ಮೈಸೂರಿನ ಫಾರ್ಮ್ ಹೌಸ್ ನಲ್ಲಿ ಪ್ರಾಣಿ ಪಕ್ಷಿಗಳೊಡನೆ ಸಮಯ ಕಳೆಯುತ್ತಿರುವ ದರ್ಶನ್ ಹಾಗೂ ವಿಜಯಲಕ್ಷ್ಮಿ ದರ್ಶನ್.. ಫೋಟೋ ಗ್ಯಾಲರಿ ನೋಡಿ..

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪ್ರಾಣಿ ಪ್ರೀತಿ ಎಲ್ಲರಿಗೂ ತಿಳಿದೇ ಇದೆ.. ಪ್ರಾಣಿ‌‌‌ ಪಕ್ಷಿಗಳನ್ನು ಸಾಕುವ ಸಲುವಾಗಿಯೇ ತಮ್ಮ ಹುಟ್ಟೂರು ಮೈಸೂರಿನ ಬಳಿ ಫಾರ್ಮ್ ಹೌಸ್ ಒಂದನ್ನು ನಿರ್ಮಿಸಿ ಅಲ್ಲಿ ದೇಶ ವಿದೇಶದ ನಾನಾ ರೀತಿಯ ಪ್ರಾಣಿ ಪಕ್ಷಿಗಳನ್ನು ಸಾಕಿಕೊಂಡಿದ್ದು ವೀಕೆಂಡ್ ಅಥವಾ ಯಾವುದೇ ರಜೆ ಬಂದರೆ ಸಾಕು ದರ್ಶನ್ ಅವರು ತೋಟದಲ್ಲಿ ಹಾಜರಾಗ್ತಾರೆ.‌ ಇನ್ನು ಕೆಲಸವಿದ್ದರೆ ಮಾತ್ರವೇ ಬೆಂಗಳೂರಿನ ಕಡೆ ಮುಖ ಮಾಡುವುದು.. ಲಾಕ್ ಡೌನ್ ಸಮಯದಲ್ಲಿ ಸಂಪೂರ್ಣವಾಗಿ ತಮ್ಮ ತೋಟದಲ್ಲಿಯೇ ಉಳಿದಿದ್ದ ದರ್ಶನ್ ಅವರು ಕೃಷಿ ಚಟುವಟಿಕೆಯನ್ನೂ ಸಹ ಆರಂಭಿಸಿದ್ದರು..

ಕೃಷಿ ಕೆಲಸಗಳಿಗೆ ಸಹಾಯವಾಗಲೆಂದು ಟ್ರ್ಯಾಕ್ಟರ್ ಸಹ ಕೊಂಡುಕೊಂಡು ಮೈಸೂರಿನ ರಸ್ತೆಗಳಲ್ಲಿ ಯಾವುದೇ ಅಹಂಕಾರವಿಲ್ಲದೇ ಖುದ್ದು ತಾವೇ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಬಂದಿದ್ದರು..

ಇನ್ನು ತಿಂಗಳ ಹಿಂದಷ್ಟೇ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ರೈತರಿಗೆ ನೆರವಾಗುವ ಸಲುವಾಗಿ ಹಾಗೂ ಗ್ರಾಹಕರಿಗೆ ನೇರವಾಗಿ ರೈತರ ಉತ್ಪನ್ನಗಳು ತಲುಪುವ ಸಲುವಾಗಿ ಮೈ ಫ್ರೆಶ್ ಬ್ಯಾಸ್ಕೆಟ್ ಎಂಬ ವಿನೂತನ ಆನ್ಲೈನ್ ಹಣ್ಣು ಮತ್ತು ತರಕಾರಿಗಳನ್ನು ನೇರವಾಗಿ ರೈತರಿಂದ ಗ್ರಾಹಕರಿಗೆ ತಲುಪಿಸುವ ಆಪ್ ಒಂದನ್ನು ತೆರೆದಿದ್ದು ಜನ ಮೆಚ್ಚುಗೆಗೆ ಪಾತ್ರರಾಗಿದ್ದರು..

ಇನ್ನು ಇದೀಹ ಪ್ರತಿ ವಾರಾಂತ್ಯದಲ್ಲಿ ದರ್ಶನ್ ಅವರ ಜೊತೆಗೆ ವಿಜಯ್ ದರ್ಶನ್ ಅವರೂ ಸಹ ಮೈಸೂರಿನ ತೋಟಕ್ಕೆ ಆಗಮಿಸುತ್ತಿದ್ದು ಜಾನುವಾರುಗಳು ಜೊತೆ ಸಮಯ ಕಳೆಯುತ್ತಿರುತ್ತಾರೆ.. ಇನ್ನು ವಿನೀಶ್ ದರ್ಶನ್ ಸಹ ಹಾರ್ಸ್ ರೈಡ್ ಮಾಡುವ ಸಲುವಾಗಿ ಮೈಸೂರಿಗೆ ಪ್ರತಿ ವಾರವೂ ಆಗಮಿಸುತ್ತಿದ್ದು ವಿಜಯಲಕ್ಷ್ಮಿ ಅವರು ಫೋಟೋಗಳನ್ನು ಹಂಚಿಕೊಂಡಿದ್ದಾರೆ..

ಫಾರ್ಮ್ ಹೌಸ್ ಗೆ ಕೆಲ ದಿನದ ಹಿಂದಷ್ಟೇ ನೂತನವಾಗಿ ಆಗಮಿಸಿದ ಮುದ್ದು ಕರುವಿನ ಜೊತೆಗೆ ನಿನ್ನೆ ತೆಗೆದುಕೊಂಡ ಫೋಟೋಗಳನ್ನು ಹಂಚಿಕೊಂಡಿದ್ದು ವಿಜಯಲಕ್ಷ್ಮಿ ದರ್ಶನ್ ಅವರ ಪ್ರಾಣಿಪ್ರೀತಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗಿವೆ..

Be the first to comment

Leave a Reply

Your email address will not be published.


*