ಅಭಿಷೇಕ್ ಹುಟ್ಟುಹಬ್ಬಕ್ಕೆ ದರ್ಶನ್ ಕೊಟ್ಟ ಉಡುಗೊರೆ ನೋಡಿ..

ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ಅವರ ಜನ್ಮ ದಿನ ಇಂದು.. ಸ್ಯಾಂಡಲ್ವುಡ್ ನ ಆಪ್ತರು ಸ್ನೇಹಿತರು ಕುಟುಂಬದವರು ಎಲ್ಲರೂ ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.. ಇನ್ನು ಅಮರ್ ಸಿನಿಮಾದ ನಂತರ ದುನಿಯಾ ಸೂರಿ ಅವರ ಬ್ಯಾಡ್ ಮ್ಯಾ ನರ್ಸ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವ ಅಭಿಷೇಕ್ ಅವರಿಗೆ ಚಿತ್ರತಂಡ ಸಿನಿಮಾದ ಟೀಸರ್ ಬಿಡುಗಡೆ ಮಾಡುವ ಮೂಲಕ ಶುಭ ಕೋರಿದೆ..

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಂಬರೀಶ್ ಅವರಿಗೆ ಮಗನಂತೆಯೇ ಎಂಬುದು ಎಲ್ಲರಿಗೂ ತಿಳಿದೇ ಇದೆ.. ಇಂದು ತಮ್ಮನ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಾಶಯ ತಿಳಿಸಿದ್ದು ತಮ್ಮನ ಎಲ್ಲಾ ಕನಸುಗಳು ಆದಷ್ಟು ಬೇಗ ನನಸಾಗಲಿ ಎಂದು ಹಾರೈಸಿದ್ದಾರೆ..

ಹೌದು ಸಾಮಾಜಿಕ ಜಾಲತಾಣದಲ್ಲಿ ಅಭಿಷೇಕ್ ಅವರ ಫೋಟೋ ಹಂಚಿಕೊಂಡಿರುವ ದರ್ಶನ್ ಅವರು “ನನ್ನ ಪ್ರೀತಿಯ ತಮ್ಮ ಅಭಿಷೇಕ್ ಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.. ನಿನ್ನ ಇಷ್ಟಾರ್ಥಗಳೆಲ್ಲಾ ಆದಷ್ಟು ಬೇಗ ಈಡೇರಲಿ.. ಬೆಸ್ಟ್ ಆಫ್ ಲಕ್ ಫಾರ್ ಬ್ಯಾಡ್ ಮ್ಯಾನರ್ಸ್” ಎಂದು ಬರೆದು ಪೋಸ್ಟ್ ಮಾಡಿದ್ದಾರೆ..

ಇನ್ನು ಇಂದು ಬೆಳಿಗ್ಗೆಯೇ ಅಭಿಮಾನಿಗಳು ಅಂಬರೀಶ್ ಅವರ ಮನೆ ಮುಂದೆ ಆಗಮಿಸಿದ್ದು ಅಭಿಷೇಕ್ ಅವರಿಗಾಗಿ ಬೃಹದಾಕಾರದ ಕೇಕ್ ಗಳನ್ನು ಹಾರಗಳನ್ನು ತಂದು ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿ ಶುಭ ಕೋರಿದ್ದಾರೆ.‌

Be the first to comment

Leave a Reply

Your email address will not be published.


*