ಮುಂಗಾರು ಮಳೆಗೂ ಮುನ್ನ ಗಣೇಶ್ ಕಷ್ಟದ ಸಮಯದಲ್ಲಿ ದುಡ್ಡು ಕೊಡುತ್ತಿದ್ದ ಸ್ಟಾರ್ ನಟ ಇವರೇ..

ಗೋಲ್ಡನ್ ಸ್ಟಾರ್ ಗಣೇಶ್ ಏನೂ ಬ್ಯಾಕ್ ಗ್ರೌಂಡ್ ಇಲ್ಲದೇ ಪ್ರತಿಭೆಯನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಕಷ್ಟಪಟ್ಟು ಸ್ಯಾಂಡಲ್ವುಡ್ ನಲ್ಲಿ ನೆಲೆ ಕಟ್ಟಿಕೊಂಡವರು.. ಎಲ್ಲರಿಗೂ ತಿಳಿದಂತೆ ಮುಂಗಾರು ಮಳೆ ಸಿನಿಮಾ ಗಣೇಶ್ ಅವರಿಗೆ ದೊಡ್ಡ ಹೆಸರು ತಂದು ಕೊಟ್ಟಿತು.. ಮುಂಗಾರು ಮಳೆ ಗಣೇಶ್ ಎಂದೇ ಖ್ಯಾತಿ ಗಳಿಸಿದರು.. ಆ ಸಿನಿಮಾಗೂ ಮುನ್ನ ಪಟ್ಟ ಅಷ್ಟೂ ಕಷ್ಟಕ್ಕೆ ಮುಂಗಾರು ಮಳೆ ಒಂದೇ ಸಿನಿಮಾ ಇವರನ್ನು ಸ್ಟಾರ್ ಹೀರೋಗಳ ಪಟ್ಟಿಯಲ್ಲಿ ಸೇರಿಸಿತು.. ನಂತರ ಹಿಂತಿರುಗಿ ನೋಡಿದ್ದೇ ಇಲ್ಲ.. ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದರು.. ಈಗ ಕೆಜಿಎಫ್ ಹೇಗೆ ಕನ್ನಡ ಸಿನಿಮಾ ಇಂಡಸ್ಟ್ರಿಯ ಚಿತ್ರಣವನ್ನೇ ಬದಲಿಸಿತೋ.. ಅದೇ ರೀತಿ ಈ ಹಿಂದೆ ಮುಂಗಾರು ಮಳೆ ಹಾಗೂ ದುನಿಯಾ ಸಿನಿಮಾಗಳು ಆ ಸಮಯದಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿಗೆ ದೊಡ್ಡ ಹೆಸರು ತಂದುಕೊಟ್ಟದ್ದು ಮಾತ್ರ ಸುಳ್ಳಲ್ಲ..

ಆದರೆ ಗಣೇಶ್ ಸಿನಿಮಾಗೂ ಮುನ್ನ ಕಾಮಿಡಿ ಟೈಮ್ ಗೂ ಮುನ್ನ ಅವಕಾಶಕ್ಕಾಗಿ ಹುಡುಕುತ್ತಿದ್ದ ಸಮಯದಲ್ಲಿ ನಾಗಶೇಖರ್ ಅವರ ಜೊತೆ ಬೆಂಗಳೂರಿನಲ್ಲಿ ರೂಮ್ ಮಾಡಿಕೊಂಡು ನೆಲೆಸಿದ್ದರು.. ಇಂದು ಕೋಟಿ ಗಟ್ಟಲೆಯ ಬಂಗಲೆಯಲ್ಲಿರುವ ಗಣೇಶ್ ಅವರು ಅಂದು ನಿಜಕ್ಕೂ ಬಹಳಷ್ಟು ದಿನಗಳ ಕಾಲ ಊಟಕ್ಕೂ ಕಷ್ಟ ಪಟ್ಟಿದ್ದರು.. 5 ರೂಪಾಯಿ ಸಿಕ್ಕರೂ ಸಾಕು ಎಂದು ಅರ್ಧ ಚಿತ್ರಾನ್ನ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು.. ಇಂತಹ ಸಮಯದಲ್ಲಿ ಗಣೇಶ್ ಅವರಿಗೆ ಆಗಾಗ ಹಣ ಕೊಡುತ್ತಿದ್ದದ್ದು ಮಾತ್ರ ಒಬ್ಬ ನಟ..

