ಅಂದು ಮೋದಿ ಅವರು ಹೊಗಳಿದ ಕೆರೆ ಕಾಮೇಗೌಡರ ಮನೆಗೆ ತಲುಪಿತು ವಿಶೇಷ ಉಡುಗೊರೆ..

ಆತನೊಬ್ಬ ಆಧುನಿಕ ಭಗೀರಥ.. ನಾವಾದರೋ ನೀರನ್ನು ಕೇಳಿ ಪಡೆಯುತ್ತೇವೆ.. ಕೊಂಡು ಪಡೆಯುತ್ತೇವೆ.. ಆದರೆ ಮೂಕ ಪ್ರಾಣಿ ಪಕ್ಷಿಗಳು ಏನು ಮಾಡುತ್ತವೆ? ಅವರ ಜಾಗಗಳನ್ನು ಆಕ್ರಮಿಸಿಕೊಂಡು ಮಾವು ಬದುಕು ಕಟ್ಟಿಕೊಳ್ಳುತ್ತಿದ್ದೇವೆ.. ಅಂತಹುದರಲ್ಲಿ ಜನರಿಗ್ರ್ ಹಾಗೂ ಪ್ರಾಣಿ‌ ಪಕ್ಷಿಗಳಿಗೆ ನೆರವಾಗಲೆಂದು ಆತ ಮಾಡಿದ ಆ ಒಂದು ಕೆಲಸ ಇಂದು ದೇಶದ ಪ್ರಧಾನಿ ಮೋದಿ ಅವರೇ ಗುರುತಿಸಿ ಮೆಚ್ಚುಗೆ ವ್ಯಕ್ತ ಪಡಿಸುವಂತಾಯಿತು.. ಅವರು ಮತ್ಯಾರೂ ಅಲ್ಲ..‌ ಮಂಡ್ಯದ ಕೆರೆ ಕಾಮೇ ಗೌಡರು..

ಅಂದು ಹಲವು ವರ್ಷಗಳ ಹಿಂದೆ ತಮ್ಮ ಸೊಸೆ ಗರ್ಭಿಣಿ ಆದ ಸಮಯದಲ್ಲಿ ಹೆರಿಗೆ ಖರ್ಚಿಗೆಂದು ಕಾಮೇ ಗೌಡರು 20 ಸಾವಿರ ರೂಪಾಯಿಗಳನ್ನು ಕೂಡಿಟ್ಟಿದ್ದರು.. ಆದರೆ ಸರ್ಕಾರಿ ಆಸ್ಪತ್ರೆಯಲ್ಲಿ ಅವರ ಸೊಸೆಗೆ ನಾರ್ಮಲ್ ಡೆಲಿವರಿ ಆಯಿತು.. ಗಂಡು‌ಮಗು ಜನಿಸಿತು.. ಆ ಮಗುವಿಗೆ ಕೃಷ್ಣ ಎಂಬ ಹೆಸರನ್ನಿಟ್ಟರು.. ಸುಲಲಿತವಾಗಿ ಯಾವುದೇ ತೊಂದರೆ ಇಲ್ಲದೇ ಭೂಮಿಗೆ ಬಂದ ಕೃಷ್ಣ ಉಳಿಸಿದ 20 ಸಾವಿರ ರೂಪಾಯಿಯಲ್ಲಿ ಅಂದು ಒಂದು ಪುಟ್ಟ ಕೆರೆಯನ್ನು ನಿರ್ಮಿಸಿದರು.. ಅನೇಕ ಜನರಿಗೆ, ಜಾನುವಾರುಗಳಿಗೆ ಅದು ಉಪಯೋಗವಾಯಿತು..

ಆನಂತರ ಕಾಮೇಗೌಡರ ಕೆಲಸವನ್ನು ಗುರುತಿಸಿ ಕುಮಾರಸ್ವಾಮಿ ಅವರಿದ್ದಾಗ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದರು.. ಅದರಲ್ಲಿ ಒಂದು ಲಕ್ಷ ಹಣ ಬಂತು.. ಅದನ್ನು ಮತ್ತೆ ಕೆರೆ ಕಟ್ಟಲೆಂದೇ ಉಪಯೋಗಿಸಿದರು.. ಕೆರೆಯ ನೀರು ಕೆರೆಗೆ ಚೆಲ್ಲಿ ಎನ್ನುವಂತೆ ಈ ಆಧುನಿಕ ಭಗೀರಥನಿಂದ ನಿರ್ಮಾಣಗೊಂಡಿದ್ದು ಬರೋಬ್ಬರಿ 16 ಕೆರೆಗಳು.. ಇನ್ನು ಗಿಡಗಳ ವಿಚಾರಕ್ಕೆ ಬಂದರೆ ಲೆಕ್ಕವೇ ಇಲ್ಲ.. ಈ ಕೆರೆ ಕಾಮೇಗೌಡರ ಕೈಯಲ್ಲಿ ನೆಟ್ಟ ಸಾವಿರಾರು ಗಿಡಗಳೀಗ ಮರಗಳಾಗಿ ಪ್ರಕೃತಿ‌ ಮಾತೆಯ ಕುಟುಂಬ ಸೇರಿದೆ..

