ ಕೃಷ್ಣ ಅವರು ಇನ್ನಿಲ್ಲ.. ಏನಾಗಿತ್ತು ಗೊತ್ತಾ?

ಈ ವರ್ಷ ಕನ್ನಡ ಚಿತ್ರರಂಗ ಇನ್ನೆಷ್ಟು ಕಲಾವಿದರನ್ನು ಕಳೆದುಕೊಳ್ಳುವುದೋ ಆ ಭಗವಂತನೇ ಬಲ್ಲ..‌ ಹೌದು ಸಾಲು ಸಾಲು ಕಲಾವಿದರು ಜೀವ ಕಳೆದುಕೊಳ್ಳುತ್ತಿರುವ ಈ ವರ್ಷ ನಿಜಕ್ಕೂ ಬಹಳ ಕಹಿ ನೆನಪಾಗಿ ಉಳಿಯಬಹುದು.. ಇದೀಗ ಕನ್ನಡ ಕಿರುತೆರೆಯ ಖ್ಯಾತ ನಟ, ಬರಹಗಾರ ಎಲ್ಲರ ನೆಚ್ಚಿನ ಗುರುಗಳು ನಾಡಿ ಕ್ರಿಷ್ಣ ಅವರು ನಿನ್ನೆ ರಾತ್ರಿ‌ ಇಹಲೋಕ ತ್ಯಜಿಸಿದ್ದಾರೆ..

ಹೌದು ಕಿರುತೆರೆಯಲ್ಲಿ ಇವರು ಇಲ್ಲದ ವಾಹಿನಿಗಳೇ ಇಲ್ಲ.. ಬಹಳಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿರುವ ನಾಫ಼ಿಗ್ ಕೃಷ್ಣ ಅವರು ಬರಹಗಾರರು ಹೌದು.. ಅಷ್ಟೇ ಅಲ್ಲ ಎಲ್ಲರ ಪ್ರೀತಿಯ ಗುರುಗಳು ಹೌದು.. ನಿನ್ನೆ ಶೂಟಿಂಗ್ ಸಮಯದಲ್ಲಿ ಇದ್ದಕ್ಕಿದ್ದ ಹಾಗೆ ಕೊಂಚ ಎದೆ ನೋವು ಕಾಣಿಸಿಕೊಂಡಿದೆ.. ತಕ್ಷಣ ಅವರನ್ನು ಜಯದೇವ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ನಾಡಿಗ್ ಕೃಷ್ಣ ಅವರ ಜೀವನದ ಬರವಣಿಗೆಗೆ ಆ ಭಗವಂತ ಪೂರ್ಣ ವಿರಾಮ ಹಾಕಿಯಾಗಿತ್ತು.. ಈ ಬಗ್ಗೆ ನಾಡಿಗ್ ಕೃಷ್ಣ ಅವರ ಮಗಳು ಆಪ್ತರಿಗೆ ವಿಚಾರ ತಿಳಿಸಿದ್ದಾರೆ..

ವಿಷಯ ತಿಳಿದು ಎಲ್ಲರೂ ಶಾಕ್ ಆಗಿದ್ದಾರೆ.. ನಿನ್ನೆಯಷ್ಟೇ ಆರೋಗ್ಯವಾಗಿ ಎಲ್ಲರ ಜೊತೆ ನಗು ನಗುತ್ತಾ ಸಮಯ ಕಳೆದಿದ್ದ ಗುರುಗಳು ಇಂದಿಲ್ಲ ಎಂದರೆ ಊಹಿಸಲು ಆಗುತ್ತಿಲ್ಲ.. ಸೀತಾರಾಮ್ ಅವರನ್ನು ಸೇರಿದಂತೆ ಎಲ್ಲಾ ಸಿನಿಮಾ ಕಲಾವಿದರು.. ಕಿರುತೆರೆಯ ಕಲಾವಿದರು ನಾಡಿಗ್ ಅವರ ಅಗಲಿಕೆಗೆ ಕಂಬನಿ‌ ಮಿಡಿದಿದ್ದಾರೆ..

ಈ ಬಗ್ಗೆ ಸೀತಾರಾಮ್ ಅವರು ವಿಚಾರ ತಿಳಿಸಿ “ನಿಮ್ಮ ವಿದಾಯ ಸೃಷ್ಟಸಿದ ಶೂನ್ಯ ಅಗಾಧವಾದದ್ದು.. ನಿಮ್ಮ ಮಮತೆ ತುಂಬಿದ ಹೃದಯ, ಜ್ಞಾನ ತುಂಬಿದ ಮಾತುಗಳು, ಮರೆಯಲಾಗದ ನಟನೆ. ಅಂಥಾ ಹೃದಯವೇ ನಿಮ್ಮನ್ನು ಬಿಟ್ಟಿತೇ..” ಎಂದು ಬರೆದು ಪೋಸ್ಟ್ ಮಾಡಿದ್ದು ಕಂಬನಿ ಮಿಡಿದಿದ್ದಾರೆ..

Be the first to comment

Leave a Reply

Your email address will not be published.


*