ಲಾಕ್ ಡೌನ್ ನಂತರ ಸಿಹಿಸುದ್ದಿ ಕೊಟ್ಟ ನಿಖಿಲ್ ರೇವತಿ..

ಸ್ಯಾಂಡಲ್ವುಡ್ ನ ಯುವರಾಜ ನಿಖಿಲ್ ಹಾಗೂ ರೇವತಿ ಜೋಡಿ ಸಿಹಿ ಸುದ್ದಿವೊಂದನು ನೀಡಿದ್ದಾರೆ.‌ ಹೌದು ಕೊರೊನಾ ಲಾಕ್ ಡೌನ್ ಸಮಯದಲ್ಲಿ ಸರಳವಾಗಿ ರಾಮನಗರದ ತೋಟದ ಮನೆಯಲ್ಲಿ ಕಲ್ಯಾಣವಾದ ನಿಖಿಲ್ ಹಾಗೂ ರೇವತಿ ಜೋಡಿ ಇದೀಗ ವೃತ್ತಿಯ ವಿಚಾರವಾಗಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ..

ಹೌದು ಲಾಕ್ ಡೌನ್ ಇದ್ದ ಕಾರಣ ಎಲ್ಲಾ ಸಿನಿಮಾ ಕೆಲಸಗಳು ಸಹ ಸ್ತಬ್ಧವಾಗಿದ್ದವು‌.‌‌. ಮದುವೆಯ ಬಳಿಕ ಯಾವ ವಿದೇಶ ಪ್ರವಾಸಕ್ಕೂ ಹೋಗುವ ಹಾಗಿರಲಿಲ್ಲ.. ಅದೇ ಕಾರಣಕ್ಕೆ ನಿಖಿಲ್ ಹಾಗೂ ರೇವತಿ ಜೋಡಿ ಬೆಂಗಳೂರಿನಿಂದ ಕೊಂಚ ದೂರ ಬಂದು ಬಿಡದಿಯ ಫಾರ್ಮ್ ನಲ್ಲಿ ನೆಲೆಸಿದ್ದರು.. ಅಲ್ಲಿಯೇ ಕೃಷಿ ಕಾಯಕದಲ್ಲಿ ತೊಡಗಿಕೊಂಡಿದ್ದ ನಿಖಿಲ್ ಅವರು ತಾತನ ಕೃಷಿ ವೃತ್ತಿಯನ್ನು ಮುಂದುವರೆಸುತ್ತಿರುವುದಾಗಿ ತಿಳಿಸಿದ್ದರು.. ಪತ್ನಿ ರೇವತಿ ಅವರೂ ಸಹ ನಿಖಿಲ್ ಅವರಿಗೆ ಸಾಥ್ ನೀಡಿದ್ದರು..

ಇನ್ನು ಮೊನ್ನೆ ಮೊನ್ನೆಯಷ್ಟೇ ವಿಶ್ವವಿಖ್ಯಾತ ಮೈಸೂರು ದಸರಾದ ಅಂಬಾರಿ‌ ಆನೆಯಾದ ಅರ್ಜುನನ ದರ್ಶನ ಪಡೆದು ಬಂದಿದ್ದರು.. ಹೌದು ನಾಗರಹೊಳೆ ಅಭಯಾರಣ್ಯಕ್ಕೆ ಪ್ರವಾಸಕ್ಕಾಗಿ ಬಂದಿದ್ದ ನಿಖಿಲ್ ಹಾಗೂ ರೇವತಿ ಅವರು ಆನೆಗಳ ಶಿಬಿರಕ್ಕೆ ಭೇಟಿ ನೀಡಿ ಅರ್ಜುನ ಹಾಗೂ ಮತ್ತಿತರ ಆನೆಗಳ ಜೊತೆ ಸಮಯ ಕಳೆದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದರು..

ಇನ್ನು ಇದೀಗ ಪತಿ ಪತ್ನಿ ಇಬ್ಬರೂ ಸಹ ಸಿಹಿಸುದ್ದಿ ನೀಡಿದ್ದಾರೆ.. ಹೌದು ಇದೀಗ ಲಾಕ್ ಡೌನ್ ಗಳು ಸಡಿಲಗೊಂಡು ಸಿನಿಮಾ ಕೆಲಸಗಳು ಶುರುವಾಗಿದೆ.. ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಮುಂದಿನ ಸಿನಿಮಾದ ಕುರಿತು ಸಂತೋಷಹಂಚಿಕೊಂಡಿದ್ದರೆ ಇತ್ತ ರೇವತಿ ಅವರೂ ಸಹ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ..

ಹೌದು ಜಾಗ್ವಾರ್, ಸೀತಾರಾಮ ಕಲ್ಯಾಣ ಕುರುಕ್ಷೇತ್ರ ಸಿನಿಮಾದ ಬಳಿಕ ನಿಖಿಲ್ ಅವರು ಇದೀಗ ನಾಲ್ಕನೇ ಸಿನಿಮಾದ ಹೆಸರನ್ನು ರಿವೀಲ್ ಮಾಡಿದ್ದಾರೆ.. ಹೌದು ನಿಖಿಲ್ ಅವರ ನಾಲ್ಕನೇ ಸಿನಿಮಾಗೆ ರೈಡರ್ ಎಂದು ಹೆಸರಿಡಲಾಗಿದ್ದು ಫರ್ಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ.. ಇನ್ನು ರೇವತಿ ಅವರೂ ಸಹ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ.. ಹೌದು ಆರ್ಕಿಟೆಕ್ಟ್ ಆಗಿರುವ ರೇವತಿ ಅವರೀಗ ತಮ್ಮದೇ ಪ್ಲಾನ್ ನಲ್ಲಿ ಮನೆಯೊಂದನ್ನು ಕಟ್ಟಿಸಲು ಮುಂದಾಗಿದ್ದಾರೆ..

ಬಿಡದಿಯ ತೋಟದಲ್ಲಿಯೇ ಪುಟ್ಟದೊಂದು ಪರಿಸರ ಸ್ನೇಹಿ ಮನೆ ಕಟ್ಟಿಸಲು ರೇವತಿ ಮುಂದಾಗಿದ್ದು ಸಂಪೂರ್ಣ ಪ್ಲಾನಿಂಗ್ ಹಾಗೂ ಮನೆಯ ಜವಾಬ್ದಾರಿ ರೇವತಿ ಅವರದ್ದೇ ಆಗಿದೆ.. ಅದಾಗಲೇ ಗೌರಿ ಹಬ್ಬದ ದಿನ ನಿಖಿಲ್ ಹಾಗೂ ರೇವತಿ ಅವರು ಭೂಮಿ ಪೂಜೆಯನ್ನು ಸಹ ನೆರವೇರಿಸಲಾಗಿದ್ದು ಇನ್ನು ಒಂದು ವರ್ಷದಲ್ಲಿ ರೇವತಿ ಅವರ ಮೊದಲ ಪ್ರಾಜೆಕ್ಟ್ ಮುಕ್ತಾಯಗೊಳ್ಳಲಿದೆ.. ಸದ್ಯ ನಿಖಿಲ್ ಹಾಗೂ ರೇವತಿ ಅವರ ಇಬ್ಬರ ವೃತ್ತಿ ಜೀವನಕ್ಕೂ ಅಭಿಮಾನಿಗಳು ಕಮೆಂಟ್ ಮೂಲಕ ಶುಭಾಶಯಗಳನ್ನು ತಿಳಿಸಿದ್ದಾರೆ..

Be the first to comment

Leave a Reply

Your email address will not be published.


*