ಕೂದಲು ಉದುರದಂತೆ ತಡೆಯಲು ಇದೊಂದನ್ನು ಬಳಸಿ ಸಾಕು..

ಆಧುನಿಕ ಯುಗದಲ್ಲಿ ಹೆಗೆ ಎಲ್ಲಾ ತಂತ್ರಜ್ಞಾನಗಳೂ ನಮ್ಮನ್ನು ಮುನ್ನಡೆಸುತ್ತಿದ್ದಾವೆಯೋ ಹಾಗೆ ಅದಕ್ಕೆ ತಕ್ಕ ಹಾಗೆ ಬದಲಾದ ನಮ್ಮ ಜೀವನ ಶೈಲಿ ನಮಗೆ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನೂ ವರದಾನವಾಗಿ ನೀಡುತ್ತಿದೆ. ಅದರಲ್ಲೂ ಕೂದಲಿಗೆ ಸಂಬಂಧಪಟ್ಟ ತೊಂದರೆಗಳಂತೂ ಎಲ್ಲರನ್ನೂ ಕಾಡುತ್ತಲೇ ಇರುತ್ತದೆ. ಅದರಲ್ಲಿ ಕೂದಲು ಉದುರುವ ಸಮಸ್ಯೆ ಅತೀ ಹೆಚ್ಚು ಜನರಲ್ಲಿ ಕಾಣಿಸಿಕೊಳ್ಳುವಂತದ್ದು.

ಕೂದಲು ಉದುರುವುದನ್ನು ತಡೆಗಟ್ಟಲು ಜನರು ಸಾಕಷ್ಟು ರಾಸಾಯನಿಕ ಮಿಶ್ರಿತ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಈ ಉತ್ಪನ್ನಗಳು ಸಮಸ್ಯೆಗಳಿಗೆ ಪರಿಹಾರ ನೀಡುವ ಬದಲು ಅಡ್ಡ ಪರಿಣಾಮಗಳನ್ನೇ ಹೆಚ್ಚು ಉಂಟು ಮಾಡುತ್ತವೆ. ಹಾಗಾಗಿ ಇತ್ತೀಚಿಗೆ ಹೆಚ್ಚಾಗಿ ಎಲ್ಲರೂ ನೈಸರ್ಗಿಕ ಉತ್ಪನ್ನಗಳು ಅಥವಾ ನೈಸರ್ಗಿಕವಾಗಿ ತಾವೇ ತಯಾರಿಸಿಕೊಳ್ಳುವ ಮನೆಮದ್ದುಗಳ ಮೂಲಕ ತಮ್ಮ ಆರೋಗ್ಯ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುತ್ತಾರೆ.

ಸೀಬೆ ಹಣ್ಣಿನ ಎಲೆ: ಎಲ್ಲರನ್ನೂ ಕಾಡುವ ಕೂದಲು ಉದುರುವ ಸಮಸ್ಯೆಯನ್ನು ಕಡಿಮೆ ಮಾಡಲು ನಾವು ಬಳಸಬಹುದಾದಂತಹ ಅತ್ಯಂತ ಉಪಯುಕ್ತ ವಿಷಯ ಸೀಬೆ ಹಣ್ಣಿನ ಎಲೆ. ಪೇರಲೆ ಹಣ್ಣು ಎಂದೂ ಕರೆಯುವ ಸೀಬೆ ಹಣ್ಣು ತಿನ್ನಲು ಎಷ್ಟು ರುಚಿಯೋ ಆಷ್ಟೇ ಅದರ ಗಿಡದ ಎಲೆಗಳು ಔಷಧೀಯ ಗುಣಗಳನ್ನು ಹೊಂದಿವೆ.

ಸೀಬೆ ಹಣ್ಣಿನ ಎಲೆಗಳಲ್ಲಿರುವ ವಿಟಮಿನ್ ಬಿ ನೆತ್ತಿಯಲ್ಲಿನ ಮೃತ ಕಣಗಳನ್ನು ಹೋಗಲಾಡಿಸಿ ಕೂದಲಿನ ಹೊಸ ಹುಟ್ಟಿಗೂ ಸಹಕಾರಿಯಾಗುತ್ತದೆ.
ಸೀಬೆ ಹಣ್ಣಿನ ಎಲೆಯ ರಸ ತಯಾರಿಸುವ ವಿಧಾನ: ನಿಮಗೆ ಬೇಕಾದಷ್ಟು ಸೀಬೆ ಹಣ್ಣಿನ ಎಲೆಗಳನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ಹಾಕಿ ಕುದಿಸಿ. ಹಾಕಿದ ನೀರು ಅರ್ಧದಷ್ಟು ಆಗುವವರೆಗೂ (ಅಂದರೆ ಒಂದು ಲೋಟ ನೀರು ಬಳಸಿದರೆ ಅರ್ಧ ಲೋಟ ನೀರು ಸಿಗುವಷ್ಟು) ಇದನ್ನು ಚೆನ್ನಾಗಿ ಕುದಿಸಿ. ನಂತರ ಈ ಕುದಿಸಿದ ನೀರನ್ನು ಹಾಗೆಯೇ ಆರಲು ಬಿಡಿ. ಆರಿಸ ನೀರನ್ನು ಕೂದಲಿನ ಬುಡಕ್ಕೆ ಚೆನ್ನಾಗಿ ತಾಕುವಂತೆ ಹಚ್ಚಿ. ನಿಮ್ಮ ಕೂದಲು ಸಂಪೂರ್ಣ ಒದ್ದೆಯಾಗುವಷ್ಟು ಹಚ್ಚಿ ಮಸಾಜ್ ಮಾಡಿ. ನಂತರ ಒಂದು ಗಂಟೆ ಬಿಟ್ಟು ಕೂದಲನ್ನು ತೊಳೆಯಿರಿ.

ನಿರಂತರವಾಗಿ ಒಂದು ತಿಂಗಳಿನವರೆಗೆ ಈ ರೀತಿ ಮಾಡುವುದರಿಂದ ನಿಮ್ಮ ಕೂದಲು ಉದುರುವ ಸಮಸ್ಯೆಗೆ ಪರಿಹಾರ ದೊರೆಯುವುದರ ಜೊತೆಗೆ ಹೊಸದಾಗಿ ಕೂದಲು ಹುಟ್ಟಲೂ ಕೂಡ ಸಾಧ್ಯವಾಗುತ್ತದೆ.

Be the first to comment

Leave a Reply

Your email address will not be published.


*