ಸಾ’ಯುವ ಮುನ್ನ ಕೊನೆಯ ಆಸೆ ಹೇಳಿಕೊಂಡಿರುವ ಎಸ್ ಪಿ ಬಿ..‌ ನಿಜಕ್ಕೂ ದೊಡ್ಡತನವಿದು..

ಭಾರತದ ಸಂಗೀತ ಲೋಕದ ದಂತಕತೆ.. ದೈಹಿಕವಾಗಿ ತಾ ಹೋದರೂ ತನ್ನ ಸಂಗೀತವನ್ನು ಬಿಟ್ಟು ಸದಾ ಜೀವಂತವಾಗಿರುವ ಗಾನ ಗಂಧರ್ವ ಎಸ್ ಪಿ ಬಾಲ ಸುಬ್ರಹ್ಮಣ್ಯಂ ಅವರು ತಾವು ಬದುಕಿರುವಾಗ ತಮ್ಮ ಕೊನೆಯ ಆಸೆಯನ್ನು ತಿಳಿಸಿದ್ದರಂತೆ.. ಹೌದು ಎಸ್ ಪಿ ಬಿ ಅವರ ಆರೋಗ್ಯ ಕ್ಷೀಣಿಸುತ್ತಿದ್ದ ಸನಯದಲ್ಲಿ ತಮ್ಮ ಕೊನೆಯ ಆಸೆಯೊಂದನ್ನು ತಿಳಿಸಿದ್ದಾರೆ.‌. ಜೊತೆಗೆ ಬಹಳಷ್ಟು ಬಾರಿ ತಮ್ಮ ಮತ್ತೊಂದು ಬಯಕೆಯನ್ನೂ ಸಹ ಜನರ ಮುಂದೆಯೇ ತಿಳಿಸಿದ್ದರು..

ಹೌದು ಗಾನ ಗಾರುಡಿಗ ಬಯಸಿದ ಎರಡು ಆಸೆಗಳು ಇವೇ ನೋಡಿ‌‌.. ಒಂದು ತಾವು ಇಲ್ಲವಾದ ಬಳಿಕ ತಮ್ಮ ಕೊನೆಯ ಕಾರ್ಯವನ್ನು ಅಂತಿಮ ಸಂಸ್ಕಾರವನ್ನು ತಮ್ಮ ನೆಚ್ಚಿನ ರೆಡ್ ಹಿಲ್ ಫಾರ್ಮ್ ಹೌಸ್ ನಲ್ಲಿ ನೆರವೇರಿಸಬೇಕೆಂದು ಕೇಳಿಕೊಂಡಿದ್ದರಂತೆ.. ಹೌದು ಎಸ್ ಪಿ ಬಿ ಅವರಿಗೆ ಚೆನ್ನೈನಲ್ಲಿ‌ ಮೂರು ಕಡೆ ಫಾರ್ಮ್ ಹೌಸ್ ಗಳು ಇವೆ ಆದರೆ ರೆಡ್ ಹಿಲ್ ಫಾರ್ಮ್ ಹೌಸ್ ಎಂದರೆ ಅವರಿಗೆ ಬಹಳ ನೆಮ್ಮದಿ ಎನ್ನುತ್ತಿದ್ದರಂತೆ..

ಅದೇ ಕಾರಣಕ್ಕೆ ಇಂದು ಎಸ್ ಪಿ ಬಿ ಅವರು ಬಯಸಿದಂತೆ ಅದೇ ಫಾರ್ಮ್ ಹೌಸ್ ನಲ್ಲಿ ಅಂತ್ಯ ಕ್ರಿಯೆ ನಡೆಸಲಾಗುತ್ತಿದೆ.. ಇನ್ನು ಎಸ್ ಪಿ ಬಿ ಅವರು ಬಹಳಷ್ಟು ಬಾರಿ ತಾನು ಇಲ್ಲವಾದ ಬಳಿಕ ಮಾಡಬೇಕಾದ ಕೆಲವೊಂದನ್ನಿ ಆಸೆಯ ರೂಪದಲ್ಲಿ ಹೇಳಿಕೊಂಡಿದ್ದರು.. ಹೌದು ಎಸ್ ಪಿ ಬಿ ಅವರು ಇರುವಾಗಲೇ ತಮ್ಮ ಸ ಮಾಧಿಯ ಮೇಲೆ ಎರಡು ಸಾಲನ್ನು ಬರೆಯಲು ಮನವಿ‌ ಮಾಡಿದ್ದಾರೆ.. ಎಸ್ ಪಿ ಬಿ ಅವರು ಹಾಡಿನ ಮೂಲಕ ಮಾತ್ರವಲ್ಲ ಅವರ ಸರಳ ಸಜ್ಜನಿಕೆಯಿಂದ ಜನರ ಮನ ಮಾನಸದಲ್ಲಿ ಸದಾ ಹಸಿರಾಗಿದ್ದಾರೆ..

