ಯಾವುದೇ ಆದಾಯವಿಲ್ಲ.. ನೋವು ಹಂಚಿಕೊಂಡ ಶಂಕರ್ ಅಶ್ವತ್ಥ್ ಹೆಂಡತಿಯ ಬಗ್ಗೆ ಆಡಿದ ಮಾತು ನೋಡಿ..

ಲಾಕ್ ಡೌನ್ ನಿಂದಾಗಿ‌ ನಿಜಕ್ಕೂ ಜನ ಸಾಮಾನ್ಯರ ಕಷ್ಟ ಒಂದೆರೆಡಲ್ಲ.. ಎಷ್ಟೋ ಜನರ ಜೀವನ ಬೀದಿಗೆ ಬಿದ್ದಿದೆ.. ಅತ್ತ ಯಾವುದೇ ಆದಾಯವಿಲ್ಲ.. ಇತ್ತ ಮನ್ರ್ಯ ಜವಾಬ್ದಾರಿ ನಿಭಾಯಿಸಲೇ ಬೇಕಿದೆ.. ಕೆಲಸವಿಲ್ಲ.. ವ್ಯಾಪಾರವಿಲ್ಲ..ಅದರಲ್ಲೂ ಮಧ್ಯಮ ವರ್ಗದವರ ಕಷ್ಟ ಹೇಳ ತೀರದಂತಾಗಿದೆ.. ಒಂದೆರೆಡು ತಿಂಗಳು ಹೇಗೋ ಇದ್ದ ಕಾಸು ಮ್ಯಾನೇಜ್ ಆಯಿತು.. ಆದರೆ ಈಗ ನಿಜವಾದ ತೊಂದರೆ ಎದುರಾಗುತ್ತಿರುವುದು..

ಇನ್ನು ಸಿನಿಮಾ ಕಲಾವಿದರು ಸಹ ಈ ಕಷ್ಟಗಳಿಂದ ಹೊರತಾಗಿಲ್ಲ‌.. ಅಷ್ಟೋ ಜನ ಬಡ ಕಲಾವಿದರು ಇಂದು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.. ಅದೇ ರೀತಿ ಹಿರಿಯ ನಟ ಅಶ್ವತ್ಥ್ ಅವರ ಮಗ ಶಂಕರ್ ಅಶ್ವತ್ಥ್ ಅವರೂ ಸಹ ಬಹಳಷ್ಟು ಕಷ್ಟದಲ್ಲಿದ್ದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.. ಎಲ್ಲರಿಗೂ ತಿಳಿದಿರುವಂತೆ ಶಂಕರ್ ಅಶ್ವತ್ಥ್ ಅವರು ಊಬರ್ ಕಾರ್ ಚಾಲನೆ ಮಾಡುತ್ತಾರೆ ಜೊತೆಗೆ ಸಿನಿಮಾಗಳಲ್ಲಿ ಪೋಷಕ ಪಾತ್ರಗಳನ್ನು ಮಾಡುತ್ತಾರೆ.. ಆದರೀಗ ಅತ್ತ ಯಾವುದೇ ಶೂಟಿಂಗ್ ಕೂಡ ಇಲ್ಲ.. ಇತ್ತ ಊಬರ್ ಬುಕಿಂಗ್ ಕೂಡ ಇಲ್ಲ‌..

ಈ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ‌ ಕಷ್ಟಗಳನ್ನು ಹಂಚಿಕೊಂಡಿರುವ ಅಶ್ವತ್ಥ್ ಅವರು “ಭಗವಂತ ನಮ್ಮನ್ನ ಹೇಗೆಲ್ಲಾ ಪರೀಕ್ಷೆ ಮಾಡ್ತಾನೆಂದರೆ, ನನಗೂ ಸುಮಾರು ದಿವಸಗಳಿಂದ ಆದಾಯ ಇಲ್ಲ. ಇತ್ಲಾಗೆ ಶೂಟಿಂಗ್ ಸಿನಿಮಾದೂ ಇಲ್ಲ ಸೀರಿಯಲ್ದು ಇಲ್ಲ ಇನ್ನು ಊಬರ್ ಯಾರು ಕೇಳೋ ಹಾಗೆ ಇಲ್ಲ.ಏನೋ ಒಂದೆರಡು ದಿನ ಒಂದು ಸಣ್ಣ ಪಾತ್ರಕ್ಕೆ ಕರೆ ಬಂತು ಹೋಗಿ ಬಂದೆ. ನಮ್ಮನೆ ಜೀವನ ನಡಿತಿರೋದು ಈಗ ನನ್ನ ಹೆಂಡತಿ ಕೇಟರಿಂಗ್ ಸರ್ವೀಸ್ ಮಾಡುತ್ತಿರೋದ್ರಿಂದ ಇಲ್ಲಾಂದ್ರೆ ಅಷ್ಟೆ. ನಾವು ಸಾಲ ಅಡ ಅಂತೆಲ್ಲಾ ದಾರಿನ ನೋಡ್ಕೊಬೇಕಾಗಿರೋದು. ಈ ಕೊರೊನಾ ತಂದಿಟ್ಟ ಸಮಸ್ಯೆ ಹಾಗಿದೆ.

ನಮ್ಮದು ಹೇಗೋ ನಡೆಯುತ್ತೆ.ಆದರೆ ಎಷ್ಟೋ ಕುಟುಂಬಗಳ ಪಾಡು ಏನೋ? ದೇವರೇ ಬಲ್ಲ. ಜಸ್ಟ್ ಡಯಲ್ ಗೆ ಫೋನ್ ಮಾಡಿ ಪ್ರತಿನಿತ್ಯ ಕೆಲಸ ಇಲ್ಲದೆ ಜೀವನ ನಡೆಸಲು ಕಷ್ಟ ಪಡುತ್ತಿರುವ ಹೆಂಗಸರು ನನ್ನ ಹೆಂಡತಿಗೆ ಪೋನ್ ಮಾಡಿ ಏನಾದರು ಕೆಲಸ ಕೊಡಿ ಕೊನೆಗೆ ಮುಸುರೆ ಪಾತ್ರೆ ತಿಕ್ಕೊ ಕೆಲಸನಾದ್ರೂ ಕೊಡಿ ಎಂದು ಗೋಳಾಡುತ್ತಾ ಇದ್ದಾರೆ. ಇದನ್ನು ಕೇಳಲಾರದೆ ನನ್ನ ಮಡದಿ ನಾವೆಷ್ಟೋ ಪುಣ್ಯ ಮಾಡಿದಿವಿ ಎಂದು ನೊಂದು ಕೊಂಡಳು.ದೇವರೇ ಆದಷ್ಟು ಬೇಗನೆ ನೀನೇ ಪರಿಹಾರ ತೋರಿಸು.” ಎಂದು ಬರೆದು ಪೋಸ್ಟ್ ಮಾಡಿದ್ದಾರೆ..

Be the first to comment

Leave a Reply

Your email address will not be published.


*