ಕನ್ನಡದ ಖ್ಯಾತ ನಟಿಗೆ ಕೊರೊನಾ ಪಾಸಿಟಿವ್..

ಲಾಕ್ ಡೌನ್ ಸಮಯದಲ್ಲಿ ಹಿಡಿತದಲ್ಲಿದ್ದ ಕೊರೊನಾ ಸೋಂಕು ಇದೀಗ ದಿನದಿಂದ ದಿನಕ್ಕೆ ಸಾವಿರ ಲೆಕ್ಕದಲ್ಲಿ ಹೆಚ್ಚಾಗುತ್ತಲೇ ಇದೆ.. ಸಾಮಾನ್ಯರಿಂದ ಹಿಡಿದು ಸೆಲಿಬ್ರೆಟಿಗಳ ವರೆಗೂ ಎಲ್ಲರೂ ಸೋಂಕಿಗೆ ತುತ್ತಾಗುತ್ತಿದ್ದಾರೆ.. ಅತ್ತ ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಒದಗಿಸಲಾಗುತ್ತಿಲ್ಲ.. ಇತ್ತ ಸೋಂಕಿನಿಂದ ಗುಣಮುಖರಾದವರ ಸಂಖ್ಯೆಯ ಜೊತೆಗೆ ಜೀವ ಕಳೆದುಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದ್ದು ಆತಂಕ ಹೆಚ್ಚಾಗಿದೆ..

ಇನ್ನು ಕೊರೊನಾ ಸೋಂಕು ಹರಡಬಾರದೆಂದು ಲಾಕ್ ಡೌನ್ ಸಮಯದಲ್ಲಿ ಎಲ್ಲಾ ಚಿತ್ರೀಕರಣವನ್ನು ಬಂದ್ ಮಾಡಲಾಗಿತ್ತು.‌. ಲಾಕ್ ಡೌನ್ ಸಡಿಲೆಕೆಗೊಂಡ ಕೆಲ ದಿನಗಳ ನಂತರ ಧಾರಾವಾಹಿಗಳ ಶೂಟಿಂಗ್ ಗೆ ಅನುಮತಿ ನೀಡಲಾಗಿದ್ದು ಲಾಕ್ ಡೌನ್ ಸಮಯದಲ್ಲಿ ಆದ ನಷ್ಟವನ್ನು ಭರಿಸಲು ಧಾರಾವಾಹಿ ತಂಡಗಳು ಮುಂದಾಗಿವೆ.. ಎಲ್ಲಾ ಮುನ್ನೆಚ್ಚರಿಕಾ ಕ್ರಮ ಕೈಗೊಂಡು ಶೂಟಿಂಗ್ ನಡೆಸಲಾಗುತ್ತಿದೆ..

ಆದರೀಗ ಕನ್ನಡದ ನಟಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು ಚಿತ್ರೀಕರಣವನ್ನು ಬಂದ್ ಮಾಡಲಾಗಿದೆ.. ಹೌದು ಸ್ವಯಂವರ ಶೋ‌ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ ಮೈಸೂರು ಮೂಲದ ನಟಿ ನವ್ಯಾ ಸ್ವಾಮಿ ಅವರಿಗೆ ಕೊರೊನಾ ಸೋಂಕಿರುವುದು ಧೃಡಪಟ್ಟಿದೆ.. ಸುವರ್ಣ ವಾಹಿನಿಯಲ್ಲಿ ಕೆಲ ವರ್ಷಗಳ ಹಿಂದೆ ಪ್ರಸಾರವಾಗುತ್ತಿದ್ದ ರಕ್ಷಿತಾ ಪ್ರೇಮ್ ನಡೆಸಿಕೊಡುತ್ತಿದ್ದ ಸ್ವಯಂವರ ರಿಯಾಲಿಟಿ ಶೋ ಮೂಲಕ ನಟಿ ನವ್ಯಾ ಸ್ವಾಮಿ ಕಿರಿತೆರೆಗೆ ಎಂಟ್ರಿ ಕೊಟ್ಟಿದ್ದರು.. ಆ ಬಳಿಕ ಸ್ಟಾರ್ ಸವಿರುಚಿ.. ಲಕುಮಿ.. ತೆಂದ್ರಲ್.. ತಕಧಿಮಿತ ಡಾನ್ಸಿಂಗ್ ಸ್ಟಾರ್.. ಬಾಯ್ರಾಮಣಿ.. ತಲಾಂಬ್ರಲು.. ಇನ್ನು ಅನೇಕ ಧಾರಾವಾಹಿಗಳು ಹಾಗೂ ರಿಯಾಲಿಟಿ ಶೋಗಳಲ್ಲಿ ನವ್ಯಾ ಕಾಣಿಸಿಕೊಂಡಿದ್ದರು.. ಮೂಲತಃ ಮೈಸೂರಿನವರಾದ ನವ್ಯಾ ಕನ್ನಡ ಕಿರುತೆರೆಯಲ್ಲಿ ಸ್ವಲ್ಪ ವಾದ ವಿವಾದಕ್ಕೆ ಗುರಿಯಾದ ನಂತರ ತೆಲುಗು ಮತ್ತು ತಮಿಳು ಕಿರುತೆರೆಯ ಕಡೆ ಮುಖ ಮಾಡಿದರು… ಅಲ್ಲಿ ಸಾಲು ಸಾಲು ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು..