ದೇಶದ ಕೋಟ್ಯಾನು ಕೋಟಿ ಹೃದಯಗಳು ಎಸ್ ಪಿ ಬಿ ಅವರಿಗಾಗಿ ಇಂದು ಕಂಬನಿ ಮಿಡಿದಿವೆ.. ಇಂತಹ ದೊಡ್ಡ ಗುಣದ ಸರಳ ಸಜ್ಜನಿಕೆ ತುಂಬಿದ ವ್ಯಕ್ತಿತ್ವವುಳ್ಳ ಎಸ್ ಪಿ ಬಿ ಅವರು ಬಹಳಷ್ಟು ಬಾರಿ ತಾವು ಇಲ್ಲವಾದ ಬಳಿಕ ತಮ್ಮ ಸಮಾ ಧಿಯ ಮೇಲೆ ಎರಡು ಸಾಲು ಬರೆಯಲು ಮನವಿ‌ ಮಾಡಿರುವುದು ನಿಜಕ್ಕೂ ಕಂಬನಿ ತರಿಸುತ್ತದೆ.. ಹೌದು ಎಸ್ ಪಿ ಬಿ ಅವರು ಬಾಲ‌ಮುರಳಿ ಕೃಷ್ಣ ಅವರನ್ನು ತಮ್ಮ ದೇವರೆಂದೇ ಹೇಳುತ್ತಿದ್ದರು.. ಇಂತಹ ದೇವರನ್ನು ಒಮ್ಮೆ 1998 ರಲ್ಲಿ ಎಸ್ ಪಿ ಬಿ ಅವರು ನಡೆಸಿಕೊಡುತ್ತಿದ್ದ ಕಾರ್ಯಕ್ರಮವೊಂದಕ್ಕೆ ಆಹ್ವಾನ ಮಾಡಿದ್ದರು..

ಆ ಕಾರ್ಯಕ್ರಮದಲ್ಲಿ ಬಾಲಮುರಳಿ‌ ಕೃಷ್ಣ ಅವರು ಎಸ್ ಪಿ ಬಿ ಅವರನ್ನು ಹೊಗಳಿದ್ದರು.. ಎಸ್ ಪಿ ಬಿ ಸ್ವಲ್ಪ ಪ್ರಯತ್ನ ಪಟ್ಟರೂ ಸಹ ಬಾಲಮುರಳಿ ಕೃಷ್ಣನಂತೆ ಹಾಡಿ ಬಿಡುತ್ತಾನೆ.. ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಈ ಬಾಲ‌ಮುರಳಿ ಕೃಷ್ಣ ಎಸ್ ಪಿ ಬಿ ಅಂತೆ ಹಾಡಲು ಸಾಧ್ಯವಿಲ್ಲ ಎಂದು ಮನತುಂಬಿ ಹೊಗಳಿದ್ದರು.. ತನ್ನ ದೇವರೇ ಈ ಮಾತನ್ನು ಹೇಳಿದಾಗ ಎಸ್ ಪಿ ಬಿ ಅವರು ಬಹಳ ಸಂತೋಷ ಪಟ್ಟಿದ್ದರು.. ಅಷ್ಟೇ ಅಲ್ಲದೇ ಈ ಮಾತನ್ನು ಅನೇಕ ಕಾರ್ಯಕ್ರಮಗಳಲ್ಲಿ ಎಸ್ ಪಿ ಬಿ ಅವರು ಹೇಳಿಕೊಂಡಿದ್ದರು..

ಹೇಳಿಕೊಳ್ಳುವುದಷ್ಟೇ ಅಲ್ಲದೇ ಒಂದು ಮನವಿಯನ್ನು ಸಹ ಮಾಡಿದ್ದರು.. ಹೌದು ತಾವು ಇಲ್ಲವಾದ ಬಳಿಕ ತಮ್ಮ ಸಮಾ ಧಿಯ ಮೇಲೆ ಬಾಲಮುರಳಿ ಕೃಷ್ಣ ಅವರು ಹೇಳಿದ ಈ ಮಾತನ್ನು ಬರೆದು ಅಂತಹ ಪುಣ್ಯಾತ್ಮನ ಕೈಯಿಂದ ಈ ರೀತಿ ಇವನು ಹೊಗಳಿಸಿಕೊಂಡಿದ್ದಾನೆ.. ಎಂದು ಎರಡು ಸಾಲು ಬರೆಸಿ.. ನನ್ನ ಜನ್ಮ ಸಾರ್ಥಕ ಎಂದಿದ್ದರು.. ನಿಜಕ್ಕೂ ತಾನೆಷ್ಟೇ ಶ್ರೇಷ್ಠನಾದರೂ ತನ್ನ ಆರಾಧ್ಯ ದೇವರಿಗೆ ನೀಡಬೇಕಾದ ಗೌರವವನ್ನು ತಾವು ಇಲ್ಲವಾದ ಬಳಿಕವೂ ತಮ್ಮ ಸ’ಮಾಧಿ ಮೂಲಕ ನೀಡುವ ಶ್ರೇಷ್ಠ ಗುಣದವರು ಎಸ್ ಪಿ ಬಿ.. ನಿಜಕ್ಕೂ ದೊಡ್ಡತನವೇ ಸರಿ..

Be the first to comment

Leave a Reply

Your email address will not be published.


*