ಈ ಆಟೋ ಹುಡುಗನನ್ನು ಹುಡುಕುತ್ತಿರುವ ರಚಿತಾ ರಾಮ್..‌ ಕಾರಣವೇನು ಗೊತ್ತಾ?

ಬುಲ್ ಬುಲ್ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಪ್ರವೇಶ ಪಡೆದ ರಚಿತಾ ರಾಮ್ ಅವರಿಗೆ ಮೊದಲ ಸಿನಿಮಾದಲ್ಲಿಯೇ ದೊಡ್ಡ ಸ್ಟಾರ್ ಜೊತೆ ಅವಕಾಶ ಸಿಕ್ಕು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಅಭಿನಯಿಸಿ ಸೈ ಎನಿಸಿಕೊಂಡರು.. ಅಷ್ಟೇ ಅಲ್ಲದೇ ಬುಲ್ ಬುಲ್ ಸಿನಿಮಾ ರಚಿತಾ ಅವರು ಗಟ್ಟಿಯಾಗಿ ಸ್ಯಾಂಡಲ್ವುಡ್ ನಲ್ಲಿ ನೆಲೆ ಕಂಡುಕೊಳ್ಳಲು ಕಾರಣವಾಯಿತು.. ಕಿರಿತೆರೆಯಿಂದ ಅದೆಷ್ಟೋ ನಟಿಯರು ಬಂದಿದ್ದಾರೆ.. ಆದರೆ ಒಂದೆರೆಡು ಸಿನಿಮಾ ಮಾಡುವಷ್ಟರಲ್ಲಿ ಮರೆಯಾಗಿ ಬಿಡುತ್ತಾರೆ.. ಆದರೆ ಬುಲ್ ಬುಲ್ ನಂತರ ರಚಿತಾ ರಾಮ್ ಹಿಂತಿರುಗಿ ನೋಡಿದ್ದೇ ಇಲ್ಲ.. ಬಹುತೇಕ ಈಗಿನ ಎಲ್ಲಾ ಸ್ಟಾರ್ ಹೀರೋಗಳ ಜೊತೆಯೂ ಅಭಿನಯಿಸಿದರು.. ಸದ್ಯ ತಮಿಳು ಚಿತ್ರರಂಗವನ್ನೂ ಸಹ ಪ್ರವೇಶ ಮಾಡಿರುವ ಈ ಡಿಂಪಲ್ ಕ್ವೀನ್ ಗೆ ತಮ್ಮದೇ ಆದ ಫ್ಯಾನ್ ಫಾಲೋಯಿಂಗ್ ಕೂಡ ಇದೆ..

ಇದೀಗ ರಚಿತಾ ರಾಮ್ ಅವರು ತಮ್ಮ ಅಭಿಮಾನಿಯೊಬ್ಬರನ್ನು ಹುಡುಕುತ್ತಿದ್ದಾರೆ.. ಹೌದು ಫೋಟೋದಲ್ಲಿ ತೋರಿರುವ ಆಟೋ ಹುಡುಗನನ್ನು ರಚಿತಾ ರಾಮ್ ಹುಡುಕುತ್ತಿದ್ದು, ಈ ಫೋಟೋ ಕಂಡ ಕೂಡಲೇ ಇದನ್ನು ಶೇರ್ ಮಾಡಿಕೊಂಡು ನನ್ನ ಹೆಸರನ್ನು ಟ್ಯಾಗ್ ಮಾಡಿ ಎಂದು ಆ ಆಟೋ ಹುಡುಗನಲ್ಲಿ ಮನವಿ ಮಾಡಿದ್ದಾರೆ..

