ದೊಡ್ಡತನ ತೋರಿದ ರಾಧಿಕಾ ಪಂಡಿತ್.. ಪಕ್ಕದಲ್ಲಿ ನಿಂತಿರುವ ಈ ಮಹಿಳೆ ಯಾರು ಗೊತ್ತಾ?

ಸೆಲಿಬ್ರೆಟಿಗಳು ಎಂದಾಕ್ಷಣ ನಮ್ಮೆಲ್ಲರ ಮನಸ್ಸಿನಲ್ಲಿ ಬೇರೆಯದ್ದೇ ಕಲ್ಪನೆಗಳಿವೆ.. ಅವರು ಯಾರ ಬಳಿಯೂ ಹೆಚ್ಚು ಸೇರೋದಿಲ್ಲ.. ಅಹಂಕಾರ ಹಾಗೆ ಹೀಗೆ ಅನ್ನೋ ಕಲ್ಪನೆ ಇದ್ದೇ ಇದೆ.. ಆದರೆ ಇದು ಕೆಲವರ ವಿಚಾರದಲ್ಲಿ ಮಾತ್ರ ಸತ್ಯ… ಮತ್ತಷ್ಟು ಮಂದಿ ನಮ್ಮ ನಿಮ್ಮಂತೆಯೇ ಸರಳವಾಗಿ ಎಲ್ಲರೊಂದಿಗೂ ಬೆರೆತು ಸಮಯ ಕಳೆಯುತ್ತಾರೆ..

ಇನ್ನು ರಧಿಕಾ ಪಂಡಿತ್ ಅವರೂ ಸಹ ಎಂದೂ ಯಾರ ಜೊತೆಯೂ ಅಹಂಕಾರದಿಂದ ನಡೆದುಕೊಂಡವರಲ್ಲ.. ಅತ್ಯಂತ ಸರಳ ವ್ಯಕ್ತಿತ್ವದ ರಾಧಿಕಾ ಪಡಿತ್ ಇದುವರೆಗೂ ಸ್ಯಾಂಡಲ್ವುಡ್ ನಲ್ಲಿ ಯಾವುದೇ ಕಾಂಟ್ರೋವರ್ಸಿ‌ ಇಲ್ಲದ ನಟಿ ಎಂದೂ ಕೂಡ ಹೆಸರು ಪಡೆದಿದ್ದವರು.. ಸಿನಿಮಾ ವಿಚಾರ ಬಂದರೆ ತಾವಾಯ್ತು ತಮ್ಮ ಕೆಲಸ ವಾಯ್ತು ಅಷ್ಟೇ ಎನ್ನುತ್ತಿದ್ದ ರಾಧಿಕಾ ಪಂಡಿತ್.. ತಮ್ಮ ಮನೆಯಲ್ಲಿ ಮಾತ್ರ ಸುಮ್ಮನೆ ಕೂರೋದಿಲ್ಲ..

ಸದ್ಯ ರಾಧಿಕಾ ಪಂಡಿತ್ ಅವರು ತಾವೇ ಸ್ವತಃ ಕೇಕ್ ತಯಾರಿಸಿ ಮಹಿಳೆಯೊಬ್ಬರ ಹುಟ್ಟು ಹಬ್ಬ ಆಚರಿಸಿರುವ ಫೋಟೋ ಇದು.. ಇನ್ನು ಈ ಫೋಟೋ ದಲ್ಲಿರುವವರು ಯಾರು? ರಾಧಿಕಾ ಪಂಡಿಗ್ ಅವರ ಆಪ್ತರಾ? ಅಥವಾ ಸಂಬಂಧಿಕರಾ ಎಂಬ ಪ್ರಶ್ನೆ ಮೂಡೋದು ಸಹಜ.. ಆದರೆ ನಿಜ ಹೇಳಬೇಕು ಎಂದರೆ ಇವರು ರಾಧಿಕಾ ಪಂಡಿತ್ ಅವರ ಮನೆಯಲ್ಲಿ 8 ವರ್ಷಗಳಿಂದ ಮನೆ ಕೆಲಸ ಮಾಡಿಕೊಂಡು ಇರುವವರು.. ಆದರೆ ರಾಧಿಕಾ ಪಂಡಿತ್ ಅವರು ಹಾಗೂ ಅವರ ಕುಟುಂಬ ಮಾತ್ರ ಇವರನ್ನೂ ಸಹ ತಮ್ಮ ಕುಟುಂಬದ ಸದಸ್ಯೆಯಂತೇ ಕಾಣುತ್ತಾರೆ..

