ಬಿರಾದರ್ ಅವರಿಗೆ ಫೋನ್ ಮಾಡಿದ ಅಮಿತಾ ಬಚ್ಚನ್.. ಕಾರಣವೇನು ಗೊತ್ತಾ?

ಈಗಿನ ಕಾಲದಲ್ಲಿ‌ ಒಂದೆರೆಡು ಸಿನಿಮಾ ಮಾಡಿ ಸಣ್ಣ ಪುಟ್ಟ ಅವಾರ್ಡ್ ಬಂದರೆ ತಲೆಯಲ್ಲೇ ನಡೆಯುವ ಅದೆಷ್ಟೋ ಜನರ ನಡುವೆ ಅಂತರಾಷ್ಟ್ರೀಯ ಪ್ರಶಸ್ತಿ ಬಂದರೂ ಕೂಡ ಎಲೆ ಮರೆ ಕಾಯಿಯಂತೆ ಜೀವನ ಮಾಡುವ ಕಲಾವಿದರು ನಮ್ಮ ನಡುವೆಯೇ ಇದ್ದಾರೆ.. ಹೌದು ಇವರು ಮತ್ಯಾರೂ ಅಲ್ಲ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯ ಹೆಮ್ಮೆಯ ಕಲಾವಿದರುಗಳಲ್ಲಿ‌ ಒಬ್ಬರಾದ ಬಿರಾದರ್ ಅವರು..

ಸಿನಿಮಾದಲ್ಲಿ ಭಿಕ್ಷುಕ, ಕುಡುಕನ ಪಾತ್ರ ಎಂದೊಡನೆ ನೆನಪಾಗುವ ಏಕೈಕ ಕಲಾವಿದ ಇವರು.. ಇದರಲ್ಲಿ ಯಾವುದೇ ಕೀಳರಿಮೆ‌ ಇಲ್ಲ.. ಆ ಪಾತ್ರಕ್ಕೆ ಆ ಮಟ್ಟಕ್ಕೆ ಜೀವ ತುಂಬಿ ಅಭಿನಯಿಸುತ್ತಾರೆ ಎಂದರೆ ಅದು ಅವರಲ್ಲಿರುವ ಪ್ರತಿಭೆ.. ಇನ್ನು ಬಿರಾದರ್ ಅವರು ಮಾಡಿರುವ ಸಿನಿಮಾಗಳು ಹತ್ತು ಇಪ್ಪತ್ತಲ್ಲ.. 350 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಇವರು ಅಭಿನಯಿಸಿದ್ದಾರೆ.. ಇಷ್ಟೊಂದು ಸಿನಿಮಾ ಮಾಡಿದ್ದಾರೆ, ಈಗ ದೊಡ್ಡ ಶ್ರೀಮಂತರೆಂದುಕೊಳ್ಳಬೇಡಿ.. ನಿಜಕ್ಕೂ ಹತ್ತು ಜನ ಬಂದರೆ ಕೂರಲು ಸಾಧ್ಯವಾಗದಷ್ಟು ಸಣ್ಣ ಮನೆಯಲ್ಲಿ‌ ಇವರು ವಾಸ ಮಾಡುತ್ತಿದ್ದಾರೆ.. ಆದರೆ ಇವರ ಮನಸ್ಸು ಮಾತ್ರ ಬಂಗಲೆಗಳಿಗಿಂತ ದೊಡ್ಡದು..

ಚಿಕ್ಕ ವಯಸ್ಸಿನಲ್ಲಿಯೇ ಸಿನಿಮಾ ರಂಗಕ್ಕೆ ಬಂದ ಬಿರಾದರ್ ಅವರನ್ನು ಆ ಕಲಾ ಸರಸ್ವತಿ ಕೈ ಬಿಡಲಿಲ್ಲ.. ತನ್ನ ಮಡಿಲಿಗೆ ಹಾಕಿಕೊಂಡಳು.. ಬಿರಾದರ್ ಅವರೂ ಅಷ್ಟೇ ಇದುವರೆಗೂ ಅವರ ಇಷ್ಟು ವರ್ಷದ ಸಿನಿಮಾ ಜರ್ನಿಯಲ್ಲಿ ಇವರಿಂದ ಒಂದು ದಿನ ಶೂಟಿಂಗ್ ಗೆ ತೊಂದರೆಯಾಯಿತು ಎಂದು ಯಾರೂ ಸಹ ಬೆರಳು ತೋರಿಸಿಲ್ಲ.. ಯಾರಿಗೂ ಎಂದೂ ತೊಂದರೆ ನೀಡದೇ ಕಲೆಯನ್ನೇ ದೇವರು ಎಂದುಕೊಂಡ ಬಿರಾದರ್ ಅವರಿಗೆ ಅಂತರಾಷ್ಟ್ರೀಯ ಪ್ರಶಸ್ತಿ ಬಂದಿದೆ ಎಂಬ ವಿಚಾರ ನಮ್ಮ ಕನ್ನಡದ ಅದೆಷ್ಟೋ ಜನರಿಗೆ ತಿಳಿದಿಲ್ಲ.. ಯಾವ ಸುದ್ದಿ ವಾಹಿನಿಯೂ ದೊಡ್ಡ ಸುದ್ದಿ ಮಾಡಲಿಲ್ಲ.. ಹೌದು ಬಿರಾದಾರ್ ಅವರಿಗೆ ಗಿರೀಶ್ ಕಾಸರವಳ್ಳಿಯವರ ಕನಸೆಂಬೋ ಕುದುರೆಯನೇರಿ ಸಿನಿಮಾದಲ್ಲಿನ ನಟನೆಗಾಗಿ ಸ್ಪೇನ್‍ನ ಮ್ಯಾಡ್ರಿಡ್‍ನಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಎಂಬ ಅಂತರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ..

