ಮೇಘನಾ ಕಂಡರೆ ವಿಷ್ಣುವರ್ಧನ್ ಅವರಿಗೆ ಯಾಕಿಷ್ಟು ಪ್ರೀತಿ ಗೊತ್ತಾ? ವಿಷ್ಣುವರ್ಧನ್ ಅವರು ಬಳಸುತ್ತಿದ್ದ ಬೆಲೆ ಬಾಳುವ ವಸ್ತು ಈಗಲೂ ಮೇಘನಾ ಅವರ ಬಳಿಯೇ ಇದೆ..

ವಿಷ್ಣುವರ್ಧನ್ ಅವರಿಗೆ ಮೇಘನಾ ಎಂದರೆ ಯಾಕಿಷ್ಟು ಪ್ರೀತಿ? ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಮೇಘನಾ ಅವರು ವಿಷ್ಣುವರ್ಧನ್ ಅವರ ಜೊತೆ ಇರುವ ಕೆಲ ಫೋಟೋಗಳು ಹರಿದಾಡುತ್ತಿವೆ.. ಅದರಲ್ಲಿ ವಿಷ್ಣುವರ್ಧನ್ ಅವರು ಬಹಳ ಆತ್ಮೀಯವಾಗಿ ಮೇಘನಾರ ಜೊತೆ ಇರುವುದನ್ನು ನಾವು ನೋಡಬಹುದು..‌ ವಿಷ್ಣುವರ್ಧನ್ ಅವರು ಬಳಸುತ್ತಿದ್ದ ಬೆಲೆ ಬಾಳುವ ವಸ್ತು ಈಗಲೂ ಮೇಘನಾ ಅವರ ಬಳಿಯೇ ಇದೆ.. ಹೌದು ಸಂಪೂರ್ಣವಾಗಿ ಓದಿ ನೋಡಿ ವಿಷ್ಣುವರ್ಧನ್ ಅವರಿಗೆ ಮೇಘನಾ ಅವರ ಮೇಲೆ ಎಷ್ಟು ಪ್ರೀತಿ ಇತ್ತು ತಿಳಿಯುತ್ತದೆ..

ವಿಷ್ಣುವರ್ಧನ್ ಅವರ ಕುಟುಂಬಕ್ಕೆ ಸುಂದರ್ ರಾಜ್ ಅವರು ಹಾಗೂ ಪ್ರಮಿಳಾ ಅವರು ಬಹಳ ಎಂದರೆ ಬಹಳ ಆಪ್ತರು.. ಒಂದೇ ಕುಟುಂಬದ ರೀತಿ ಎಂದರೂ ತಪ್ಪಾಗಲಾರದು.. ಹಂಸಲೇಖ ಅವರು ಹೇಳಿದಂತೆ ಕಲೆಯನ್ನೇ ಅನ್ನವೆಂದ ಕುಟುಂಬ ಸುಂದರ್ ರಾಜ್ ಅವರ ಕುಟುಂಬ.. ಹೌದು 30-40 ವರ್ಷದಿಂದ ಕಲಾ ಸೇವೆಯನ್ನೇ ಮಾಡುತ್ತಿರುವ ಸುಂದರ್ ರಾಜ್ ಹಾಗೂ ಪ್ರಮಿಳಾ ಅವರು ನಟನೆಯನ್ನೇ ನಂಬಿ ಬದುಕಿದವರು.. ಈಗಲೂ ಈ ಇಬ್ಬರ ಕಂಡರೆ ಸಿನಿಮಾ ಇಂಡಸ್ಟ್ರಿಯಲ್ಲಿ‌ ಎಲ್ಲರಿಗೂ ಗೌರವ..