ಇಂತಹ ಸಂತನನ್ನು ಗುರುತಿಸಿ ಮೋದಿಯವರು‌ ಮೊನ್ನೆ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮೆಚ್ಚುಗೆ ವ್ಯಕ್ತ ಪಡಿಸಿದ್ದರು.. ಇದೀಗ ರಾಷ್ಟ್ರ ಮಟ್ಟದಲಿ ಹೆಸರು ಮಾಡಿದ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸನ ದೊಡ್ಡಿಯ ಈ ಕೆರೆ ಕಾಮೇ ಗೌಡರಿಗೆ ಇಂದು ಕೆ ಎಸ್ ಆರ್ ಟಿ ಸಿ ಕಡೆಯಿಂದ ಉಡುಗೊರೆಯೊಂದು ದೊರೆತಿದೆ..

ಹೌದು ಕೆರೆ ಕಾಮೇಗೌಡರು‌ ಇಷ್ಟು ಸೇವೆ ಮಾಡಿದ್ದಕ್ಕಾಗಿ ಆತ ಬೇರೇನೆನ್ನೂ ಕೇಳಲಿಲ್ಲ.. ಬದಲಿಗೆ ನನಗೊಂದು ಉಚಿತ ಬಸ್ ಪಾಸ್ ಕೊಡಿ.ಮ್ ಅಕ್ಕ ಪಕ್ಕದ ಊರಿನ ದೇವಸ್ಥಾನಗಳಿಗೆ ಹೋಗಲು ನನಗೆ ಅನುಕೂಲ ಆಗುತ್ತದೆ ಎಂದು ಮನವಿ ಮಾಡಿಕೊಂಡಿದ್ದರು.. ಇದೀಗ ಈ ವಿಚಾರ ತಿಳಿದ ಕೆ ಎಸ್ ಆರ್ ಟಿ ಸಿ ಸಂಸ್ಥೆ ತಕ್ಷಣ ಕೆರೆ ಕಾಮೇ ಗೌಡರಿಗೆ ಉಚಿತ ಬಸ್ ಪಾಸ್ ನೀಡಿದೆ.. ಅದು ಸಹ ಕೇವಲ ಅಕ್ಕ ಪಕದ ಊರಿಗೆ ಹೋಗಲು ಮಾತ್ರವಲ್ಲ.. ಬದಲಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಯಾವ ಬಸ್ ಗಳಲ್ಲಿಯಾದರೂ ಎಲ್ಲಿಗೆ ಬೇಕಾದರೂ ಜೀವಿತಾವಧಿವರೆಗೂ ವೋಲ್ವೋ ರಾಜಹಂಸ ಸೇರಿದಂತೆ ಯಾವ ಬಸ್ ನಲ್ಲಿಯಾದರೂ ಇನ್ನು ಮುಂದೆ ಕೆರೆ ಕಾಮೆಗೌಡರು ಸಂಚರಿಸಬಹುದಾಗಿದೆ..

ನಿಜಕ್ಕೂ ಕಾಮೇಗೌಡರಿಗೆ ಅವರಿಗೆ ಅವಶ್ಯಕತೆ ಇರುವ ಉಡುಗೊರೆಯನ್ನೇ ಸಾರಿಗೆ ಸಂಸ್ಥೆ ನೀಡಿದೆ.. ಸಂಸ್ಥೆಯ ಮುಖ್ಯಸ್ಥರಿಗೆ ಕನ್ನಡಿಗರ ಪರವಾಗಿ ಮನಃಪೂರ್ವಕ ಧನ್ಯವಾದಗಳು..

Be the first to comment

Leave a Reply

Your email address will not be published.


*