ಅಂಬರೀಶ್ ಸ್ಮಾರಕಕ್ಕೆ 2 ಎಕರೆ ಜಾಗ, 5 ಕೋಟಿ ಹಣ ಬಿಡುಗಡೆ.. ಆದರೆ ನಡೆದದ್ದೇ ಬೇರೆ….

ಕರುನಾಡಿನ ಕರ್ಣ ರೆಬೆಲ್ ಸ್ಟಾರ್ ಅಂಬರೀಶ್ ಅವರ ಸ್ಮಾರಕಕ್ಕೆ ಇಂದು ಮುಖ್ಯ ಮ್ಮಂತ್ರಿ ಬಿ ಎಸ್ ಯಡಿಯೂರಪ್ಪನವರು 1.34 ಎಕರೆ ಜಾಗ ಹಾಗೂ ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ..

ಹೌದು ಅಂಬರೀಶ್ ಅವರ ಸ್ಮಾರಕಕ್ಕೆ ಸರಕಾರ 1 ಎಕರೆ 34 ಗುಂಟೆ ಭೂಮಿಯನ್ನು ನೀಡುವ ಮೂಲಕ ಅಂಬರೀಶ್ ಅವರ ಕೊಡುಗೆ ಮತ್ತು ಸೇವೆಗಳನ್ನು ಗೌರವಿಸಿದೆ. ಅದರ ಜೊತೆಗೆ ಬಿ.ಎಸ್.ಯಡಿಯೂರಪ್ಪನವರು ಅಂಬರೀಶ್ ಸ್ಮಾರಕಕ್ಕೆ ಈ ವರ್ಷ ಮೊದಲ ಕಂತಾಗಿ ಐದು ಕೋಟಿ ರೂಪಾಯಿ ಕೊಡುವುದಾಗಿ ತಿಳಿಸಿದ್ದಾರೆ. ಸಿನಿಮಾ ಮತ್ತು ಸಮಾಜಕ್ಕೆ ಅಂಬರೀಶ್ ಅವರ ಕೊಡುಗೆಗಳು ಸದಾ ಜನರ ಮನಸ್ಸಲ್ಲಿ ಉಳಿಯುವಂತಹ ಕೆಲಸವನ್ನು ಈ ಮೂಲಕ ಮಾಡಲಾಗುತ್ತದೆ ಎಂದು ಸುಮಲತಾ ಅಂಬರೀಶ್ ಅವರು ತಿಳಿಸಿದ್ದಾರೆ..‌

ಅಂಬರೀಶ್ ಸ್ಮಾರಕ ನಿರ್ಮಾಣ ಪ್ರತಿಷ್ಠಾನದಿಂದ ಮುಖ್ಯಮಂತ್ರಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.. ಹೌದು ಇಂದು ಮುಖ್ಯಮಂತ್ರಿಗಳ ಜೊತೆ ಈ ಕುರಿತು ಸಭೆ ನಡೆದಿದ್ದು ಸುಮಲತಾ ಅಂಬರೀಶ್ ಅವರು, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಟ ದೊಡ್ಡಣ್ಣ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಅಭಿಷೇಕ್ ಅಂಬರೀಶ್ ಪಾಲ್ಗೊಂಡಿದ್ದರು..

ಅಂಬರೀಶ್ ಅವರ ಸ್ಮಾರಕ ನಿರ್ಮಾಣದ ಕೆಲಸ ನಿಜಕ್ಕೂ ಕನ್ನಡಿಗರಿಗೆ ಸಂತೋಷದ ವಿಚಾರ.. ಆದರೆ 10 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸಾಹಸಸಿಂಹ ವಿಷ್ಣುವರ್ಧನ್ ಅವರ ಸ್ಮಾರಕದ ಕೆಲಸ ಇನ್ನಾದರೂ ಪೂರ್ಣಗೊಳಿಸಿ ಎಂದು ಅಭಿಮಾನಿಗಳು ನೇರವಾಗಿ ಮುಖ್ಯಮಂತ್ರಿಗಳು ಹಾಕಿರುವ ಪೋಸ್ಟ್ ಗೆ ಕಮೆಂಟ್ ಮೂಲಕ ಮನವಿ‌‌ ಮಾಡಿದ್ದಾರೆ..

ಮೈಸೂರಿನಲ್ಲಿ ವಿಷ್ಣುವರ್ಧನ್ ಅವರಿಗೆ 5 ಎಕರೆ ಜಾಗ ನೀಡಿದ್ದು ಆದರೆ ವರ್ಷಗಳಿಂದ ಸ್ಮಾರಕ ನಿರ್ಮಾಣದ ಕಾರ್ಯ ಮಾತ್ರ ಶುರು ಆಗಿಲ್ಲ.. ಕಳೆದ ಡಿಸೆಂಬರ್ ನಲ್ಲಿ ಇನ್ನೇನು ಭೂಮಿ ಪೂಜೆ ನೆರವೇರಿಸಿ ಅಡಿಗಲ್ಲು ಇಡಲಾಗುವುದು ಎಂದು ಅನಿರುದ್ಧ್ ಅವರು ತಿಳಿಸಿದ್ದರು.. ಆದರೆ ದಿನಗಳು ಉರುಳಿದವಷ್ಟೇ.. ವಿಷ್ಣು ಸ್ಮಾರಕದ ಕೆಲಸ ಮಾತ್ರ ನಡೆಯಲಿಲ್ಲ..

ಇದ್ದಾಗ ಅಣ್ಣತಮ್ಮನಿಗಿಂತ ಹೆಚ್ಚಾಗಿದ್ದವರು ಅಂಬರೀಶ್ ಹಾಗೂ ವಿಷ್ಣುವರ್ಧನ್ ಅವರು ಆದಷ್ಟು ಬೇಗ ಇಬ್ಬರ ಸ್ಮಾರಕವೂ ಪೂರ್ಣಗೊಂಡು ಇಬ್ಬರ ಸ್ಮಾರಕವೂ ಅಭಿಮಾನಿಗಳಿಗೆ ನೆನಪಿನ ಜಾಗಗಳಾಗಿ‌ ಉಳಿಯಲಿ.. ದಯಮಾಡಿ ಯಡಿಯೂರಪ್ಪನವರು ಈ ಬಗ್ಗೆ ಕಾಳಜಿ ವಹಿಸಿ ನೆರವೇರಿಸಲಿ..

Be the first to comment

Leave a Reply

Your email address will not be published.


*