ಈ ವಿಚಾರ ತಿಳಿಯುತ್ತಿದ್ದಂತೆ ಅಮಿತಾ ಬಚ್ಚನ್ ಅವರೂ ಸಹ ಬಿರಾದರ್ ಅವರಿಗೆ ಫೋನ್ ಮಾಡಿ ಶುಭಾಶಯ ತಿಳಿಸಿದ್ದರು.. ಭಾರತೀಯನೊಬ್ಬನಿಗೆ ಈ ಗೌರವ ಬಂದದ್ದು ನಮಗೂ ಹೆಮ್ಮೆ ಎಂದಿದ್ದರು..

ಇನ್ನು ನಿನ್ನೆಯಷ್ಟೇ ಬಿರಾದರ್ ಅವರ ಹುಟ್ಟುಹಬ್ಬವಿತ್ತು.. ಹುಟ್ಟಿದಾಗಿನಿಂದ ಎಂದೂ ಕೇಕ್ ಕಟ್ ಮಾಡದ ಬಿರಾದರ್ ಅವರ ಹುಟ್ಟುಹಬ್ಬವನ್ನು ಕುಟುಂಬದೊಡನೆಯೇ ಕೇಕ್ ಕಟ್ ಮಾಡಿಸಿ ಆಚರಿಸಿ ಬಿರಾದರ್ ಅವರ ಮುಖದಲ್ಲಿ ನಗುವಿನ ಜೊತೆಗೆ ಕಂಬನಿ‌ ತರಿಸಿದ್ದು ಮತ್ಯಾರೂ ಅಲ್ಲ ಒಳ್ಳೆ ಹುಡುಗ ಪ್ರಥಮ್.. ಹೌದು ತಮ್ಮ ನಟ ಭಯಂಕರ ಸಿನಿಮಾದಲ್ಲಿ ಬಿರಾದರ್ ಅವರು ಅಭಿನಯಿಸುತ್ತಿದ್ದಾರೆ.. ಬಿರಾದರ್ ಅವರ ಬಗ್ಗೆ ಸಂಪೂರ್ಣವಾಗಿ ತಿಳಿದಿರುವ ಪ್ರಥಮ್ ಹಾಗೂ ಚಿತ್ರತಂಡ ಈ ವರ್ಷ ಅವರ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸಲು ನಿರ್ಧರಿಸಿತ್ತು.. ಆದರೆ ಲಾಕ್ ಡೌನ್ ಇದ್ದ ಕಾರಣ ಪ್ರಥಮ್ ಹಾಗೂ ಸಿನಿಮಾ ತಂಡದ ಕೆಲವರು ಮಾತ್ರ ಬಿರಾದರ್ ಅವರ ಮನೆಗೆ ಹೋಗಿ ಅವರ ಕುಟುಂಬದೊಡನೆ‌ ಕೆಲ ಸಮಯ ಕಳೆದು ಕೇಕ್ ಕಟ್ ಮಾಡಿಸಿ ಹುಟ್ಟು ಹಬ್ಬ ಆಚರಿಸಿ ಬಂದಿದ್ದಾರೆ.. ಅದೇ ಸಮಯದಲ್ಲಿ ಜೀವನದಲ್ಲಿ ನಾನು ಕೇಕ್ ಕಟ್ ಮಾಡಿರಲಿಲ್ಲ ಎಂದು ಕಣ್ಣೀರು ಹಾಕಿ ಧನ್ಯವಾದಗಳನ್ನ ತಿಳಿಸಿದರು ಬಿರಾದರ್ ಅವರು..

ಇನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಇಷ್ಟು ದೊಡ್ಡ ಸಾಧನೆ ಮಾಡಿರುವ ಬಿರಾದರ್ ಅವರನ್ನು ನಮ್ಮ ಕರ್ನಾಟಕ ಸರ್ಕಾರ ಗುರುತಿಸಿ, ಪ್ರಶಂಸಿಸಿ ಅವರಿಗೆ ಆರ್ಥಿಕವಾಗಿಯೂ ಸಬಲರನ್ನಾಗಿ ಮಾಡಬೇಕಾಗಿದೆ.. ಲಾಕ್ ಡೌನ್ ಇರುವ ಕಾರಣ ಇಂತಹ ಅನೇಕ ಹಿರಿಯ ಕಲಾವಿದರು ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.. ಆದರೆ ಸ್ವಾಭಿಮಾನದ ಕಾರಣ ಹೊರಗೆಲ್ಲೂ ಹೇಳಿಕೊಳ್ಳದೆ ಕಷ್ಟದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ.. ರಾಜಕಾರಣಿಗಳ ಮನೆಗಳ ರಿನೋವೇಷನ್ ಗೆ ಕೋಟಿಗಳ ಲೆಕ್ಕದಲ್ಲಿ‌ ಖರ್ಚು ಮಾಡಲಾಗುತ್ತದೆ.. ದಯವಿಟ್ಟು ಬಿರಾದರ್ ಅವರಿಗೆ ಒಂದು ಸೂರು ಕಲ್ಪಿಸಿ ಜೀವನಕ್ಕೆ ನೆರವಾಗಬೇಕಾಗಿ ಈ ಮೂಲಕ ಕನ್ನಡಿಗರ ಮನವಿ..

Be the first to comment

Leave a Reply

Your email address will not be published.


*