ಹೌದು ಅವಕಾಶಕ್ಕಾಗಿ ಹುಡುಕುತ್ತಿದ್ದ ಆ ಸಮಯದಲ್ಲಿ ಗಣೇಶ್ ಅವರಿಗೆ ಹಣಕೊಡುತ್ತಿದ್ದದ್ದು ಮತ್ಯಾರೂ ಅಲ್ಲ ಅವರು ನಟ ರವಿಶಂಕರ್ ಗೌಡ.. ರವಿಶಂಕರ್ ಅವರು ಅದಾಗಲೇ ಗಾಯಕರಾಗಿ ಗುರುತಿಸಿಕೊಂಡಿದ್ದರು.. ಅನೇಕ ಶೋಗಳು ಹಾಗೂ ಆರ್ಕೆಸ್ಟ್ರಾಗಳಲ್ಲಿ ಭಾಗವಹಿಸುತ್ತಿದ್ದರು.. ತಕ್ಕಮಟ್ಟಗಿನ ಸಂಪಾದನೆ ಅವರಿಗಿತ್ತು.. ಹಣ ಬಂದ ಕೂಡಲೇ ಅವರು ಗಣೇಶ್ ಅವರಿಗೆ ಫೋನ್ ಮಾಡಿ ದುಡ್ಡಿದೆ ಎಂದು ಹೇಳಿ ಅವರಿಗೆ ಊಟಕ್ಕೆ ಹಾಗೂ ಖರ್ಚಿಗೆ ಕೊಟ್ಟು ಬರುತ್ತಿದ್ದರು..

ನಿಜಕ್ಕೂ ಏನೂ ಇಲ್ಲದ ಸಮಯದಲ್ಲಿ ಇದ್ದ ಅವರಿಬ್ಬರ ಆ ಸ್ನೇಹ ಈಗಲೂ ಸಹ ಹಾಗೆಯೇ ಇದೆ.. ಗಣೇಶ್ ಅವರ ಮನೆಯ ಪ್ರತಿಯೊಂದು ಕಾರ್ಯಕ್ರಮದಲ್ಲಿಯೂ ರವಿಶಂಕರ್ ಅವರ ಕುಟುಂಬ ಇದ್ದೇ ಇರುತ್ತದೆ.. ಇನ್ನು ಮೊನ್ನೆ ಮೊನ್ನೆಯಷ್ಟೇ ರವಿಶಂಕರ್ ಗೌಡ ಅವರಿದ್ದ ಅಪಾರ್ಟ್ಮೆಂಟ್ ನಲ್ಲಿ ಅವರ ಎದುರಿನ ಮನೆಯವರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ರವಿಶಂಕರ್ ಅವರ ಮನೆಯಲ್ಲಿ ಇಬ್ಬರು ಚಿಕ್ಕ ಮಕ್ಕಳಿರುವ ಕಾರಣ ಆತಂಕಕ್ಕೊಳಗಾಗಿದ್ದರು.. ವಿಷಯ ತಿಳಿಯುತ್ತಿದ್ದಂತೆ ಗಣೇಶ್ ಅವರು ಆ ತಕ್ಷಣ ರವಿಶಂಕರ್ ಅವರಿಗೆ ಫೋನ್ ಮಾಡಿ ಈ ಕೂಡಲೇ ಮಕ್ಕಳನ್ನು ಕರೆದುಕೊಂಡು ಮನೆಗೆ ಬಂದುಬಿಡು ಎಂದಿದ್ದರು..

ಕಷ್ಟದ ಸಮಯದಲ್ಲಿ ಸಂಬಂಧಿಕರೇ ಆಗದ ಈ ಕಾಲದಲ್ಲಿ.. ಎಂದೋ ಇದ್ದ ಸ್ನೇಹ ಹತ್ತಿಪ್ಪತ್ತು ವರ್ಷಗಳಾದರೂ ಅದೇ ರೀತಿ‌ ಇರುವುದು ನಿಜಕ್ಕೂ ಗ್ರೇಟ್.. ಇಂದು ಗಣೇಶ್ ಅವರ ಹುಟ್ಟುಹಬ್ಬವಿದ್ದು ರವಿಶಂಕರ್ ಅವರು ತನ್ನ ಪ್ರೀತಿಯ ಗೆಳೆಯನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.. ಸಾಮಾಜಿಕ ಜಾಲತಾಣದಲ್ಲಿ ಗಣೇಶ್ ಅವರ ಫೋಟೋ ಜೊತೆಗೆ “ಗೆಳೆಯನ ಜನುಮದಿನ… ಪ್ರತಿ ಹೆಜ್ಜೆಯಲ್ಲೂ ನಲಿವಿರಲಿ, ತಿರು ತಿರುವಿನಲ್ಲೂ ಗೆಲುವಿರಲಿ, ಆಚರಣೆಗಳಲ್ಲಿ ಚೆಲುವಿರಲಿ, ಬದುಕು ಪರಿಚಯಿಸಿದ ಸಂಬಂಧಗಳಲ್ಲಿ ಒಲವಿರಲಿ. ನನ್ನೊಲವಿನ ಅಸೀಮ ಪ್ರೀತಿಯ ಗೆಳೆಯ ಗೋಲ್ಡಿ.. ಜನುಮದಿನದ ಶುಭಾಶಯಗಳು..” ಎಂದು ಹಾರೈಸಿದ್ದಾರೆ.. ಇವರಿಬ್ಬರ ಸ್ನೇಹ ಸದಾ ಹೀಗೆ ಇರಲಿ.. ಹುಟ್ಟು ಹಬದ ಶುಭಾಶಯಗಳು ಗಣೇಶ್ ಸರ್‌‌..

Be the first to comment

Leave a Reply

Your email address will not be published.


*