ಲಾಕ್ ಡೌನ್ ನಲ್ಲಿ ರಾಧಿಕಾ ಹಾಕಿದ ಕಂಡೀಷನ್ನಿಗೆ ತಲೆ ಮೇಲೆ ಕೈ ಹೊತ್ತು ಕೂತ ಯಶ್..

ಲಾಕ್ ಡೌನ್ ಇದ್ದ ಕಾರಣ ಸಿನಿಮಾ ಕಲಾವಿದರು‌ ಸುಧೀರ್ಘವಾಗಿ ಕುಟುಂಬದ ಜೊತೆ ಸಮಯ ಕಳೆಯುವಂತಾಯಿತು.. ಲಾಕ್ ಡೌನ್ ಸಡಿಲಿಕೆ ಗೊಂಡರೂ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ದೊರೆತಿರಲಿಲ್ಲ.. ಆದರೀಗ ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿದ್ದು, ಬಾಕಿ ಉಳಿದಿರುವ ಚಿತ್ರೀಕರಣಗಳನ್ನು ಪೂರ್ಣ ಗೊಳಿಸಲು ಚಿತ್ರತಂಡಗಳು ತಯಾರಿ ನಡೆಸಿಕೊಳ್ಳುತ್ತಿದ್ದಾರೆ..

ಇನ್ನು ನಟ ಯಶ್ ಅವರೂ ಕೂಡ ಕೆಜಿಎಫ್ ಚಿತ್ರದ ಅಂತಿಮ ಹಂತದ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ.. ಆದರೀಗ ಕರ್ನಾಟಕ ಸರ್ಕಾರ ಹೊಸ ಲಾಕ್ ಡೌನ್ ನಿಯಮಗಳನ್ನು ಜಾರಿಗೊಳಿಸಿದ್ದು..‌ ಮನೆಯಲ್ಲಿ ರಾಧಿಕಾ ಅವರೂ ಸಹ ಕೆಲವೊಂದಿಷ್ಟು ನಿಯಮ ಹಾಕಿದ್ದು ಯಶ್ ತಲೆ ಮೇಲೆ ಕೈ ಹೊತ್ತು ಕೂತ ಫೋಟೋ ಜೊತೆಗೆ ಹಂಚಿಕೊಂಡಿದ್ದಾರೆ..

ಹೌದು ಬಹಳಷ್ಟು ದಿನಗಳ ನಂತರ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ಯಶ್ ಅವರು ಇದೀಗ ರಾಧಿಕಾ ಅವರೊಟ್ಟಿಗಿನ ಫೋಟೋ ಶೇರ್ ಮಾಡಿದ್ದು ರಾಧಿಕಾ ಮನೆಯಲ್ಲಿ ಹೊಸ ರೂಲ್ಸ್ ಹಾಕಿದ್ದಾರೆಂದಿದ್ದಾರೆ.. “ಕರ್ನಾಟಕ ಸರ್ಕಾರ ಹೊಸ ಲಾಕ್ ಡೌನ್ ನಿಯಮವನ್ನು ಜಾರಿಗೊಳಿಸಿದೆ.. ಮನೆಯಲ್ಲಿ‌ ಪತ್ನಿ ಕೂಡ ಹೊಸ ರೂಲ್ಸ್ ಹಾಕಿದ್ದಾರೆ.. ಪ್ರತಿದಿನ ರಾತ್ರಿ 8 ರ ಒಳಗೆ ಮನೆಗೆ ಬರಬೇಕು.. ಭಾನುವಾರ ಸಂಪೂರ್ಣ ಲಾಕ್ ಡೌನ್.. ಹೊರಗೆಲ್ಲೂ ಹೋಗುವ ಹಾಗಿಲ್ಲ.. ಇರಲಿ.. ಪತ್ನಿಯ ಈ ನಿಯಮಗಳು ನಾವು ಆರೋಗ್ಯವಾಗಿರಲು ಸಹಕಾರಿ.. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರಲಿ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.. ಹೆಂಡತಿ ರೂಲ್ಸ್ ಗೆ ತಲೆ ಮೇಲೆ ಕೈ ಹೊತ್ತ ಯಶ್ ನೋಡಿ ಅಭಿಮಾನಿಗಳು ಪ್ರೀತಿಯಿಂದಲೇ ಕಾಲೆಳೆದಿದ್ದು, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದಿದ್ದಾರೆ..

ಸದ್ಯ ಭಾರತ ಸಿನಿಮಾ ಇಂಡಸ್ಟ್ರಿಯ ಸೆನ್ಸೇಷನ್ ಆಗಿರುವ ಯಶ್ ಅವರು ಬಹಳ ದಿನಗಳ ಬಳಿಕ ಫೋಟೋ ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ 50 ಸಾವಿರ ಮೆಚ್ಚುಗೆ ಪಡೆದಿದ್ದು, ಪರಿಶ್ರಮ ಹಾಗೂ ಪ್ರೀತಿಯಿಂದ ಮಾಡಿದ ಕೆಜಿಎಫ್ ಸಿನಿಮಾ ಯಾವ ಮಟ್ಟದಲ್ಲಿ ಯಶ್ ಅವರ ಜೀವನ ಬದಲಾಯಿಸಿತು ಎನ್ನಲು ಇದೇ ಉದಾಹರಣೆ.‌

Be the first to comment

Leave a Reply

Your email address will not be published.


*