ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಸಾಲು ಸಾಲು ಸುದ್ದಿಗೆ ನಿಜವಾದ ಕಾರಣ ಯಾರು ಗೊತ್ತಾ?

ನಿನ್ನೆ ಕೆಂಪೇಗೌಡರ ಜಯಂತಿ ಇದ್ದ ಕಾರಣ ದರ್ಶನ್ ಅವರು ಫೋಟೋವೊಂದನ್ನು ಪೋಸ್ಟ್ ಮಾಡಿ ಕೆಂಪೇ ಗೌಡರ ಜಯಂತಿಯ ಶುಭಾಶಯ ತಿಳಿಸಿದ್ದು, ಆದಷ್ಟು ಬೇಗ ಬೆಂಗಳೂರು ಮೊದಲಿನಂತಾಗಲಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.. ಇಲ್ಲಿ ದರ್ಶನ್ ಅವರ ಪೋಸ್ಟ್ ನ ಉದ್ದೇಶ ಜಯಂತಿಯ ಶುಭಾಶಯ ತಿಳಿಸುವುದು ಹಾಗೂ ಬೆಂಗಳೂರು ಮೊದಲಿನಂತಾಗಲಿ ಎಂಬುದು.. ಆದರೆ ನಿನ್ನೆಯಿಂದ ಖಾಸಗಿ ವಾಹಿನಿಯೊಂದು ದರ್ಶನ್ ಅವರ ಉದ್ದೇಶವನ್ನು ತಿಳಿಯದೆ ಕೇವಲ ಅವರು ಹಾಕಿರುವ ಫೋಟೋ ಹಿಡಿದು ಅವರ ವಿರುದ್ಧ ಸಾಲು ಸಾಲು ಸುದ್ದಿಗಳನ್ನು ಪೋಸ್ಟ್ ಮಾಡುತ್ತಿದ್ದು ಇದೀಗ ದರ್ಶನ್ ಅಭಿಮಾನಿಗಳು ವಾಹಿನಿ ವಿರುದ್ಧ ತಿರುಗಿಬಿದ್ದಿದ್ದಾರೆ..

ಹೌದು ದರ್ಶನ್ ಅವರು ಹಾಕಿರುವ ಫೋಟೋ ಕೆಂಪೇ ಗೌಡರದ್ದಲ್ಲ ಬದಲಿಗೆ ವೀರ ಮದಕರಿ ನಾಯಕರದ್ದು ಎಂದು.. ಸರಿ ಇಲ್ಲಿ ದೊಡ್ಡ ಸುದ್ದಿ ಮಾಡುವುದೇನಿದೆ? ಮೀಡಿಯಾದವರ ಬಳಿ ಮುಖ್ಯಮಂತ್ರಿಗಳಿಂದ ಹಿಡಿದು ಸೂಪರ್ ಸ್ಟಾರ್ ಗಳ ಫೋನ್ ನಂಬರ್ ಕೂಡ ಇರುತ್ತದೆ.. ಅಕಸ್ಮಾತ್ ಅವರು ತಪ್ಪಾಗಿಯೇ ಫೋಟೋ ಹಾಕಿದ್ದರೆ ಅದನ್ನು ಒಂದು ಮೆಸೆಜ್ ಮಾಡಿ ಹೇಳಬಹುದಿತ್ತು.. ಅದಕ್ಕೂ ಮೀರಿ ಅನೇಕ ಸುದ್ದಿ ವಾಹಿನಿಗಳು ಕೆಂಪೇಗೌಡರ ಸುದ್ದಿ ಮಾಡುವಾಗ ಅದೇ ಫೋಟೋವನ್ನು ಬಳಸಿವೆ..

ಈಗಲು ಗೂಗಲ್ ನಲ್ಲಿ ತೆರೆದು ನೋಡಿದರೆ ಸುವರ್ಣ ವಾಹಿನಿ ಕೂಡ ಕೆಂಪೇಗೌಡರ ಫೋಟೋ ಗೆ ಅದೇ ಫೋಟೋವನ್ನು ಬಳಸಿದೆ.. ಇನ್ನು ದರ್ಶನ್ ಅವರ ವಿರುದ್ಧ ಸುದ್ದಿ ಮಾಡುತ್ತಿರುವ ಖಾಸಗಿ ವಾಹಿನಿ ಕೂಡ ಅದೇ ಫೋಟೋವನ್ನು ಬಳಸಿ‌ ಕೆಂಪೇ ಗೌಡರಿಗೆ ಜೈ ಹೋ ಎಂಬ ಕಾರ್ಯಕ್ರಮವನ್ನು‌‌ ಮಾಡಿದೆ.. ಅದರೆ ದರ್ಶನ್ ಅವರ ವಿರುದ್ಧ ಯಾಕೆ ಈ ಮಟ್ಟದ ಧ್ವೇಷ?

