ಧೃವ ಸರ್ಜಾ ಅವರ ಆರೋಗ್ಯದಲ್ಲಿ ಏರುಪೇರು ವಿಚಾರಕ್ಕೆ ಖುದ್ದು ಸ್ಪಷ್ಟನೆ ಕೊಟ್ಟ ಕುಟುಂಬದ ಆಪ್ತರು..

ಕೆಲವರಿಗೆ ಮಾಡೋಕೆ ಕೆಲಸ ಇಲ್ಲ ಎಂದಾಗ ಇಲ್ಲ ಸಲ್ಲದನ್ನು ಸಾಮಾಜಿಕ ಜಾಲತಾಣದಲ್ಲಿ ಹಬ್ಬಿಸುವ ಹೊಸ ಕೆಲಸವನ್ನ ಶುರು ಮಾಡ್ಕೊಂಡಿದ್ದಾರೆ ಅನ್ಸತ್ತೆ.. ಅದು ಸಾಮಾನ್ಯ ದಿನಗಳಲ್ಲಿಯಾದರೆ ಏನೋ‌ ಇರಲಿ ಎನ್ನಬಹುದು.‌ ಆದರೆ ಈಗಾಗಲೇ ಆ ಕುಟುಂಬ ಚಿರಂಜೀವಿ ಅವರನ್ನು ಕಳೆದುಕೊಂಡು ಸಾಕಷ್ಟು ನೋವಿನಲ್ಲಿದೆ‌‌.. ಇಂತಹ ಸಮಯದಲ್ಲಿ ಆ ಕುಟುಂಬದ ಬಗ್ಗೆ ಊಹಾಪೋಹಗಳನ್ನು ದಯಮಾಡಿ ಯಾರೂ ಹಬ್ಬಿಸಬೇಡಿ..

ಇನ್ನು ಇಂದು ಧೃವ ಸರ್ಜಾ ಅವರ ಆರೋಗ್ಯದಲ್ಲಿ ಏರು ಪೇರಾಗಿದೆ ಎಣ್ಬ ಸುದ್ದಿ ಹಬ್ಬಿತ್ತು.. ಆದರೀಗ ಆ ಎಲ್ಲದಕ್ಕೂ ಖುದ್ದು ಕುಟುಂಬದ ಆಪ್ತರಾದ ಪ್ರಶಾಂತ್ ಸಂಬರ್ಗಿ ಸ್ಪಷ್ಟನೆ ನೀಡಿದ್ದಾರೆ.. ಹೌದು ಯಾರೇ ಆಗಲಿ ಆತ ಯಾವ ದೊಡ್ಡ ಸ್ಟಾರ್ ಆಗಲಿ.. ಆತನೂ ಒಬ್ಬ ಮನುಷ್ಯನೇ ಆತನಿಗೂ ಕುಟುಂಬ ಅಂತ ಬಂದಾಗ ಅದರಲ್ಲೂ ಬಹಳ ಪ್ರೀತಿಸುತ್ತಿದ್ದ ಅಣ್ಣನನ್ನು ಕಳೆದುಕೊಂಡಾಗ ಸ್ವಲ್ಪ ಮಂಕಾಗುವುದು ಇದ್ದೇ ಇರುತ್ತದೆ..

ಅದೇ ರೀತಿ ಧೃವ ಸರ್ಜಾ ನೋವಿನಲ್ಲಿದ್ದಾರೆ.. ಯಾರೊಂದಿಗೂ ಅಷ್ಟಾಗಿ ಮಾತನಾಡುತ್ತಿಲ್ಲ.. ಅದನ್ನು ಬಿಟ್ಟರೆ ಅವರಿಗೆ ಏನೂ ಆಗಿಲ್ಲ.. ಯಾರೇ ಆಗಲಿ ಅವರಿಗೆ ಕೆಲವೊಂದು ಪರ್ಸನಲ್ ಸ್ಪೇಸ್ ಕೊಡಬೇಕಾಗತ್ತೆ.. ಅದೇ ರೀತಿ ಧೃವ ಅವರ ಕೆಲವು ಪರ್ಸನಲ್ ನೋವುಗಳನ್ನು ಕೆದಕಿ‌ ಮಾತನಾಡುವುದು ಬೇಡ.. ಧೃವ ಬಹಳ ಸ್ಟ್ರಾಂಗ್ ಪರ್ಸನ್.. ಆದರೆ ಯಾರೇ ಆದರೂ ಸ್ವಂತ ಅಣ್ಣನನ್ನು ಈ ರೀತಿ ಸಡನ್ ಶಾಕ್ ಆಗಿ ಕಳೆದುಕೊಂಡಾಗ ಅವರು ಆ ನೋವಿನಲ್ಲಿಯೇ ಇರ್ತಾರೆ.. ಜನರೊಂದಿಗೆ ಬೆರೆಯೋದು ಕಡಿಮೆ ಆಗೇ ಆಗುತ್ತದೆ.. ಅವರಿಗೆ ಸಹಜ ಜೀವನಕ್ಕೆ ಮರಳಲು ಕಾಲಾವಕಾಶ ಕೊಟ್ಟು ಬಿಡಬೇಕು ಎಂದಿದ್ದಾರೆ..

ಇನ್ನು ಎರಡು ದಿನಗಳ ಹಿಂದೆ ಧೃವ ಸರ್ಜಾ ಅವರು ನಿದ್ರೆ ಬರುತ್ತಿಲ್ಲ ಎಂಬ ಕಾರಣಕ್ಕೆ ಆಸ್ಪತ್ರೆಗೆ ಭೇಟಿ ನೀಡಿದ್ದರು ಎಂಬ ಸುದ್ದಿಯ ಬಗ್ಗೆ ಮಾತನಾಡಿದ ಪ್ರಶಾಂತ್ ಅವರು ಈ ಬಗ್ಗೆ ನನಗೆ ಮಾಹಿತಿ ತಿಳಿದಿದ್ದರೂ ನಾನದನ್ನು ಹೇಳಲು ಇಷ್ಟ ಲಡುವುದಿಲ್ಲ.. ಆದರೆ ಧೃವ ಸರ್ಜಾ ಈ ಎಲ್ಲಾ ನೋವಿನಿಂದ ಆದಷ್ಟು ಬೇಗ ಹೊರ ಬರಲಿ.. ಆ ಕುಟುಂಬಕ್ಕೆ ಆಗಿರುವುದು ಸಣ್ಣ ನೋವಲ್ಲಾ.. ದೊಡ್ಡ ಲಾಸ್.‌. ಅದರಿಂದ ಅವರು ಚೇತರಿಸಿಕೊಳ್ಳಲಿ ಎಂದಿದ್ದಾರೆ..

Be the first to comment

Leave a Reply

Your email address will not be published.


*