ಸರಳವಾಗಿ ಮೂರನೇ ಮದುವೆಯಾದ ಖ್ಯಾತ ನಟಿ.. ತನ್ನ ಮೂರು ಮಕ್ಕಳೇ ಮದುವೆಗೆ ಸಾಕ್ಷಿ.‌.

ಲಾಕ್ ಡೌನ್ ನಲ್ಲಿ ಸಾಲು ಸಾಲು ಸೆಲೆಬ್ರಿಟಿಗಳ ಮದುವೆ ಸರಳವಾಗಿ ನೆರವೇರುತ್ತಿದೆ.. ಇತ್ತ ಜನ ಸಾಮಾನ್ಯರಿಗೆ ಲಾಕ್ ಡೌನ್ ಕಾರಣ ಸರಳ ಮದುವೆ ವರದಾನವಾದರೆ.. ಅತ್ತ ಸೆಲಿಬ್ರೆಟಿಗಳು ಕೂಡ ಮದುವೆಗಳನ್ನು‌ ಮುಂದೂಡದೇ ಸರಳವಾಗಿಯೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ..

ಇದೀಗ ಖ್ಯಾತ ನಟಿಯೊಬ್ಬರು ಸರಳವಾಗಿ ಮೂರನೇ ಮದುವೆಯನ್ನು ಮಾಡಿಕೊಂಡಿದ್ದು ತನ್ನ ಮೂರು ಮಕ್ಕಳೇ ಅಮ್ಮನ ಮೂರನೇ ಮದುವೆಗೆ ಸಾಕ್ಷಿಯಾಗಿದ್ದಾರೆ.. ಹೌದು ತಮಿಳಿನ ನಟಿ ವನಿತಾ ವಿಜಯಕುಮಾರ್ ಅವರೇ ಇದೀಗ ಲಾಕ್ ಡೌನ್ ನಲ್ಲಿ ಸರಳವಾಗಿ ಮದುವೆಯಾಗಿದ್ದು, ವಿಎಫ್‍ಎಕ್ಸ್ ತಂತ್ರಜ್ಞ ಪೀಟರ್ ಪೌಲ್ ಎಂಬುವವರನ್ನು ವರಿಸಿದ್ದಾರೆ… ಮೊನ್ನೆಯಷ್ಟೇ ಕ್ರಿಶ್ಚಿಯನ್ ಸಂಪ್ರದಾಯದಂತೆ ಈ ಜೋಡಿಯ ಮದುವೆ ಸಮಾರಂಭ ನೆರವೇರಿದೆ.. ಮದುವೆ ಸಮಾರಂಭದಲ್ಲಿ ಆಕೆಯ ಮಕ್ಕಳು, ಕುಟುಂಬದವರು ಮತ್ತು ಕೆಲ ಆಪ್ತರು ಮಾತ್ರ ಭಾಗವಹಿಸಿ ನೂತನ ಜೋಡಿಗೆ ಶುಭಾಶಯ ಕೋರಿದ್ದಾರೆ..

ನಟಿ ವನಿತಾ ಈ ಹಿಂದೆ ಎರಡು ಮದುವೆಯಾಗಿದ್ದು ಇಬ್ಬರಿಂದಲೂ ವಿಚ್ಛೇದನ ಪಡೆದು ಇದೀಗ ಮೂರನೇ ಮದುವೆಯಾಗಿದ್ದಾರೆ.. 2000 ರಲ್ಲಿ ಕಿರುತೆರೆ ನಟ ಆಕಾಶ್ ಅವರ ಜೊತೆ ಮದುವೆಯಾಗಿದ್ದು.. ವಿಜಯ್ ಶ್ರೀ ಹರಿ ಮತ್ತು ಜೋವಿಕಾ ಎಂಬ ಇಬ್ಬರು ಮಕ್ಕಳಿದ್ದರು.. ಆ ಬಳಿಕ 2007ರಲ್ಲಿ ಈ ಜೋಡಿ ದೂರವಾಗಿ ಅದೇ ವರ್ಷ ವನಿತಾ ಉದ್ಯಮಿ ಆನಂದ್ ಜಯರಾಜನ್ ಜೊತೆ ಎರಡನೇ ವಿವಾಹವಾದರು… ಈ ಜೋಡಿಗೆ ಜಯನಿತಾ ಎಂಬ ಮಗುವಾಯಿತು.. ಆ ಬಳಿಕ 2012ರಲ್ಲಿ ಅವರಿಂದಲೂ ದೂರವಾದ ವನಿತಾ ನಿರ್ದೇಶಕ ರಾಬರ್ಟ್ ಜೊತೆಗೆ ಲಿವ್‍ಇನ್ ರಿಲೇಷನ್‍ ಶಿಪ್‍ ನಲ್ಲಿದ್ದರು ಎಂಬ ಸುದ್ದಿ ಇದೆ..