ದರ್ಶನ್ ಆಗಲಿ ಸುದೀಪ್ ಆಗಲಿ ಪುನೀತ್ ಆಗಲಿ‌.. ಯಾರೇ ಸ್ಟಾರ್ ಆಗಲಿ.. ಅವರು ನಮ್ಮವರು.. ನಮ್ಮ ಕನ್ನಡದವರು‌‌.. ಸುದ್ದಿ ಮಾಡುವ ವಿಚಾರವ ಇದು? ಒಂದು ಮೆಸೆಜ್ ಹಾಕಿ “ಸರ್ ಫೋಟೋ ತಪ್ಪಾಗಿದೆ ನೋಡಿ” ಎಂದು ಒಂದು ಮೆಸೆಜ್ ಮಾಡಿದ್ದಿದ್ದರೆ ದೊಡ್ಡವರಾಗುತ್ತಿದ್ದರು.‌. ರಾಜ್ಯದಲ್ಲಿ ಕೊರೊನಾ ತಾಂಡವ ಆಡುತ್ತಿದೆ.. ಜನರು ಹಸಿವಿನಿಂದ ಸಾಯ್ತಾ ಇದ್ದಾರೆ.. ಜೀವನ ಬೀದಿಗೆ ಬಂದಿದೆ.. ಇವೆಲ್ಲವನ್ನು ಬಿಟ್ಟು ದರ್ಶನ್ ಗೆ ಕೆಂಪೇ ಗೌಡರು ಯಾರು ಅಂತಾನೆ ಗೊತ್ತಿಲ್ಲ ಎಂಬ ದೊಡ್ಡ ಸುದ್ದಿ ಮಾಡುವ ಅಗತ್ಯ ಇದೆಯಾ?

ಅದರಲ್ಲೂ ದರ್ಶನ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ಎಂದೆಲ್ಲಾ ಬಿಂಬಿಸುತ್ತಿದ್ದಾರೆ.. ಆದರೆ ವಾಸ್ತವವಾಗಿ ದರ್ಶನ್ ಅವರ ವಿರುದ್ಧ ಯಾವ ಆಕ್ರೋಶವೂ ಇಲ್ಲ ಮಣ್ಣೂ ಇಲ್ಲ.. ಬದಲಿಗೆ ಇದನ್ನು ದೊಡ್ಡ ಸುದ್ದಿ ಮಾಡಿದವರ ವಿರುದ್ಧವೇ ಆಕ್ರೋಶ ವ್ಯಕ್ತವಾಗುತ್ತಿದೆ.. ಸಿನಿಮಾ ವಿಚಾರ ಅಂತ ಬಂದಾಗ ಒಬ್ಬೊಬ್ಬರಿಗೆ ಒಂದೊಂದಷ್ಟು ಜನ ಅಭಿಮಾನಿಗಳು ಇರಬಹುದು.. ಆದರೆ ನಮ್ಮ ನಾಡಿನ ವಿಚಾರ ಬಂದಾಗ ನಮ್ಮ ಎಲ್ಲಾ ಸ್ಟಾರ್ ಗಳನ್ನು ಎಲ್ಲರೂ ಸಹ ಬೆಂಬಲಿಸ್ತೇವೆ.. ಮೊದಲು ಮಾದ್ಯಮದವರೇ ಕೆಂಪೇಗೌಡರ ಫೋಟೋಗೆ ಯಾವ ಫೋಟೋ ಹಾಕಿದ್ದೀರೆಂದು ಖಚಿತ ಪಡಿಸಿಕೊಳ್ಳಲಿ.. ಆನಂತರ ಮಾತನಾಡಲಿ ಎಂಬುದು ನೆಟ್ಟಿಗರ ಅಭಿಪ್ರಾಯ..

Be the first to comment

Leave a Reply

Your email address will not be published.


*