ಎಲ್ಲರೂ ಮೆಚ್ಚಿಕೊಂಡ ದಿಯಾ ಸಿನಿಮಾದ ಜೋಡಿಯಿಂದ ಸಿಹಿ ಸುದ್ದಿ..

ಕೊರೊನಾದಿಂದಾಗಿ ಸಂಪೂರ್ಣ ಸಿನಿಮಾ ಇಂಡಸ್ಟ್ರಿ ಸ್ತಬ್ಧವಾಗಿದೆ.. ಯಾವುದೇ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ.. ಈ ವರ್ಷ ಸ್ಯಾಂಡಲ್ವುಡ್ ನಲ್ಲಿ ಬಿಡುಗಡೆಯಾಗಿದ್ದು ಕೆಲವೇ ಸಿನಿಮಾಗಳು.. ಅದರಲ್ಲಿ ಮುಖ್ಯವಾಗಿ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಒಂದೆರೆಡು ಸಿನಿಮಾ ದೊಡ್ಡ ಯಶಸ್ಸನ್ನು ಪಡೆದವು.. ಎಲ್ಲದಕ್ಕಿಂತ ಮುಖ್ಯವಾಗಿ ಜನರ ಮನಗೆದ್ದು ಸಾಮಾಜಿಕ ಜಾಲತಾಣದ ಸೆನ್ಸೇಷನ್ ಕೂಡ ಆಯಿತು..ಯಾರ ಬಾಯಲ್ಲಿ ಕೇಳಿದರೂ ಈ ಸಿನಿಮಾಗಳದ್ದೇ ಮಾತು.. ಹೌದು ಲವ್ ಮಾಕ್ಟೈಲ್ ಹಾಗೂ ದಿಯಾ ಸಿನಿಮಾ ಒಂದಷ್ಟು ವರ್ಷದವರೆಗೂ ಮನಸ್ಸಿನಲ್ಲಿ‌ ಒಂದು ರೀತಿ ಗುಂಗು ಇರುವಂತಹ ಸಿನಿಮಾಗಳಾದವು..

ಇನ್ನು ಈಗಲೂ ಸಹ ದಿಯಾ ಸಿನಿಮಾ ನೆನಪಿಸಿಕೊಂಡಾಗಲೆಲ್ಲಾ ಅಯ್ಯೋ ಆದಿ ದಿಯಾ ಒಂದಾಗಬೇಕಿತ್ತು ಎಂದುಕೊಳ್ಳೋದು ಸುಳ್ಳಲ್ಲ.. ಅದು ಸಿನಿಮಾದ ಕತೆಯಾದರೂ ಸಹ ಬಹಳಷ್ಟು ಜನ ಆದಿ ದಿಯಾಳನ್ನು ಒಂದು ಮಾಡಲಿಲ್ಲವೆಂದು ನಿರ್ದೇಶಕರಿಗೆ ಬೈದದ್ದೂ ಉಂಟು.. ಆ ಮಟ್ಟಕ್ಕಎ ಜನರ ಮನಸ್ಸು ಮುಟ್ಟುವಲ್ಲಿ ಸಿನಿಮಾ ಯಶಸ್ವಿಯಾಗಿತ್ತು..

ಇನ್ನು ದಿಯಾ ಸಿನಿಮಾದಲ್ಲಿ ಆ ಜೋಡಿ ಒಂದಾಗಲಿಲ್ಲ ಎಂದು ಕೊರಗುತ್ತಿದ್ದ ಅಭಿಮಾನಿಗಳಿಗೆ ಇದೀಗ ಸಿಹಿ ಸುದ್ದಿಯೊಂದು ಬಂದಿದೆ.. ಹೌದು ಆದಿಯಾಗಿ ಅಭಿನಯಿಸಿದ್ದ ನಟ ಪೃಥ್ವಿ ಅಂಬಾರ್ ಹಾಗೂ ದಿಯಾ ಆಗಿ ಅಭಿನಯಿಸಿದ್ದ ನಟಿ ಖುಷಿ ಅವರ ವಿಚಾರವಾಗಿ ಹೊಸದೊಂದು ಸುದ್ದಿ ಹೊರಬಂದಿದೆ..

ಹೌದು ಪೃಥ್ವಿ ಅಂಬಾರ್ ಹಾಗೂ ಖುಷಿ ಮತ್ತೊಮ್ಮೆ ತೆರೆ ಮೇಲೆ ಒಂದಾಗುತ್ತಿದ್ದು ಹೊಸ ಕತೆ ಹೊಸ ಸಿನಿಮಾ ಮೂಲಕ ಮತ್ತೆ ಒಂದಾಗಿ ಅಭಿನಯಿಸುತ್ತಿದ್ದಾರೆ.. ಸಿನಿಮಾ ಮೂಲಗಳ ಪ್ರಕಾರ ಪೃಥ್ವಿ ಹಾಗೂ ಖುಷಿ ಇಬ್ಬರು ಹೊಸ ಸಿನಿಮಾವನ್ನು‌ ಒಪ್ಪಿಕೊಂಡಿದ್ದು, ಈ ಕೊರೊನಾ ಎಲ್ಲಾ ಕಡಿಮೆಯಾದ ಬಳಿಕ ಶೂಟಿಂಗ್ ಆರಂಭವಾಗಲಿದೆ ಎಂದು ತಿಳಿದುಬಂದಿದೆ.. ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ವರ್ಷ ಈ ದಿಯಾ ಜೋಡಿ ಹೊಸ ಸಿನಿಮಾ ಮೂಲಕ ಮೋಡಿ ಮಾಡಲಿದೆ..

ಸದ್ಯ ಈ ವಿಚಾರ ತಿಳಿದು ಸಿನಿ ಪ್ರಿಯರು ದಿಲ್ ಖುಷ್ ಆಗಿ, ಈ ಸಿನಿಮಾದಲ್ಲಾದರೂ ಅವರಿಬ್ಬರನ್ನು ಒಂದು ಮಾಡಲಿ ಎಂದಿದ್ದು.. ದಿಯಾದ ಕ್ಯೂಟ್ ಕಾಂಬಿನೇಷನ್ ನ ಹೊಸ ಸಿನಿಮಾಗಾಗಿ ಕಾಯುತ್ತಿದ್ದಾರೆನ್ನಬಹುದು‌‌..

Be the first to comment

Leave a Reply

Your email address will not be published.


*