ಆದರೀಗ ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ವನಿತಾ ಅವರು “ಪೀಟರ್ ಅವರನ್ನು ನಾನು ಭೇಟಿ ಮಾಡಿದಾಗ ಅವರ ಜೊತೆ ಪ್ರೀತಿಯಲ್ಲಿ ಬಿದ್ದೆ.. ಮದುವೆಯಲ್ಲಿ ನನ್ನ ಕೈ ನೀಡುವಂತೆ ಪೀಟರ್ ನನ್ನನ್ನು ಕೇಳಿದರು. ಆಗ ನಾನು ಏನು ಉತ್ತರ ಕೊಡಬೇಕೋ ತಿಳಿಯದೇ ಮೂಕವಿಸ್ಮಿತಳಾದೆ.. ಆ ಸಮಯದಲ್ಲಿ ನನ್ನ ಮಕ್ಕಳು ಇದಕ್ಕೆ ಒಪ್ಪಬೇಕು ಎಂದು ಅವರಿಗೆ ಹೇಳಿದೆ.. ಆ ನಂತರ ನನ್ನ ಮಕ್ಕಳ ಮುಂದೆ ಪೀಟರ್ ಬಗ್ಗೆ ಹೇಳಿದಾಗ ಮಕ್ಕಳು ಸಂತೋಷದಿಂದ ಒಪ್ಪಿಕೊಂಡರು. ನನ್ನ ಪಾಲಿಗೆ ಸಂಭವಿಸುತ್ತಿರುವ ಅತ್ಯುತ್ತಮ ಗಳಿಗೆ ಎಂದು ಮಕ್ಕಳು ಹೇಳಿದರು.. ನನ್ನ ಕಣ್ಣಲ್ಲಿ ನೀರು ಬಂತು” ಎಂದು ವನಿತಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ..

ನಟಿ ವನಿತಾ ಮತ್ಯಾರೂ ಅಲ್ಲ.. ತಮಿಳಿನ ಖ್ಯಾತ ನಟ ವಿಜಯ್ ಕುಮಾರ್ ಅವರ ಮಗಳು.. ಚಂದ್ರಲೇಖ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ವನಿತಾ, ಆನಂತರ ಬಿಗ್ ಬಾಸ್ ಹಾಗೂ ಧಾರಾವಾಹಿಯಲ್ಲಿ ಹೆಚ್ಚು ಕಾಣಿಸಿಕೊಂಡರಾದರೂ.. ಇವರ ಸಹೋದರಿಯರು ಹಾಗೂ ಸಹೋದರ ಕನ್ನಡದ ಖ್ಯಾತ ಕಲಾವಿದರು.. ಹೌದು ಇವರ ಸಹೋದರ ಅರುಣ್ ವಿಜಯ್ ಪುನೀತ್ ರಾಜ್ ಕುಮಾರ್ ಅಭಿನಯದ ಚಕ್ರವ್ಯೂಹ ಚಿತ್ರದಲ್ಲಿ ವಿಲನ್ ಆಗಿ ನಟಿಸಿದ್ದಾರೆ. ತೆಲುಗಿನ ಸಾಹೋ ಸಿನಿಮಾದಲ್ಲಿಯೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.. ಇನ್ನು ವನಿತಾ ಅವರ ಸಹೋದರಿ ಪ್ರೀತಾ ಅವರು ಸಾಯಿಕುಮಾರ್ ಅಭಿನಯದ ಓಂ ನಮಃ ಶಿವಾಯ ಸಿನಿಮಾದಲ್ಲಿ ನಟಿಸಿದ್ದರು. ಇನ್ನೊಬ್ಬ ತಂಗಿ ಶ್ರೀದೇವಿ ಅವರು ಶ್ರೀ ಮುರಳಿ ಅಭಿನಯದ ಪ್ರೀತಿಗಾಗಿ ಹಾಗೂ ಶಿವಣ್ಣನ ಜೊತೆ ಕಾಂಚನಗಂಗಾ, ರವಿಚಂದ್ರನ್ ಅವರ ಜೊತೆ ಲಕ್ಷ್ಮಣ ಸಿನಿಮಾದಲ್ಲಿ‌ ಕಾಣಿಸಿಕೊಂಡಿದ್ದಾರೆ..

Be the first to comment

Leave a Reply

Your email address will not be published.


*