ಕೊರೊನಾ ನಡುವೆ ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬ ಆಚರಿಸಿಕೊಂಡಿರುವ ರೀತಿ ನೋಡಿ..

ಕೊರೊನಾ ಆತಂಕದ ನಡುವೆ ಯಾವುದೇ ಮದುವೆಗಳಾಗಲಿ ಸಮಾರಂಭಗಳಾಗಲಿ ಅದ್ಧೂರಿಯಾಗಿ ನಡೆಯದೆ ಸರಳವಾಗಿ ನೆರವೇರುತ್ತಿವೆ.. ಇನ್ನು ಸ್ಟಾರ್ ನಟರ ಹುಟ್ಟುಹಬ್ಬದ ವಿಚಾರದಲ್ಲಿಯೂ ಸಹ ನಟರುಗಳೇ ಅಭಿಮಾನಿಗಳ ಬಳಿ ಮನವಿ‌‌ ಮಾಡಿ ಯಾರೂ ಸಹ ಮನೆಯ ಬಳಿ ಬರಬೇಡಿ.. ಇದ್ದಲ್ಲಿಯೇ ಹಾರೈಸಿ.. ನಿಮ್ಮೆಲ್ಲರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎನ್ನುತ್ತಿದ್ದಾರೆ..

ಇನ್ನು‌ ಇಂದು ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಹುಟ್ಟುಹಬ್ಬ ವಿದ್ದು ಅವರೂ ಸಹ ಅಭಿಮಾನಿಗಳನ್ನು‌‌ ಮನೆಯ ಬಳಿ ಬರಬೇಡಿ.. ನೀವು ಇದ್ದಲ್ಲಿಯೇ ನಿಮ್ಮ ಅಕ್ಕ ಪಕ್ಕದ ಬಡವರಿಗೆ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದರು.. ಆದರೆ ಈ ಕೊರೊನಾ ಆತಂಕದ ನಡುವೆಯೂ ಪ್ರಜ್ವಲ್ ದೇವರಾಜ್ ಅವರ ಹುಟ್ಟುಹಬ್ಬ ಆಚರಣೆಯಾಗಿದೆ..

ಹೌದು ಪ್ರಜ್ವಲ್ ದೇವರಾಜ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.. ಆದರೆ ಅದ್ಧೂರಿಯಾಗಿಯಲ್ಲ.. ಬದಲಿಗೆ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಇತರರಿಗೆ ಮಾದರಿಯಾಗಿದ್ದಾರೆ..

ಹೌದು ಎಲ್ಲರಿಗೂ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ಕೊರೊನಾ ವಾರಿಯರ್ಸ್ ಗಳು ಹೆಚ್ಚಾಗಿ ಕೊರೊನಾಗೆ ತುತ್ತಾಗುತ್ತಿದ್ದಾರೆ.. ಇದೇ ಕಾರಣಕ್ಕೆ ಪ್ರಜ್ವಲ್ ದೇವರಾಜ್ ಅವರು ತಮ್ಮ ಹುಟ್ಟುಹಬ್ಬದ ದಿನದಂದು ತಮ್ಮ ಕೈಲಾದಂತೆ ಪೋಲೀಸರಿಗೆ ಅವರ ಸುರಕ್ಷತೆಗಾಗಿ ಪಿ ಪಿ ಇ ಕಿಟ್ ಗಳನ್ನು ನೀಡುವ ಮೂಲಕ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ..

ಹೌದು ಪ್ರಜ್ವಲ್ ದೇವರಾಜ್ ಅವರ ಹುಟ್ಟುಹಬ್ಬದ ಅಂಗವಾಗಿ ಹಾಗೂ ಇನ್ಸ್ ಪೆಕ್ಟರ್ ವಿಕ್ರಂ ಚಿತ್ರ ತಂಡದಿಂದ ಪೊಲೀಸರಿಗೆ ಪಿಪಿಇ ಕಿಟ್‍ಗಳನ್ನು ನೀಡಿದ್ದಾರೆ.. ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರಿಗೆ ಸುಮಾರು 200 ಪಿಪಿಇ ಕಿಟ್‍ಗಳನ್ನು ವಿತರಿಸಿದ್ದು, ಪ್ರಜ್ವಲ್ ದೇವರಾಜ್ ಅವರ ಹುಟ್ಟುಹಬ್ಬಕ್ಕೆ ಏನಾದರೂ ವಿಶೇಷ ಕೆಲಸ ಮಾಡಬೇಕು ಎಂದು ಚಿತ್ರ ತಂಡ ಆಲೋಚಿಸಿ ನಮ್ಮನ್ನು ರಕ್ಷಿಸುವ ಪೊಲೀಸರಿಗೆ ಪಿಪಿಇ ಕಿಟ್ ವಿತರಿಸಿದ್ದು ಪ್ರಜ್ವಲ್ ದೇವರಾಜ್ ಹಾಗೂ ಚಿತ್ರತಂಡದ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ..

Be the first to comment

Leave a Reply

Your email address will not be published.


*