ಐದೇ ದಿನದಲ್ಲಿ ಅತಿ ಸುಲಭವಾಗಿ ತೂಕ ಕಡಿಮೆ ಆಗಬೇಕಾದರೆ ಇದನ್ನು ಸೇವಿಸಿ ಸಾಕು..

ತಮ್ಮ ದೇಹದ ತೂಕವನ್ನು ಇಳ್ಳಿಸಿಕೊಳ್ಳುವುದೇ ಸಾಕಷ್ಟು ಜನರಿಗೆ ಇವತ್ತು ಕಾಡುತ್ತಿರುವ ಚಿಂತೆ. ತಮಗೆ ಬೇಕಾದ ಬಟ್ಟೆ ಹಾಕಿಕೊಳ್ಳುವುದಕ್ಕೆ ಆಗುವುದಿಲ್ಲವೆಂದೋ, ಎಲ್ಲರೊಂದಿಗೆ ಆರಾಮವಾಗಿ ಬೆರೆಯಲಾಗುವುದಿಲ್ಲವೆಂದೂ ಹೀಗೆ ಹಲವಾರು ಕಾರಣಗಳಿಗಾಗಿ ದೇಹ ತೂಕ ಇಳಿಸಿಕೊಳ್ಳಲು ಪ್ರತಿಯೊಬ್ಬರೂ ಹವಣಿಸುತ್ತಿರುತ್ತಾರೆ. ದೇಹ ತೂಕವನ್ನು ಇಳಿಸಿಕೊಳ್ಳಲು ಡಯಟ್ ಮಾಡುವುದು, ವ್ಯಾಯಾಮ, ಜಿಮ್ ಹೀಗೆ ಹಲವಾರು ಮಾರ್ಗಗಳನ್ನು ಅನುಸರಿಸುತ್ತಾರೆ.

ಆದರೂ ಎಷ್ಟೋ ಜನರು ಇದ್ಯಾವುದೂ ಫಲಿಸದೆ ದಿನವೂ ಕೊರಗುತ್ತಾರೆ. ಆದರೆ ಇನ್ನು ಅಂಥ ಚಿಂತೆ ನಿಮಗೆ ಬೇಡ. ನಾವಿಲ್ಲಿ ಹೇಳುವ ಒಂದೇ ಒಂದು ಜ್ಯೂಸ್ ನ್ನು ದಿನವೂ ಸೇವಿಸಿ ನಿಮ್ಮ ದೇಹದಲ್ಲಿನ ಬದಲಾವಣೆಯನ್ನು ನೀವೇ ಗಮನಿಸಿ. ಇದೊಂದು ಅತ್ಯಂತ ಉತ್ತಮ ಆರೋಗ್ಯಕರ ಜ್ಯೂಸ್ ಆಗಿದ್ದು ತೂಕ ಇಳಿಸುವುದರ ಜೊತೆಗೆ ಆರೊಗ್ಯವನ್ನೂ ಕೂಡ ವೃದ್ಧಿಸುತ್ತದೆ.

ಹಾಗಾದರೆ ಆ ಜ್ಯೂಸ್ ತಯಾರಿಸುವುದು ಹೇಗೆ ? ಮುಂದೆ ಓದಿ.. ತೂಕ ಇಳಿಸಬಲ್ಲಂತಹ ಈ ಅದ್ಭುತ ಜ್ಯೂಸ್ ತಯಾರಿಸಲು ನಿಮಗೆ ಬೇಕಾಗಿರುವುದು ಕೇವಲ ಒಂದು ಒಳ್ಳೆಯ ತಿರುಳು ಇರುವಂತಹ ಕುಂಬಳಕಾಯಿ.
ಒಂದು ಲೋಟ ಜ್ಯೂಸ್ ತಯಾರಿಸಲು ಸುಮಾರು ೨೫೦ ಗ್ರಾಂ ನಷ್ಟು ಕುಂಬಳಕಾಯಿ ತಿರುಳು ಬೇಕಾಗುತ್ತದೆ. ಕುಂಬಳಕಾಯಿಯ ಸಿಪ್ಪೆ ಹಾಗೂ ಬೀಜವನ್ನು ತೆಗೆದು ತಿರುಳನ್ನು ಮಾತ್ರ ಉಪಯೋಗಿಸಿ. ಅತ್ಯಂತ ರಸಭರಿತವಾದ ಕುಂಬಳಕಾಯಿಯಾಗಿದ್ದರೆ ಜ್ಯೂಸ್ ಕೂಡ ಅಷ್ಟೇ ರುಚಿಯಾಗಿರುತ್ತದೆ. ಕುಂಬಳಕಾಯಿಯ ಹೂಳುಗಳನ್ನು ಮಾಡಿ ಮಿಕ್ಸಿಯಲ್ಲಿ ಹಾಕಿ ರುಬ್ಬಿ ಜ್ಯೂಸ್ ತಯಾರಿಸಬಹುದು.