ಹೌದು ಸಿನಿಮಾ ಸ್ಟಾರ್ ಹೀರೋ ಗಳನ್ನು ಭೇಟಿ ಮಾಡುವ ಸಲುವಾಗಿ ಅವರ ಮನೆಗಳ ಬಳಿ ಅಭಿಮಾನಿಗಳು ಹೋಗುವುದು ಸಾಮಾನ್ಯ.. ಆದರೆ ಹೀರೊಯಿನ್ ಗಳ ವಿಚಾರದಲ್ಲಿ‌ ಇದು ಅಪರೂಪ.. ಆದರೆ ರಚಿತಾ ರಾಮ್ ಅವರನ್ನ ನೋಡುವ ಸಲುವಾಗಿ ಆಗಾಗ ಅಭಿಮಾನಿಗಳು ಅವರ ಮನೆ ಬಳಿ ತೆರೆಳುತ್ತಿರುತ್ತಾರೆ.. ಅದೇ ರೀತಿ ಕೆಲ ದಿನಗಳ ಹಿಂದೆ ಆಟೋ ಹುಡುಗರು ಮೂವರು ರಚಿತಾ ರಾಮ್ ಮನೆ ಮುಂದೆ ಹೋಗಿದ್ದಾರೆ.. ಅಂದು ರಚಿತಾ ಅವರನ್ನು ಭೇಟಿ ಮಾಡಿ ಅಲ್ಲಿಂದ ಮರಳಿದ್ದಾರೆ..

ಆದರೀಗ ಆ ಹುಡುಗನನ್ನು ರಚಿತಾ ಹುಡುಕುತ್ತಿದ್ದು, ಆ ಬಗ್ಗೆ ಪೋಸ್ಟ್ ಹಾಕಿದ್ದಾರೆ.. ಹೌದು “ಅಭಿಮಾನಿಗಳೇ ದೇವರು ಎಂದ ಅಣ್ಣಾವ್ರ ಮಾತು ಅಕ್ಷರಶಃ ಸತ್ಯ, ಪ್ರತಿದಿನ ಎಷ್ಟೋ ಅಭಿಮಾನಿಗಳು ಸೋಷಿಯಲ್ ಮೀಡಿಯಾದ ಮುಖಾಂತರ ಅಭಿಮಾನವನ್ನ ವ್ಯಕ್ತ ಪಡಿಸ್ತಾರೆ.. ತುಂಬಾ ಸಂತೋಷ ಆಗುತ್ತೆ. ಆದ್ರೇ ಇವತ್ ಬೆಳಿಗ್ಗೆ ಅಮ್ಮ ಬಂದು “ರಚ್ಚು ಬೆಳಿಗ್ ಬೆಳಿಗ್ಗೆನೇ ಯಾರೋ ಮನೆ ಮುಂದೆ ಕಾಯ್ತಿದಾರೆ ನೋಡು ಅಂದರು.. ನಾನು ಹೊರಗಡೆ ಬಂದು ನೋಡ್ದೇ ಒಂದು ಆಟೋ ಪಕ್ಕ ಮೂರು ಜನ ನಮ್ಮ ಮನೆಯ ಕಡೆ ಮುಖ ಮಾಡಿ ನಿಂತಿದ್ರು. “ನನ್ನ ನೋಡ್ತಿದ್ದ ಹಾಗೆ ತುಂಬಾ ಎಕ್ಸೈಟ್ ಆದ್ರು, ಅವರ ಬಳಿ ಹೋಗ್ತಿದ್ದ ಹಾಗೆ ನನ್ನ ಒಂದು ಮಾತು ಆಡಕ್ಕೂ ಬಿಡ್ದೇ “ಮೇಡಂ ನಾವ್ ನಿಮ್ ದೊಡ್ ಅಭಿಮಾನಿ ಮೇಡಂ ನನ್ ಆಟೋ ಮೇಲ್ 1st ಫೋಟೋ ನಿಮ್ದೇ ಇರ್ಬೇಕು ಮೇಡಂ” ಎಂದು ಗಿಫ್ಟ್ ಓಪನ್ ಮಾಡ್ಸಿ ನನ್ನ ಫೋಟೋನ ಆಟೋ ಮೇಲೆ ಅಂಟಿಸಿ ನನ್ನ ಆಟೋಗ್ರಾಫ್ ತೆಗೆದುಕೊಂಡು, ಅವರ ನೆಚ್ಚಿನ ಆಟೋ ಜೊತೆ ನನ್ನ ಫೋಟೋ ಕ್ಲಿಕ್ಕಿಸಿ ತಾವೂ ಸೆಲ್ಫಿ ತೆಗೆದುಕೊಂಡು ಹೊರಡಲು ಮುಂದಾದರು, ನಿಜಕ್ಕೂ ಭಾವುಕಳಾದೆ..

