ಬ್ರೇಕಿಂಗ್ ನ್ಯೂಸ್ ರೇವಣ್ಣ ನವರಿಗೆ ಕೊರೊನಾ ಆತಂಕ.. ಗನ್ ಮ್ಯಾನ್ ಗಳಿಗೆ ಸೋಂಕು ಧೃಡ..

ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮೊದಲೆಲ್ಲಾ ವಿದೇಶದಿಂದ ಮರಳಿದವರಲ್ಲಿ ಕಾಣಿಸಿಕೊಳ್ಳುತ್ತಿದ್ದ ಸೋಂಕು ನಂತರ ಜನ ಸಾಮಾನ್ಯರಲ್ಲಿ ಹರಡಿತು.. ಇದೀಗ ಶಾಸಕರು ಸಚಿವರುಗಳ ಕುಟುಂಬಗಳಲ್ಲಿಯೇ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಎಲ್ಲರಿಗೂ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ..

ಇದೀಗ ಶಾಸಕರಾದ ರೇವಣ್ಣನವರು ಕೊರೊನಾ ಪರೀಕ್ಷೆಗೆ ಒಳಪಡಲಿದ್ದಾರೆ.. ಹೌದು ರೇವಣ್ಣನವರ ನಾಲ್ವರು ಗನ್ ಮ್ಯಾನ್ ಗಳಿಗೂ ಕೊರೊನಾ ಸೋಂಕು ಧೃಡಪಟ್ಟಿದ್ದು ಆತಂಕ ಹೆಚ್ಚಾಗಿದೆ.. ಹೌದು ಕಳೆದ ಸೋಮವಾರ ರೇವಣ್ಣನವರ ಬೆಂಗಾವಲು ಪಡೆಯ 9 ಜನ ಪೊಲೀಸರಿಗೆ ಕೊರೊನಾ ಪರೀಕ್ಷೆ ಮಾಡಲಾಗಿತ್ತು. ಅವರಲ್ಲಿ ನಾಲ್ವರಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಅವರುಗಳು ಹಾಸನದಲ್ಲಿ ಇದ್ದಾಗ ಗಂಟಲು ದ್ರವ ಪರೀಕ್ಷೆಯನ್ನು‌ ಮಾಡಲಾಗಿತ್ತು.. ಆದರೆ ವರದಿಗೂ ಮುನ್ನ ಅವರು ರೇವಣ್ಣನವರ ಜೊತೆಯಲ್ಲಿಯೇ ಬೆಂಗಳೂರಿಗೆ ಆಗಮಿಸಿದ್ದಾರೆ.. ಇದೀಗ ಆ ನಾಲ್ವರ ವರದಿ ಪಾಸಿಟಿವ್ ಬಂದಿದ್ದು ನಾಲ್ವರನ್ನು ಬೆಂಗಳೂರಿನ ಆಸ್ಪತ್ರೆಗಳಲ್ಲಿಯೇ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ..

ಇದೀಗ ಗನ್‌ ಮ್ಯಾನ್ ಗಳಿಗೆ ಕೊರೊನಾ ಪಾಸಿಟಿವ್ ಬಂದಿರುವ ಕಾರಣ ರೇವಣ್ಣನವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಿದ್ದಾರೆ.. ಹೌದು ಕೊರೊನಾ ಲಾಕ್ ಡೌನ್ ಸಮಯದಲ್ಲಿ ಅನೇಕ ರೈತರಿಗೆ ಸಹಾಯ ಮಾಡಿದ್ದರು.. ಇದೀಗ ಇವರಿಗೂ ಕೊರೊನಾ ಆತಂಕ ಎದುರಾಗಿದ್ದು, ವರದಿಯಲ್ಲಿ ನೆಗಟಿವ್ ಬರಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿದ್ದಾರೆ..

Be the first to comment

Leave a Reply

Your email address will not be published.


*