ಕೊರೊನಾ ಗುಣಲಕ್ಷಣ ಕಾಣಿಸಿಕೊಂಡ ಬೆನ್ನಲ್ಲೇ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದು, ನಿನ್ನೆ ವರದಿ ಕೈ ಸೇರಿದ್ದು, ಪಾಸಿಟಿವ್ ಬಂದಿದೆ.. ಈ ಬಗ್ಗೆ ಖುದ್ದು ನವ್ಯಾ ಅವರೇ ತಿಳಿಸಿದ್ದು “ಹೌದು ನನಗೆ ಕೊರೊನಾ ಪಾಸಿಟಿವ್ ಬಂದಿದೆ.. ನಿನ್ನೆ ವರದಿ ನನ್ನ ಕೈ ಸೇರಿದೆ.. ನನಗೆ ಕೇವಲ ತಲೆನೋವು ಮಾತ್ರ ಇತ್ತು… ಆದರೆ ಮೂರು ದಿನದಿಂದ ತುಂಬಾ ಸುಸ್ತಾಗುತ್ತಿತ್ತು.. ಡಾಕ್ಟರ್ ಸಲಹೆಯಂತೆ ನಾನು ಕೊರೊನಾ ಪರೀಕ್ಷೆ ಮಾಡಿಸಿದೆ.. ಪಾಸಿಟಿವ್ ಬಂತು.. ನಾನು ರಾತ್ರಿ ಪೂರ್ತಿ ಅತ್ತಿದ್ದೆ.. ಅಮ್ಮ ಈಗಲೂ ಅಳುತ್ತಲೆಯೇ ಇದ್ದಾರೆ.. ನಾನು ಮನೆಯಲ್ಲಿಯೇ ನನ್ನ ರೂಮ್‌ನಲ್ಲಿಯೇ ಸೆಲ್ಫ್ ಕ್ವಾರಂಟೈನ್‌ನಲ್ಲಿದ್ದೇನೆ..

ನನಗೆ ಈಗ ಯಾವುದೇ ಕೊರೊನಾ ವೈರಸ್ ಸೋಂಕಿನ ಲಕ್ಷಣಗಳು ಅಷ್ಟಾಗಿ ಕಾಣಿಸುತ್ತಿಲ್ಲ.. ಎಂದಿನಂತೆ ಇಂದು ನಾನು ಆರಾಮಾಗಿದ್ದೇನೆ ಎಂದಿದ್ದಾರೆ.. ಅಷ್ಟೇ ಅಲ್ಲದೆ “ಇಂತಹ ಸಮಯದಲ್ಲಿ ನಾವು ದೈಹಿಕ ಆರೋಗ್ಯಕ್ಕಿಂತ ಜಾಸ್ತಿ ಮಾನಸಿಕವಾಗಿ ಹೋರಾಟ ಮಾಡಬೇಕು.. ನಾನು ಸ್ಟ್ರಾಂಗ್ ಆಗಿ ಹೋರಾಡಬೇಕೆಂದು ನಿರ್ಧಾರ ಮಾಡಿದ್ದೇನೆ.. ನನ್ನ ಅಕ್ಕಪಕ್ಕದ ಮನೆಯವರಿಗೂ ಇದರಿಂದ ಬಹಳ ಹೆದರಿಕೆಯಾಗಿದೆ.. ನನ್ನನ್ನು ಈ ರೀತಿ ನೋಡಿಕೊಳ್ಳಲು ತುಂಬಾ ಕಷ್ಟವಾಗುತ್ತದೆ. ವಿಟಾಮಿನ್ ಸಿ ಇರುವ ಆಹಾರವನ್ನು ಹೆಚ್ಚು ಸೇವಿಸಲು ತಿಳಿಸಿದ್ದಾರೆ.. ಆಗಾಗ ಜಾಸ್ತಿ ಬಿಸಿನೀರು ಕುಡಿಯುತ್ತಿರಬೇಕು. ನಾಲ್ಕು ಐದು ಬಾರಿ ಬಿಸಿಗಾಳಿ ತೆಗೆದುಕೊಳ್ಳಬೇಕು.. ಜನರು ಏನು ಮಾತನಾಡುತ್ತಾರೆ ಎಂದು ತಲೆ ಕೆಡಿಸಿಕೊಳ್ಳಬೇಡಿ. ತುಂಬ ಸ್ಟ್ರಾಂಗ್ ಆಗಿರಿ… ನಾವು ಕೊರೊನಾ ವೈರಸ್ ವಿರುದ್ಧ ಹೋರಾಡೋಣ.. ಎಂದಿದ್ದಾರೆ..

ಇನ್ನು ನವ್ಯಾಗೆ ಕೊರೊನಾ ಪಾಸಿಟಿವ್ ಬಂದ ನಂತರ ಅವರು ಅಭಿನಯಿಸುತ್ತಿದ್ದ ಎರಡು ಧಾರಾವಾಹಿಗಳನ್ನು ನಿಲ್ಲಿಸಲಾಗಿದ್ದು, ಅವರ ಜೊತೆ ಅಭಿನಯಿಸುತ್ತಿದ್ದ ಕಲಾವಿದರು ಕ್ವಾರಂಟೈನ್ ನಲ್ಲಿದ್ದಾರೆ..

Be the first to comment

Leave a Reply

Your email address will not be published.


*