ಹೆಸರು ಕೇಳಬೇಕು ಎನ್ನುವಷ್ಟರಲ್ಲಿ ತುಂಬಾ ಉತ್ಸುಕರಾಗಿ ನಗುತ್ತಲೇ ಹೊರಟೇ ಬಿಟ್ಟರು. ತಮ್ಮ ಹೆಸರು, ಊರು ಯಾವುದೂ ಹೇಳದೆ ಕೇವಲ ತಮ್ಮ ಕಾರ್ಯ ವೈಖರಿ, ನನ್ನ ಮೇಲಿನ ಅಭಿಮಾನವನ್ನ ವ್ಯಕ್ತಪಡಿಸಿದ ಅಭಿಮಾನಿಗಳಿಗೆ ಸದಾ ಚಿರಋಣಿ.. ನಿಮ್ಮ ಪ್ರೀತಿಯ ಆಟೋ ನಿಮ್ಮ ಜೀವನದ ಪಯಣವನ್ನ ಸುಖಕರವಾಗಿರಿಸಲಿ ಅಂತ ದೇವರಲ್ಲಿ ಬೇಡ್ಕೋತೀನಿ. ನನ್ನ ಕಲಾಬದುಕಿಗೆ ಜೀವ ಕೊಟ್ಟವರು ಅಭಿಮಾನಿಗಳು. ಅಭಿಮಾನಿಗಳ ಹೃದಯ ಶ್ರೀಮಂತಿಕೆಯ ಮುಂದೆ ಬೇರೆಲ್ಲ ಶೂನ್ಯ ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ. ಭಾವುಕಳಾದ ಕ್ಷಣದಲ್ಲಿ ಅವರ ಹೆಸರು ವಿವರ ತೆಗೆದುಕೊಳ್ಳಲಾಗಲಿಲ್ಲ, ದಯವಿಟ್ಟು ಈ ಪೋಸ್ಟ್ ನೋಡಿದ ಕೂಡಲೇ ನೀವು ಈ ಫೋಟೋವನ್ನ ನಿಮ್ಮ ಇನ್ಸ್ಟಾಗ್ರಾಂ ನಲ್ಲಿ ಹಾಕಿ ನನ್ನನ್ನ ಟ್ಯಾಗ್ ಮಾಡಿ. ನಾನು ಮತ್ತೆ ರೀಪೋಸ್ಟ್ ಮಾಡುತ್ತೆನೆ.. ಜೊತೆಗೆ ನಿಮ್ಮ ಹೆಸರು ತಿಳಿದುಕೊಳ್ಳಬೇಕೆಂಬ ಆಸಕ್ತಿ ನನಗಿದೆ.” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.. ಈ ಆಟೋ ಹುಡುಗ ನಿಮಗೆ ತಿಳಿದಿದ್ದರೆ ಟ್ಯಾಗ್ ಮಾಡಿ.. ಅಭಿಮಾನಿಯ ಅಭಿಮಾನಕ್ಕೆ ಬೆಲೆ ಕೊಟ್ಟ ರಚಿತಾರಿಗೆ ಧನ್ಯವಾದಗಳು..

Be the first to comment

Leave a Reply

Your email address will not be published.


*