ಅಥವಾ ತಿರುಳನ್ನು ತುರಿದು ರಸವನ್ನು ಹಿಂಡಿ ತೆಗೆದು ಕೂಡ ಉಪಯೋಗಿಸಬಹುದು. ಇದಕ್ಕೆ ಒಂದೆರಡು ಹನಿ ನೆಂಬೆ ರಸವನ್ನು ಹಾಕಿ ಕುಡಿಯಿರಿ. ಅಥವಾ ನಿಂಬುವನ್ನು ಬೆರೆಸದೆಯೂ ಕುಡಿಯಬಹುದು. ಆದರೆ ಸಕ್ಕರೆ, ಉಪ್ಪು ಮೊದಲಾದವುಗಳನ್ನು ಮಾತ್ರ ಬೆರೆಸಬೇಡಿ. ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯಿರಿ. ನಂತರ ಒಂದು ಗಂಟೆ ಬಿಟ್ಟು ತರಕಾರಿ ಸಲಾಡ್ ನ್ನು ಮಾಡಿ ತಿನ್ನಿ. ಇತರ ಯಾವುದೇ ಆಹಾರವನ್ನೂ ಸೇವಿಸದಿರಿ.

ಸಕ್ಕರೆ ಖಾಯಿಲೆ ಇರುವವರು ಕುಂಬಳಕಾಯಿಯ ಈ ಜ್ಯೂಸ್ ತಯಾರಿಸಿ ಅದಕ್ಕೆ ೫ -೬ ಬಿಲ್ವ ಪತ್ರೆ ಎಲೆಗಳನ್ನು ಪೇಸ್ಟ್ ಮಾಡಿ ಸೇರಿಸಿ ಕುಡಿಯಬಹುದು. ಇದರಿಂದ ಶುಗರ್ ನಿಯಂತ್ರಣಕ್ಕೆ ಬರುತ್ತದೆ. ಇನ್ನು ಥೈರಾಯ್ಡ್ ಸಮಸ್ಯೆ ಇರುವವರು ಈ ಜ್ಯೂಸ್ ಗೆ ಕೊತ್ತಂಬರಿ ಸೊಪ್ಪಿನ ರಸವನ್ನು ಬೆರೆಸಿ ಬೆಳಗ್ಗೆ ಕುಡಿಯುವುದರಿಂದ ಥೈರಾಯ್ಡ್ ಕೂಡ ನಿಯಂತ್ರಣಕ್ಕೆ ಬರುತ್ತದೆ.

ಅಲ್ಲದೇ ಮೂತ್ರಕೋಶದಲ್ಲಿ ಕಲ್ಲು ಅಥವಾ ಮೂತ್ರ ವಿಸರ್ಜನೆ ಮಾಡುವಾಗ ಉರಿ ಇದ್ದಲ್ಲಿ ಬಾಳೆದಿಂಡಿನ ರಸವನ್ನು ಈ ಜ್ಯೂಸ್ ಗೆ ಮಿಶ್ರಣಮಾಡಿ ಸೇವಿಸುವುದು ಅತ್ಯಂತ ಒಳ್ಳೆಯದು.
ಪ್ರತಿದಿನವೂ ಕುಂಬಳ ಕಾಯಿ ಜ್ಯೂಸ್ ಕುಡಿದು ತರಕಾರಿ ಸಲಾಡ್ ಹಾಗೂ ಜೊತೆಗೆ ಅಗತ್ಯವಿರುವ ವ್ಯಾಯಾಮ ಮಾಡುವುದರಿಂದ ನಿಮ್ಮ ದೇಹದ ತೂಕ ಕಡಿಮೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

Be the first to comment

Leave a Reply

Your email address will not be published.


*