ಮತ್ತೊಮ್ಮೆ ಕೊರೊನಾ ಬಗ್ಗೆ ಕೋಡಿ ಮಠದ ಶ್ರೀಗಳ ಭವಿಷ್ಯ.. ಬರುವ ಹುಣ್ಣಿಮೆ ಕಳೆದ ತಕ್ಷಣ..

ಈಗಾಗಲೇ ಭೂಮಿಯನ್ನು ಕಾಡುತ್ತಿರುವ ಕೊರೊನಾ ಅದ್ಯಾವಾಗ ತೊಲಗುವುದೋ ಎಂಬ ಚಿಂತೆ ಎಲ್ಲರಲ್ಲೂ ಮನೆ ಮಾಡಿದೆ.. ಒಂದು ಕಡೆ ಜೀವದ ಭಯವಾದರೆ ಮತ್ತೊಂದು ಕಡೆ ಬೀದಿಗೆ ಬೀಳುತ್ತಿರುವ ಜೀವನ.. ಇದೆಲ್ಲರದರ ನಡುವೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಆತಂಕವನ್ನುಂಟು ಮಾಡುತ್ತಿದೆ.. ಆದರೆ ಸಮಾಧಾನಕರ ಸಂಗತಿ ಏನೆಂದರೆ ಗುಣಮುಖರಾಗುವವರ ಸಂಖ್ಯೆಯೂ ಕೂಡ ಹೆಚ್ಚಾಗುತ್ತಿರುವುದು..

ಇನ್ನು ಈ ಬಗ್ಗೆ ಈಗಾಗಲೇ ಕೋಡಿ ಮಠದ ಶ್ರೀಗಳು ಎರಡು ಬಾರಿ ಭವಿಷ್ಯ ನುಡಿದು ಮುಂದೆ ಮನುಕುಲವನ್ನು ಕಾಡುವ ರೀಗ ಬರಲಿದೆ ಎಂದು ಎಚ್ಚರಿಸಿದ್ದರು. ಇದೀಗ ಮತ್ತೊಮ್ಮೆ ಕೊರೊನಾ ಬಗ್ಗೆ ಭವಿಷ್ಯ ನುಡಿದಿದ್ದಾರೆ.. ಹೌದು “ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನಲ್ಲಿರುವ ಕೋಡಿಮಠದಲ್ಲಿ ಮಾತನಾಡಿರುವ ಶ್ರೀಗಳು, ಜಗತ್ತಿನಾದ್ಯಂತ ಹಬ್ಬಿರುವ ಈ ರೋಗ ಮನುಕುಲಕ್ಕೆ ಕಂಟಕ ಪ್ರಾಯವಾಗಿದೆ. ಇದು ದಿನ ದಿನಕ್ಕೆ ಹೆಚ್ಚುತ್ತಿರುವುದು ಶೋಚನೀಯ ಪ್ರಸಂಗ…

ಮನುಷ್ಯ ಸ್ವಾರ್ಥದಿಂದ ತಂದುಕೊಳ್ಳುತ್ತಿರುವ ಈ ರೋಗ ಕೇವಲ ಮನುಕುಲ ಅಲ್ಲದೆ ಪ್ರಾಣಿ, ಪಕ್ಷಿ, ವೃಕ್ಷಗಳ ಮೇಲೆ ಬರುವ ಅವಕಾಶವಿದೆ. ಆದರೂ ಇದು ವಿಶಾಲಬುದ್ಧಿಯಿಂದ ಹೋಗಿ ಮನುಷ್ಯರಿಂದಲೇ ಹುಷಾರಾಗುವ ಲಕ್ಷಣ ಇದೆ. ಈ ರೋಗ ತಡೆಯಲು ಸ್ವಚ್ಛತೆ ಬಹಳ ಮುಖ್ಯ. ನಮ್ಮಲ್ಲಿ ಅನೇಕ ಮದ್ದು, ಅನೇಕ ವೈದ್ಯರಿದ್ದಾರೆ. ಇದು ಯಾವುದೇ ಮಟ್ಟಕ್ಕೆ ಹೋದರೂ ಹೆದರುವ ಅವಶ್ಯಕತೆ ಇಲ್ಲ ಎಂದು ಧೈರ್ಯದ ಮಾತುಗಳನ್ನಾಡಿದ್ದಾರೆ… ಈ ಹಿಂದೆ ಕೊರೊನಾ ರೋಗದ ಬಗ್ಗೆ ಎಲ್ಲ ಹೇಳಿದ್ದೇವೆ. ಬರುವ ಹುಣ್ಣಿಮೆ ಕಳೆದ ತಕ್ಷಣ ಇದರ ಬಗ್ಗೆ ವಿಸ್ತಾರವಾಗಿ ಹೇಳುತ್ತೇನೆ ಎಂದು ತಿಳಿಸಿದ್ದಾರೆ..

Be the first to comment

Leave a Reply

Your email address will not be published.


*