ಇನ್ನು ವಿಷ್ಣುವರ್ಧನ್ ಹಾಗೂ ಭಾರತಿ ಅವರಿಗೆ ಅವರಿಗೆ ಇವರ ಕಂಡರೆ ಎಲ್ಲಿಲ್ಲದ ಪ್ರೀತಿ.. ಮೊದಲಿನಿಂದಲೂ ಈ ಎರಡು ಕುಟುಂಬದ ಸ್ನೇಹ ಆತ್ಮೀಯವಾಗಿತ್ತು.. ಇನ್ನು ಸುಂದರ್ ರಾಜ್ ಹಾಗೂ ಪ್ರಮಿಳಾ ಅವರನ್ನು ಬಹಳ ಚಿಕ್ಕ ವಯಸ್ಸಿನಿಂದ ನೋಡಿಕೊಂಡು ಬಂದ ವಿಷ್ಣುವರ್ಧನ್ ಅವರಿಗೆ ಅವರ ಮಗಳು ಮೇಘನಾ ಕಂಡರೆ ಬಹಳ ಪ್ರೀತಿ.. ಸಣ್ಣ ವಯಸ್ಸಿನಿಂದಲೂ ಎತ್ತಿ ಆಡಿಸಿದ್ದಾರೆ.. ತಿಂಗಳಿಗೆ ಒಮ್ಮೆಯಾದರೂ ಈ ಎರಡು ಕುಟುಂಬ ಒಟ್ಟಿಗೆ ಸೇರುತಿತ್ತು‌.. ವಿಷ್ಣುವರ್ಧನ್ ಅವರ ಜೊತೆ ಮೇಘನಾರ ಸಾಕಷ್ಟು ಫೋಟೋಗಳಿವೆ..

ಈಗಲೂ ಸಹ ವಿಷ್ಣುವರ್ಧನ್ ಅವರ ಮನೆಗೆ ಹೋದರೆ ಭಾರತಿ ವಿಷ್ಣುವರ್ಧನ್ ಅವರು ಮೇಘನಾರಿಗೆ ಕೈ ತುತ್ತು ಹಾಕುತ್ತಾರೆ.. ಇನ್ನು ಎರಡೂ ಮನೆಯಲ್ಲಿ ಯಾವುದೇ ಸಮಾರಂಭವಾದರೂ ಒಂದೇ ಮನೆಯಲ್ಲಿ ಆದಂತೆ.. ಮೇಘನಾರಿಗೂ ವಿಷ್ಣುವರ್ಧನ್ ಅವರೆಂದರೆ ಬಹಳ ಪ್ರೀತಿ ಗೌರವ..

ಮೇಘನಾರಿಗೆ ವಿಷ್ಣುವರ್ಧನ್ ಅವರೆಂದರೆ ತುಂಬಾ ಇಷ್ಟ ಎಂಬ ವಿಚಾರ ಮನೆಯವರಿಗೆಲ್ಲಾ ಗೊತ್ತಿತ್ತು.. ಇದೇ ಕಾರಣಕ್ಕೆ ವಿಷ್ಣುವರ್ಧನ್ ಅವರ ಮಗಳು ಕೀರ್ತಿ ಅವರು ಅಪ್ಪ ಸದಾ ಬಳಸುತ್ತಿದ್ದ ಬೆಲೆ ಬಾಳುವ ವಾಚ್ ವೊಂದನ್ನು ತಾವು ಇಟ್ಟುಕೊಳ್ಳದೇ ಮೇಘನಾರಿಗೆ ಕೊಟ್ಟುಬಿಟ್ಟರು.. ಯಾರ ಬಳಿಯೂ ಇರದ ವಿಷ್ಣುವರ್ಧನ್ ಅವರ ಅಪರೂಪದ ನೆನಪು ಈಗಲೂ ಸಹ ಮೇಘನಾ ಅವರ ಜೊತೆಯಲ್ಲಿಯೇ ಇದೆ.. ಆಗಾಗ ಮೇಘನಾ ಅವರು ವಿಷ್ಣುವರ್ಧನ್ ಅವರ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.. ವಾಚ್ ವಿಚಾರವನ್ನೂ ಸಹ ಅವರೇ ಒಮ್ಮೆ ತಿಳಿಸಿದ್ದರು.. ಮನುಷ್ಯರು ಇಲ್ಲವಾದರೂ ಅವರು ತೋರಿದ ಪ್ರೀತಿ ಸದಾ ಶಾಶ್ವತ..

Be the first to comment

Leave a Reply

Your email address will not be published.


*