ಕೇವಲ 5 ದಿನಗಳಲ್ಲಿ ತೂಕ ಇಳಿಸಲು ಇದೊಂದು ಚಮಚ ಪುಡಿ ಸಾಕು..

ಅತಿಯಾದ ತೂಕ ನಮ್ಮ ದೇಹ ಸೌಂದರ್ಯವನ್ನು ಹಾಳುಮಾಡುವುದು ಮಾತ್ರವಲ್ಲದೆ ಹಲವಾರು ರೋಗಗಳಿಗೂ ಮೂಲವಾಗಿರುತ್ತದೆ. ಒಮ್ಮೆ ಬೊಜ್ಜು ಬಂದರೆ ಅದನ್ನು ಕರಗಿಸುವುದೂ ಕಷ್ಟ ಹಾಗೆಯೇ ಮಲಬದ್ಧತೆ, ನಿದ್ರಾಹೀನತೆ, ಸಿಹಿಮೂತ್ರ, ಬಿಪಿ ಹೀಗೆ ಹಲವಾರು ಖಾಯಿಲೆಗಳಿಗೂ ಕೂಡ ನಾವು ತುತ್ತಾಗುತ್ತೇವೆ.

ನಮ್ಮ ದೇಹದ ಅನಗತ್ಯ ತೂಕವನ್ನು ಇಳಿಸಿ ಆರೋಗ್ಯಕರ ಜೀವನವನ್ನು ನಡೆಸುವುದು ಅತೀ ಪ್ರಮುಖವಾದ ವಿಷಯ. ನಾವು ಸೇವಿಸುವ ಕೆಲವು ಆಹಾರಗಳು ನಮ್ಮ ಜೀರ್ಣಕ್ರಿಯೆ ಸರಿಯಾಗದಂತೆ ತಡೆಯುತ್ತವೆ. ಜೊತೆಗೆ ಆಗಾಗ ಅತಿಯಾಗಿ ಆಹಾರ ತಿನ್ನುವುದರಿಂದ ತೂಕ ತನ್ನಿಂದತಾನೇ ಏರಿಕೆಯಾಗುತ್ತದೆ. ಒಮ್ಮೆ ತೂಕ ಹೆಚ್ಚಾದರೆ ಅದನ್ನು ಇಳಿಸಲು ಹರಸಾಹಸ ಪಡಬೇಕಾಗುತ್ತದೆ.
ನಿಯಮಿತ ಆಹಾರ ಸೇವನೆಯ ಜೊತೆಗೆ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದಾದ ಒಂದು ದಿವೌಷಧವನ್ನು ನಾವಿಲ್ಲಿ ನಿಮಗೆ ಪರಿಚಯ ಮಾಡುತ್ತಿದ್ದೇವೆ.
ಜೀರಿಗೆ ಪಾನೀಯ

ಜೀರಿಗೆ ಪಾನೀಯ ತಯಾರಿಸಲು ಬೇಕಾಗುವ ಸಾಮಗ್ರಿಗಳು – ಒಂದು ಚಮಚ ಜೀರಿಗೆ, ಅರ್ಧ ನಿಂಬು ಹಾಗೂ ನೀರು
ಇದನ್ನು ತಯಾರಿಸುವುದು ಹೇಗೆ ಎಂದರೆ – ಮೊದಲು ಒಂದು ಚಮಚ ಜೀರಿಗೆಯನ್ನು ಒಂದು ತವಾ ಮೇಲೆ ಕಡಿಮೆ ಉರಿಯಲ್ಲಿ ಚೆನ್ನಾಗಿ ಹುರಿದುಕೊಳ್ಳಿ. ಆನಂತರ ಒಂದು ಮಿಕ್ಸರ್ ಜಾರ್ ಗೆ ಇದನ್ನು ಹಾಕಿ ಅದಕ್ಕೆ ಅರ್ಧ ಲೋಟದಷ್ಟು ನೀರನ್ನು ಸೇರಿಸಿ. ನಂಅತರ ಇದನ್ನು ಚೆನ್ನಾಗಿ ರುಬ್ಬಿ. ರುಬ್ಬಿದ ನಂತರ ಅದನ್ನು ಸೋಸದೇ ನೇರವಾಗಿ ಒಂದು ಲೋಟಕ್ಕೆ ಹಾಕಿ. ನೆನಪಿಡಿ. ಜೀರಿಗೆ ಸ್ವಲ್ಪ ತರಿತರಿಯಾಗಿದ್ದರೆ ಅದನ್ನು ಹಾಗೆಯೇ ಅಗೆದು ತಿನ್ನಬಹುದು. ಹಾಗಾಗಿ ನೀರನ್ನು ಸೋಸಬೇಡಿ. ಕೊನೆಯದಾಗಿ ಈ ರುಬ್ಬಿದ ಮಿಶ್ರಣಕ್ಕೆ ಅರ್ಧ ನಿಂಬೆ ಹಣ್ಣಿನ ರಸವನ್ನು ಹಿಂಡಿ. ಇದೀಗ ನಿಮ್ಮ ಪಾನೀಯ ಸಿದ್ಧ.

ಈ ಪಾನೀಯವನ್ನು ದಿನವೂ ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ತೂಕ ಇಳಿಸುವ ಆಸೆಇದ್ದ ಯಾರು ಬೇಕಾದರೂ ಇದನ್ನು ಕುಡಿಯಬಹುದು. ಬಾಣಂತಿಯರೂ ಇದನ್ನು ಆಗಾಗ ಕುಡಿಯಬಹುದು.
ಈ ಜೀರಿಗೆ ಪಾನೀಯವನ್ನು ನಿರಂತರವಾಗಿ ಐದು ದಿನಗಳವರೆಗೆ ಕುಡಿಯಿರಿ. ಇದರ ಜೊತೆಗೆ ನಿಮ್ಮ ಆಹಾರ ಕ್ರಮವೂ ಸರಿಯಾಗಿದ್ದರೆ, ಖಂಡಿತವಾಗಿಯೂ ಕೇವಲ ಐದು ದಿನಗಳಲ್ಲಿ ನೀವು ನಿಮ್ಮ ದೇಹದಲ್ಲಿನ ವ್ಯತ್ಯಾಸವನ್ನು ಗಮನಿಸಬಹುದು. ಈ ಜೀರಿಗೆ ಪಾನೀಯವು ಕೇವಲ ತೂಕ ಇಳಿಸಲು ಮಾತ್ರವಲ್ಲದೆ, ಗ್ಯಾಸ್ಟ್ರಿಕ್ ಅಥವಾ ಎಸಿಡಿಟಿ, ಮಲಬದ್ಧತೆ, ಹೊಟ್ಟೆ ಉರಿ, ಹೊಟ್ಟೆ ಭಾರ ಹೀಗೆ ಹಲವಾರು ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. ಹಾಗಾಗಿ ಜೀರಿಗೆ ಪಾನೀಯವು ಒಂದು ದಿವೌಷಧಿಯೇ ಆಗಿದೆ.

Be the first to comment

Leave a Reply

Your email address will not be published.


*