ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಶೈನ್ ಹಾಗೂ ಜೀ ಕನ್ನಡದ ಗಾಯಕಿ.. ಇವರೇ ನೋಡಿ..

ಬಿಗ್ ಬಾಸ್ ಸೀಸನ್ 7 ರ ವಿನ್ನರ್ ಶೈನ್ ಶೆಟ್ಟಿ ಸದ್ಯ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.. ಹೌದು ಖ್ಯಾತ ಗಾಯಕಿ ಸಂಗೀತಾ ರಾಜೀವ್ ಅವರೊಂದಿಗೆ ನೂತನ ಜೀವನ ಆರಂಭಿಸಲು ರೆಡಿಯಾಗಿದ್ದಾರೆ.. ಮೊನ್ನೆ ಮೊನ್ನೆಯಷ್ಟೇ ಹುಡುಗಿಯೊಬ್ಬರ ಕೈ ಹಿಡಿದು ಹಳೆಯ ಪುಸ್ತಕ ಹೊಸ ನವಿಲುಗರಿ ಎಂದು ಬರೆದು ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದರು.. ಸದ್ಯದಲ್ಲಿಯೇ ಸರ್ಪ್ರೈಸ್ ನೀಡುವುದಾಗಿ ಹೇಳಿದ್ದರು.. ಅತ್ತ ಸಂಗೀತಾ ರಾಜೀವ್ ಅವರೂ ಸಹ ಶೈನ್ ಕೈ ಹಿಡಿದ ಫೋಟೋವೊಂದನ್ನು ಹಂಚಿಕೊಂಡು ಅದೇ ಗಾನ.. ನಗೆ ಬಾನ.. ಎದೆಯಲಿ‌ ನಾಟಿದೆ.. ಸಂ ಥಿಂಗ್ ಸ್ಪೆಷಲ್ ನಾಳೆ ಹೇಳುವೆ ಎಂದು ಬರೆದು ಪೋಸ್ಟ್ ಮಾಡಿದ್ದರು..

ಇದೀಗ ಇಂದು ಅವರ ಸರ್ಪ್ರೈಸ್ ರಿವೀಲ್‌ ಮಾಡಿದ್ದಾರೆ.. ಹೌದು ಶೈನ್ ಶೆಟ್ಟಿ ಬಾಳಿಗೆ ಸಂಗೀತಾರ ಆಗಮನವಾಗುತ್ತಿದೆ.. ಹೌದು ಈ ಬಗ್ಗೆ ವೀಡಿಯೋ ಹಂಚಿಕೊಂಡಿರುವ ಶೈನ್ ಹಾಗೂ ಸಂಗೀತಾ ಇಬ್ಬರು “ಮೊನ್ನೆಯಷ್ಟೇ ನಾವು ಒಂದು ವೀಡಿಯೋ ಹಂಚಿಕೊಂಡಿದ್ದೆವು ಅದರಲ್ಲಿದ್ದ ಕೈ ಸಂಗೀತಾರದ್ದು.. ಬಹಳಷ್ಟು ಜನರು ಸರಿಯಾಗಿ ಹೇಳಿದ್ದಿರಿ.. ಇದೀಗ ನಾವು ನಾಳೆ ಮತ್ತೊಂದು ಸರ್ಪ್ರೈಸ್ ಜೊತೆಗೆ ಸಿಹಿ ಸುದ್ದಿಯೊಂದು ನೀಡಲಿದ್ದೇವೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ..

ಹೌದು ಸಂಗೀತಾ ರಾಜೀವ್ ಹಿನ್ನೆಲೆ ಗಾಯಕಿಯಾಗಿದ್ದು ಜೀ ವಾಹಿನಲ್ಲಿ ಬರುವ ಸರಿಗಮಪ ಕಾರ್ಯಕ್ರಮದಲ್ಲಿ ಜ್ಯೂರಿ‌ ಮೆಂಬರ್ ಆಗಿಯೂ ಕಾಣಿಸಿಕೊಳ್ಳುತ್ತಾರೆ.. ಇನ್ನು ಶೈನ್ ಹಾಗೂ ಸಂಗೀತಾ ರಾಜೀವ ಕೆಲ ವರ್ಷಗಳಿಂದ ಸ್ನೇಹಿತರೂ ಹೌದು.. ಆದರೆ ಕೆಲ ತಿಂಗಳ ಹಿಂದಷ್ಟೇ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದು ಈ ಹಿಂದೆಯೂ ಸಹ ಸಂಗೀತಾ ಶೈನ್ ಅವರ ಫೋಟೋಗಳನ್ನು ಮುಖ ಕಾಣದಂತೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.. ಯಾರಿವನು..‌ಈ ಹುಡುಗನು ಎಂದು ಬರೆದು ಪೋಸ್ಟ್ ಮಾಡಿಕೊಂಡಿದ್ದರು..

ಆದರೀಗ ಅಧಿಕೃತವಾಗಿ ಶೈನ್ ಶೆಟ್ಟಿ ಜೊತೆಗಿನ ವೀಡಿಯೋ ಹಂಚಿಕೊಂಡಿದ್ದು ಸದ್ಯದಲ್ಲಿಯೇ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.. ಇನ್ನು ಕೆಲ ದಿನದಿಂದ ಶೈನ್ ಶೆಟ್ಟಿ ಯಾರನ್ನು ಪ್ರೀತಿಸುತ್ತಿದ್ದಾರೆ ಎಂಬ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ.. ಆದರೆ ಬಹಳಷ್ಟು ಬಿಗ್ ಬಾಸ್ ಅಭಿಮಾನಿಗಳು ಶೈನ್ ಹಾಗೂ ದೀಪಿಕಾ ದಾಸ್ ಜೋಡಿಯಾಗಬಹುದು ಎನ್ನುತ್ತಿದ್ದರು.. ಆದರೆ ಅವರಿಗೆ ಕೊಂಚ ಬೇಸರವಾದರೂ ಸಹ ಶೈನ್ ಹಾಗೂ ಸಂಗೀತಾ ಜೋಡಿಗೆ ಶುಭಾಶಯ ತಿಳಿಸಿ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮೂಲಕ ಶುಭ ಹಾರೈಸಿದ್ದಾರೆ.‌

Be the first to comment

Leave a Reply

Your email address will not be published.


*