ಇದನ್ನು ಒಮ್ಮೆ ಕುಡಿದರೂ ಸಾಕು, 30 ಕಾಯಿಲೆ ಮಾಯವಾಗುವುದು..

ಸಾಮಾನ್ಯವಾಗಿ ನಮಗೆ ಆರೋಗ್ಯ ಹದಗೆಟ್ಟಾಗ ಅದಕ್ಕೆ ಸಂಬಂಧಿಸಿದ ಔಷಧವನ್ನು ಸೇವಿಸುತ್ತೇವೆ. ಆದರೆ ನಮಗೆ ಸಾಮಾನ್ಯವಾಗಿ ಬರುವಂತಹ ಜ್ಚರ, ನೆಗಡಿ, ಕಫ, ಜೀರ್ಣಕ್ರಿಯೆ ಸಮಸ್ಯೆ ಹೀಗೆ ಹಲವಾರು ಆರೋಗ್ಯ ಸಮಸ್ಯೆಗಳು ಆಗಾಗ ಬರದಂತೆ ಮಾಡಲು ಕೆಲವು ಮನೆಮದ್ದುಗಳು, ಕಷಾಯಗಳು ಸಹಕಾರಿಯಾಗುತ್ತವೆ. ನೈಸರ್ಗಿಕವಾಗಿ  ಸಿಗುವ ಕೆಲವು ಪದಾರ್ಥಗಳನ್ನು ಬಳಸಿಕೊಂಡು ನಾವು ತಯಾರಿಸಬಹುದಾದ ಔಷಧಗಳು ದೇಹಕ್ಕೆ ನಿಜಕ್ಕೂ ಉಪಯೋಗಕರ.

ದೇಹದಲ್ಲಿ ಅತಿಹೆಚ್ಚು ಕೆಲಸ ಮಾಡುವಂತಹ ಲಿವರ್ / ಯಕೃತ್ತು ಆರೊಗ್ಯಕರವಾಗಿರುವಂತೆ ನೋಡಿಕೊಳ್ಳುವುದು ಅತ್ಯಂತ ಅಗತ್ಯ. ಯಕೃತ್ತಿನ ಶಕ್ತಿ ಅಧಿಕವಾಗಿದ್ದಷ್ಟು ಮನುಷ್ಯ ಆರೋಗ್ಯವಂತನಾಗಿ ಹೆಚ್ಚು ಕಾಲ ಬದುಕುತ್ತಾನೆ. ಹಾಗಾಗಿ ’ಲಿವರ್ ಸೇವರ್’ ಎನಿಸಿರುವ ಅದ್ಭುತ ಪಾನೀಯವೊಂದನ್ನು ನಾವಿಲ್ಲಿ ಹೇಳುತ್ತಿದ್ದೇವೆ.

ಈ ಪಾನೀಯ ತಯಾರಿಸಲು ಬೇಕಾಗಿರುವ ಪದಾರ್ಥಗಳೆಂದರೆ; ಅಮೃತಬಳ್ಳಿ / ಅಮೃತಬಳ್ಳಿ ರಸ..
ಸೋರೆಕಾಯಿ.. ಕೊತ್ತಂಬರಿ ಪುಡಿ – ೨ ಚಮಚ.. ಅರಿಶಿನ ಪುಡಿ – ೧ ಚಮಚ.. ನಿಂಬೆರಸ – ೧ ಚಮಚ
ಬ್ಲ್ಯಾಕ್ ಸಾಲ್ಟ್ (ಸೈಂಧವ ಲವಣ) – ರುಚಿಗೆ ತಕ್ಕಷ್ಟು..

