ಮುಖ ಹೊಳೆಯುವಂತೆ ಆಗಬೇಕಾದರೆ 5 ನಿಮಿಷ ಮನೆಯಲ್ಲಿಯೇ ಇದನ್ನು ಹಚ್ಚಿ ಸಾಕು‌‌..

ನೀವು ಇನ್ನಷ್ಟು ಯಂಗ್ ಆಗಿ ಕಾಣ್ಬೇಕಾ? ಮುಖದಲ್ಲಿನ ನೆರಿಗೆಗಳು ಅಥವಾ ಸುಕ್ಕು, ಕಣ್ಣಿನ ಸುತ್ತಲೂ ಸುಕ್ಕುಗಟ್ಟಿರುವುದು ಇವೆಲ್ಲ ಹೋಗಿ ಉತ್ತಮವಾದ ತ್ವಚೆ ನಿಮ್ಮದಾಗ್ಬೇಕಾ? ಹಾಗಾದರೆ ನಾವೊಂದು ಸುಲಭವಾದ ಹಾಗೂ ಅತ್ಯಂತ ಪರಿಣಾಮಕಾರಿಯಾದ, ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದಾದ ಒಂದು ರೆಮಿಡಿ ಇಲ್ಲಿದೆ ನೋಡಿ.. ಇದು ಖಂಡಿತವಾಗಿಯೂ ಅತ್ಯಂತ ಬೇಗ ಉತ್ತಮ ಫಲಿತಾಂಶವನ್ನು ನೀಡುತ್ತದೆ. ಕೆಲವರಿಗೆ ಹೆಚ್ಚು ಮಯಸ್ಸಾಗದಿದ್ದರೂ ವೀಕ್ ನೆಸ್ ಅಥವಾ ಇನ್ನಿತರ ಕಾರಣಗಳಿಗೆ ಮುಖದಲ್ಲಿನ ತ್ಚಚೆ ಜೋತುಬಿದ್ದಂತೆ ಕಾಣುವ ಸಾಧ್ಯತೆಗಳಿರುತ್ತವೆ.

ಆದರೆ ಈ ಮನೆಮದ್ದು ನಿಮ್ಮ ಈ ಸಮಸ್ಯೆಯನ್ನು  ಕೂಡಲೇ ನಿವಾರಿಸಬಲ್ಲದು. ಪೇಸ್ ಪ್ಯಾಕ್ ತಯಾರಿಸಲು ಬೇಕಾಗುವ ಸಾಮಗ್ರಿಗಳು: ಒಂದು ಸಣ್ಣ ಆಲೂಗಡ್ಡೆ.. ನಿಂಬೆ ಹಣ್ಣು / ಹಾಲು.. ಕಡಲೇ ಹಿಟ್ಟು – ೧ ಸ್ಪೂನ್.. ಅಕ್ಕಿಹಿಟ್ಟು – ಅರ್ಧ ಸ್ಪೂನ್.. ಜೇನುತುಪ್ಪ – ೧ ಸ್ಪೂನ್..

ಮಾಡುವ ವಿಧಾನ.. ಒಂದು ಸಣ್ಣ ಗಾತ್ರದ ಆಲೂಗಡ್ಡೆಯನ್ನು ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ. ನಂತರ ಇದನ್ನು ಸಿಪ್ಪೆ ಸಮೇತ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ ಒಂದು ಮಿಕ್ಸರ್ ಜಾರ್ ಗೆ ಹಾಕಿಕೊಳ್ಳಿ. ಆಲೂಗಡ್ಡೆಯಲ್ಲಿರುವ ಸ್ಟಾರ್ಚ್ ಮುಖದಲ್ಲಿನ ರಂಧ್ರಗಳನ್ನು ಮುಚ್ಚಲೂ ಸಹ ಸಹಾಯಮಾಡುತ್ತದೆ. ನಂತರ ಇದಕ್ಕೆ ೪ – ೮ ಹನಿ ನಿಂಬೆ ರಸವನ್ನು ಹಾಕಿ. ನಿಮ್ಮ ತ್ವಚೆ ಶುಷ್ಕ (ಡ್ರೈ) ವಾಗಿದ್ದರೆ ನಿಂಬೆರಸದ ಬದಲು ಒಂದು ಸ್ಪೂನ್ ಹಾಲನ್ನು ಬಳಸಬಹುದು. ನಂತರ ಒಂದು ಸ್ಪೂನ್ ಕಡಲೆ ಹಿಟ್ಟು ಹಾಗೂ ಅರ್ಧ ಸ್ಪೂನ್ ಅಕ್ಕಿಹಿಟ್ಟನ್ನು ಬೆರೆಸಿ.

ಒಂದು ಸ್ಪೂನ್ ಉತ್ತಮವಾದ ಜೇನುತುಪ್ಪವನ್ನು ಸೇರಿಸಿ ರುಬ್ಬಿ. ಇದು ಒಂದು ಪೇಸ್ಟ್ ನಂತಾಗುತ್ತದೆ. ನಂತರ ಬೆಳಿಗ್ಗೆ ಎದ್ದು ಮುಖವನ್ನು ಸ್ವಚ್ಛವಾಗಿ ತೊಳೆದು ಈ ಪೇಸ್ಟ್ ನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡಿ. ಸ್ವಲ್ಪ ಸಮಯದ ನಂತರ ಮುಖವನ್ನು ಸ್ವಚ್ಛವಾಗಿ ತೊಳೆಯಿರಿ. ಅತ್ಯುತ್ತಮ ಫಲಿತಾಂಶಕ್ಕಾಗಿ ಈ ಮನೆಮದ್ದನ್ನು ದಿನವೂ ತಯಾರಿಸಿ ಹಚ್ಚುವುದು ಒಳ್ಳೆಯದು ಅಥವಾ ಕನಿಷ್ಠ ವಾರದಲ್ಲಿ ಮೂರು ದಿನವಾದರೂ ಈ ಮನೆಮದ್ದನ್ನು ಮಾಡಿ ನೋಡಿ. ಅದರಲ್ಲೂ ೩೫ ವರ್ಷ ಮೇಲ್ಪಟ್ಟವರಿಗೆ ಈ ರೆಡಿಮಿ ಅತ್ಯಂತ ಉಪಯುಕ್ತ. ಹಾಗೂ ತ್ವಚೆ ಮುಂದೆ ಇನ್ನಷ್ಟು ಸುಕ್ಕುಗಟ್ಟುವುದನ್ನೂ ಕೂಡ ಇದರಿಂದ ತಡೆಗಟ್ಟಬಹುದು.

Be the first to comment

Leave a Reply

Your email address will not be published.


*