ಇನ್ನು ಕೊರೊನಾ ಸಮಯದಲ್ಲಿ ಎಷ್ಟೋ ಜನ ಕೆಲಸದವರನ್ನು ತೆಗೆದು ಹಾಕಿದ್ದಾರೆ.. ಆದರೆ ರಾಧಿಕಾ ಪಂಡಿತ್ ಮಾತ್ರ ಲಾಕ್ ಡೌನ್ ಸಮಯದಲ್ಲಿ ತಮ್ಮ ಮನೆ ಕೆಲಸದವರ ಕಾಳಜಿಯನ್ನು ತೆಗೆದುಕೊಳ್ಳಬೇಕಾದದ್ದು ನಮ್ಮ ಕರ್ತವ್ಯ ಎಂದಿದ್ದಾರೆ.. ಅಷ್ಟೇ ಅಲ್ಲದೇ ಅವರ ಹುಟ್ಟುಹಬ್ಬವನ್ನು ಆಚರಿಸುವ ಸಲುವಾಗಿ ಖುದ್ದು ಅವರೇ ಕೇಕ್ ತಯಾರಿಸಿ ಅದನ್ನು ಕಟ್ ಮಾಡಿಸಿ ಸಂಭ್ರಮಾಚರಿಸಿ ಆ ಹೆಣ್ಣು ಜೀವದ ಮನಸ್ಸಿಗೆ ಸಂತೋಷ ನೀಡಿದ್ದಾರೆ..

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿರುವ ರಾಧಿಕಾ ಪಂಡಿತ್ ಅವರು “ಇವರು ಗೀತಾ.. 8 ವರ್ಷದಿಂದ ನಮ್ಮ ಮನೆಯಲ್ಲಿ ಸಹಾಯಕರಾಗಿದ್ದಾರೆ.. ಇವರು ನಮ್ಮ ಕುಟುಂಬದಲ್ಲಿ ಒಬ್ಬರು.. ನಮ್ಮನ್ನೆಲ್ಲಾ ಬಹಳ ಕಾಳಜಿಯಿಂದ ನೋಡಿಕೊಂಡಿದ್ದಾರೆ.. ಆದರೆ ಇಂತಹ ಕಷ್ಟದ ಸಮಯದಲ್ಲಿ ನಾವುಗಳು ಅವರ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಿದೆ.. ಯಾವುದೇ ಕಾರಣಕ್ಕೂ ಇವರನ್ನು ನಾವುಗಳು ಮರೆಯಬಾರದು.. ಅವರು ಬಹಳ ಪ್ರಾಮುಖ್ಯರು.. ಈ ಕೇಕ್ ಕೆಲ ದಿನಗಳ ಹಿಂದೆ ಅವರ ಹುಟ್ಟುಹಬ್ಬಕ್ಕಾಗಿ ನಾನು ಮಾಡಿದ್ದು..” ಎಂದು ಬರೆದು ಹೃದಯದ ಎಮೋಜಿ ಹಾಕಿ ಪೋಸ್ಟ್ ಮಾಡಿದ್ದಾರೆ.. ರಾಧಿಕಾ ಪಂಡಿತ್ ಅವರ ದೊಡ್ಡಗುಣಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಗೀತಾ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ..

Be the first to comment

Leave a Reply

Your email address will not be published.


*