ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ..

ಇನ್ನೇನು ಮೂರು ದಿನಗಳಲ್ಲಿ ನಾಡು ಕಂಡ ಮರೆಯಲಾಗದ ಮಾಣಿಕ್ಯ ಸಾಹಾಸಸಿಂಹ ಡಾ.ವಿಷ್ಣುವರ್ಧನ್ ಅವರ 70ನೇ ಜನ್ಮ ದಿನಾಚರಣೆಯಿದೆ.. ಈ 70ನೇ ಜನ್ಮ ದಿನಾಚರಣೆಗೂ ಮೂರು ದಿನಗಳ ಮುನ್ನವೇ ಸಾರ್ಥಕ ಕೆಲಸವೊಂದು ನೆರವೇರಿದೆ… ಹೌದು ಕಳೆದ 10 ವರ್ಷಗಳಿಂದ ಅಂದುಕೊಂಡಿದ್ದ ಕಾರ್ಯ ಇಂದು ಸಫಲವಾಗಿದೆ.. ಸಾಹಸಸಿಂಹ ಡಾ.ವಿಷ್ಣು ವರ್ಧನ್ ಅವರ ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಇಂದು ಆನ್ಲೈನ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದ್ದಾರೆ..

ಹೌದು ಇಂದು ಸಾಹಸಸಿಂಹ ಡಾ.ವಿಷ್ಣುವರ್ಧನ್​ ಅವರ ಸ್ಮಾರಕಕ್ಕೆ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅಡಿಗಲ್ಲು ಹಾಕಿದ್ದಾರೆ. ಮೈಸೂರಿನ ಹಾಲಾಳು ಗ್ರಾಮದಲ್ಲಿ ವಾರ್ತಾ ಇಲಾಖೆಯಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಯಡಿಯೂರಪ್ಪ ತಮ್ಮ ಗೃಹಕಚೇರಿಯಿಂದ ಆನ್​ಲೈನ್​ ಮೂಲಕ ಭೂಮಿಪೂಜೆ ಕಾರ್ಯ ನೆರವೇರಿಸಿದ್ದಾರೆ.. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ವಾರ್ತಾ ಇಲಾಖಾ ನಿರ್ದೇಶಕ ಡಾ.ಪಿ.ಹರ್ಷಾ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು. ಈ ವೇಳೆ ಭಾರತಿ ವಿಷ್ಣುವರ್ಧನ್​, ಅವರು ಕೀರ್ತಿ ವಿಷ್ಣುವರ್ಧನ್ ಅವರು ಅನಿರುದ್ಧ್ ಅವರು ಹಾಗೂ ಜಿಲ್ಲಾಧಿಕಾರಿ ಶರತ್, ಶಾಸಕರಾದ ಜಿ.ಟಿ.ದೇವೆಗೌಡ ಹಾಗೂ ಎಸ್.ಎ.ರಾಮದಾಸ್​ ಅವರು ಹಾಜರಿದ್ದರು..

ಈ ಹಿಂದೆಯೇ ಹೇಳಿದಂತೆ 11 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಮಾರಕ ನಿರ್ಮಾಣವಾಗಲಿದ್ದು.. ನಿರ್ಮಾಣದ ಗುತ್ತಿಗೆಯನ್ನು ಪೊಲೀಸ್​ ವಸತಿ ನಿಗಮಕ್ಕೆ ನೀಡಲಾಗಿದೆ.. ಎಂ-9 ಡಿಸೈನ್ ಸ್ಟುಡಿಯೋದಿಂದ ಆರ್ಕಿಟೆಕ್ಚರ್ ಡಿಸೈನ್​ ಮಾಡಿಸಲಾಗಿದೆ. ಸ್ಮಾರಕದಲ್ಲಿ ವಿಷ್ಣುವರ್ಧನ್ ಅವರ ಪುತ್ಥಳಿ, ಆಡಿಟೋರಿಯಂ, ಫೋಟೋ ಗ್ಯಾಲರಿ, ಉದ್ಯಾನವನ ಹಾಗೂ ವಾಟರ್‌ ಪಾಂಡ್​ ಇರಲಿದೆ ಎನ್ನಲಾಗಿದೆ..

ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು  ಡಾ. ವಿಷ್ಣುವರ್ಧನ್ ಅವರ 70ನೇ ವರ್ಷದ ಹುಟ್ಟುಹಬ್ಬದ ವಿಶೇಷ ಸಂದರ್ಭದಲ್ಲಿ ಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿದ್ದೇನೆ.. ವಿಷ್ಣುವರ್ಧನ್ ಅವರು ಕನ್ನಡ ನಾಡು ಕಂಡ ಅಪ್ರತಿಮ ಕಲಾವಿದರಲ್ಲಿ ಪ್ರಮುಖರು. ಕನ್ನಡ ಚಿತ್ರರಂಗಕ್ಕೆ ಡಾ. ರಾಜ್‍ಕುಮಾರ್ ಅವರ ನಂತರದ ಪೀಳಿಗೆಯಲ್ಲಿ ಮಹತ್ವದ ಕೊಡುಗೆ ನೀಡಿರುವವರಲ್ಲಿ ಡಾ. ವಿಷ್ಣುವರ್ಧನ್ ಅವರು ಸಹ ಸೇರಿದ್ದಾರೆ..

ಸ್ಮಾರಕ ನಿರ್ಮಾಣ ಈಗಾಗಲೇ ತಡವಾಗಿದೆ.. ಆದ್ದರಿಂದ ಕಾಮಗಾರಿಗಳನ್ನು ಆದಷ್ಟು ಬೇಗನೆ ಪೂರ್ಣಗೊಳಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು.. ವಿಷ್ಣುವರ್ಧನ್ ಅವರ ತವರು ಜಿಲ್ಲೆ ಮೈಸೂರಿನಲ್ಲಿ, ಅವರ ಸ್ಮಾರಕ ನಿರ್ಮಾಣವಾಗುತ್ತಿರುವುದು ಅತ್ಯಂತ ಔಚಿತ್ಯಪೂರ್ಣವಾಗಿದೆ.. ಸ್ಮಾರಕ ನಿರ್ಮಾಣಕ್ಕೆ 11 ಕೋಟಿ ರೂಪಾಯಿಗಳ ಅನುದಾನ ಮಂಜೂರಾಗಿದೆ.. ಕಾಮಗಾರಿ ಪ್ರಾರಂಭಿಸಲು 5 ಕೋಟಿ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.. ಆದಷ್ಟು ಬೇಗ ಸ್ಮಾರಕ ನಿರ್ಮಾಣವಾಗಲಿದೆ ಎಂದರು..

ಇದೇ ಸಮಯದಲ್ಲಿ ಭಾರತಿ‌ ವಿಷ್ಣುವರ್ಧನ್ ಅವರು ಕೀರ್ತಿ ವಿಷ್ಣುವರ್ಧನ್ ಅವರು ಹಾಗೂ ಅನಿರುದ್ಧ್ ಅವರು ಮಾತನಾಡಿ ಈ ಕಾರ್ಯ ಸಫಲವಾಗುವಂತೆ ಮಾಡಿದ, ಮುಖ್ಯಮಂತ್ರಿಗಳಿಗೆ, ಅಧಿಕಾರಿಗಳಿಗೆ, ರಾಜಕೀಯ ಮುಖಂಡರುಗಳಿಗೆ, ಪೊಲೀಸರಿಗೆ, ಆಡಳಿತ ವರ್ಗದವರಿಗೆ ಹಾಗೂ ಪ್ರತಿಯೊಬ್ಬರಿಗೂ ಅಂತರಾಳದ ಧನ್ಯವಾದಗಳನ್ನು ತಿಳಿಸಿದರು..

Be the first to comment

Leave a Reply

Your email address will not be published.


*