ಈ ಪಾನೀಯವನ್ನು ತಯಾರಿಸುವ ಬಗೆ ಹೀಗಿದೆ: ಮನೆಯಲ್ಲಿಯೇ ಅಮೃತ ಬಳ್ಳಿಯಿದ್ದರೆ ಚೆನ್ನಾಗಿರುವ ೯ ಅಮೃತ ಬಳ್ಳಿಯನ್ನು ತೆಗೆದುಕೊಂಡು ರಸ ತೆಗೆಯಿರಿ. ನಿಮ್ಮಲ್ಲಿ ಅಮೃತ ಬಳ್ಳಿ ಇಲ್ಲವಾದಲ್ಲಿ ಆಯುರ್ವೇದ ಔಷಧಾಲಯಗಳಲ್ಲಿ ಅಮೃತಬಳ್ಳಿಯ ರಸ / ಸಿರಪ್ ಸಿಗುತ್ತದೆ. ಅದನ್ನು ತಂತು ಈ ಪಾನೀಯಕ್ಕೆ ಬಳಸಬಹುದು. ಒಂದು ಸೋರೆಕಾಯಿಯನ್ನು ತೆಗೆದುಕೊಳ್ಳಿ. ಇದು ಆರೋಗ್ಯಕ್ಕೆ ಅತ್ಯಂತ ಉತ್ತಮವಾದ ತರಕಾರಿಯಾಗಿದೆ. ಸೋರೆಕಾಯಿಯನ್ನು ರುಬ್ಬಿ ಜ್ಯೂಸ್ ತಯಾರಿಸಿ. (ಒಬ್ಬರು ಕುಡಿಯಲು ಅರ್ಧದಷ್ಟು ಸೋರೆಕಾಯಿ ಸಾಕಾಗುತ್ತದೆ) ಈ ಜ್ಯೂಸನ್ನು ಒಂದು ಲೋಟಕ್ಕೆ ಹಾಕಿ..

ಇದಕ್ಕೆ ೩೦ ಎಂ.ಎಲ್ ನಷ್ಟು ಅಮೃತ ಬಳ್ಳಿ ರಸವನ್ನು ಸೇರಿಸಿ. ನಂತರ ಇದಕ್ಕೆ ೨ ಟೀ ಚಮಚ ಕೊತ್ತಂಬರಿ ಪುಡಿಯನ್ನು  ಸೇರಿಸಿ.  ನಂತರ ಒಂದು ಚಮಚ ಅರಿಶಿನವನ್ನು ಸೇರಿಸಿ. ನಂತರ ಒಂದು ಚಮಚದಷ್ಟು ನಿಂಬೆರಸವನ್ನು ಇದಕ್ಕೆ ಹಾಕಿ. ಈಗ ಬ್ಲ್ಯಾಕ್ ಸಾಲ್ಟ್ ನ್ನು ನಿಮ್ಮ ರುಚಿಗೆ ತಕ್ಕಷ್ಟು ಸೇರಿಸಿ. ಈ ಎಲ್ಲಾ ಪದಾರ್ಥಗಳನ್ನೂ ಹಾಕಿ ಜ್ಯೂಸ್ ನ್ನು ಚೆನ್ನಾಗಿ ಮಿಶ್ರಣಮಾಡಿ.

ಈ ಪಾನೀಯವನ್ನು ತಿಂಡಿ ತಿನ್ನುವುದಕ್ಕೂ ಒಂದು ಗಂಟೆ ಮೊದಲು ಕುಡಿಯಿರಿ. ಆದರೆ ಈ ಪಾನೀಯವನ್ನು ಕುಡಿಯುವುದಕ್ಕೂ ಎರಡು ದಿನ ಮೊದಲು ಅಧಿಕ ಆಹಾರವನ್ನು ಸೇವಿಸಬೇಡಿ. ಲಘು ಆಹಾರವನ್ನು ಸೇವಿಸಿ.
ಆರು ತಿಂಗಳಿಗೊಮ್ಮೆ ೨ರಿಂದ ೩ ದಿನ ಈ ಪಾನೀಯವನ್ನು ಸೇವಿಸುವುದು ಯಕೃತ್ತಿನ ಆರೊಗ್ಯಕ್ಕೆ ಅತ್ಯಂತ ಒಳ್ಳೆಯದು ಮತ್ತು ಹಲವು ಖಾಯಿಲೆಗಳಿಂದಲೂ ದೂರವಿರಬಹುದು,

Be the first to comment

Leave a Reply

Your email address will not be published.


*