ಸ್ಮಿತಾ ಅವರು ಮೇಘನಾರನ್ನು ಭೇಟಿಯಾಗಲು ನಿಜವಾದ ಕಾರಣವೇ ಬೇರೆ..

ನಟ ಚಿರಂಜೀವಿ ಸರ್ಜಾ ಅವರ ಅಗಲಿಕೆಯಿಂದ ಸರ್ಜಾ ಕುಟುಂಬ ಹಾಗೂ ಸುಂದರ್ ರಾಜ್ ಅವರ ಕುಟುಂಬ ನೋವಿನಲ್ಲಿದೆ.. ಚಿರು ಇಲ್ಲದ ಜೀವನವನ್ನು ಅಭ್ಯಾಸ ಮಾಡಿಕೊಳ್ಳಲೇ ಬೇಕಿದೆ.. ಇಂತಹ ಸಮಯದಲ್ಲಿ ನಿನ್ನೆಯಷ್ಟೇ ಸಿದ್ದರಾಮಯ್ಯನವರ ಸೊಸೆ ಸ್ಮಿತಾ ಅವರು ಪ್ರಥಮ್ ಜೊತೆ ಹೋಗಿ ಮೇಘನಾರನ್ನು ಭೇಟಿ ಮಾಡಿ ಬಂದಿದ್ದಾರೆ.. ಆದರೆ ಈ ಭೇಟಿಯ ಬಗ್ಗೆ ಅನೇಕರು ಇಲ್ಲ ಸಲ್ಲದ ಮಾತುಗಳನ್ನಾಡುತ್ತಿದ್ದಾರೆ.. ಸ್ಮಿತಾ ಅವರು ಮೇಘನಾರನ್ನು ಭೇಟಿಯಾದ ನಿಜವಾದ ಕಾರಣವೇ ಬೇರೆ ಇದೆ..

ಸ್ಮಿತಾ ಅವರು ಈ ಮುನ್ನ ಎಲ್ಲಿಯೂ ಕಾಣಿಸಿಕೊಂಡಿಲ್ಲ.. ಯಾವುದೇ ಸಭೆ ಸಮಾರಂಭದಲ್ಲಿಯೂ ಕಾಣಿಸಿಕೊಂಡವರಲ್ಲ.. ನಿಜ ಹೇಳಬೇಕು ಎಂದರೆ ಮೇಘನಾ ಅವರು ಸ್ಮಿತಾ ಅವರಿಗೆ ಅಷ್ಟಾಗಿ ಪರಿಚಯವೂ ಇಲ್ಲ.. ಇಲ್ಲಿ ಎಲ್ಲದಕ್ಕಿಂತ ಮಿಗಿಲಾದದ್ದು ಮಾನವೀಯತೆಯಷ್ಟೇ.. ಸ್ಮಿತಾ ಅವರು ಕೂಡ ಈ ಹಿಂದೆ ತಮ್ಮ ಪತಿ ರಾಕೇಶ್ ಸಿದ್ದರಾಮಯ್ಯನವರನ್ನು ಕಳೆದುಕೊಂಡಾಗ ಇಂತಹುದೆ ಸಂದರ್ಭವನ್ನು ಎದುರಿಸಿ ಮರಳಿ ಜೀವನ ಕಟ್ಟಿಕೊಂಡವರು..

ಯಾವುದೇ ಹೆಣ್ಣಾಗಲಿ ತಾನು ಅನುಭವಿಸಿದ ನೋವನ್ನು ಮತ್ತೊಬ್ಬರು ಅನುಭವಿಸುವಾಗ ಮರುಗುವುದು ಸಹಜ.. ಇದೇ ಕಾರಣಕ್ಕೆ ಇಂತಹ ಸಮಯದಲ್ಲಿ ಮೇಘನಾರಿಗೆ ಧೈರ್ಯ ತುಂಬಿ ಸಾಂತ್ವಾನ ಹೇಳಬೇಕೆಂಬ ಕಾರಣಕ್ಕೆ ಪ್ರಥಮ್ ಅವರ ಜೊತೆ ಭೇಟಿ ಮಾಡಿದ್ದಾರೆ.. ಪ್ರಥಮ್, ಸರ್ಜಾ ಕುಟುಂಬಕ್ಕೂ ಪರಿಚಿತ.. ಹಾಗೂ ಸಿದ್ದರಾಮಯ್ಯನವರ ಕುಟುಂಬಕ್ಕೂ ಆತ್ಮೀಯ.. ಇದೇ ಕಾರಣಕ್ಕೆ ಪ್ರಥಮ್ ಜೊತೆ ಹೋಗಿ ಮೇಘನಾರನ್ನು ಭೇಟಿ‌ ಮಾಡಿದ್ದಾರೆ..

ಮೇಘನಾ ಗರ್ಭಿಣಿ ಆಗಿರುವ ಕಾರಣ ಅವರು ತನ್ನ ತಂದೆ ಮನೆಯಲ್ಲಿಯೇ ಇದ್ದಾರೆ.. ನಿನ್ನೆ ಸ್ಮಿತಾ ಅವರು ಹಾಗೂ ಪ್ರಥಮ್ ಇಬ್ಬರೂ ಸಹ ಸುಂದರ್ ರಾಜ್ ಅವರ ಮನೆಗೆ ಭೇಟಿ ನೀಡಿ ಮೇಘನಾರ ಬಳಿ ಒಂದಷ್ಟು ಸಮಯ ಮಾತನಾಡಿ ಸಾಂತ್ವಾನ ಹೇಳಿದ್ದಾರೆ. ಪ್ರಥಮ್ ಅವರು ಹೇಳಿದಂತೆ ಅಕ್ಕನ ಸ್ಥಾನದಲ್ಲಿ ನಿಂತು ಮೇಘನಾರಿಗೆ ಧೈರ್ಯ ತುಂಬಿದ್ದಾರೆ.. ಅದರಲ್ಲಿಯೂ ಗರ್ಭಿಣಿಯಾದ ಈ ಸಮಯದಲ್ಲಿ ಒತ್ತಡ ತೆಗೆದುಕೊಳ್ಳದೆ ಬರುವುದನ್ನು ಸ್ವೀಕರಿಸಿ ಸುಮ್ಮನೆ ಮುಂದೆ ಸಾಗುತಲಿರಬೇಕು ಎಂದು ಸಂತೈಸಿದ್ದಾರೆ..

ಎಲ್ಲಕ್ಕಿಂತ ದೊಡ್ಡದು ಮಾನವೀಯತೆ.. ಅದನಷ್ಟೇ ಮನಸ್ಸಿನಲ್ಲಿಟ್ಟುಕೊಳ್ಳಿ.. ಈ ಸಂದರ್ಭದಲ್ಲಿ ಆ ಕುಟುಂಬಕ್ಕೆ ಸಾಂತ್ವಾನದ ಅಗತ್ಯ ಇರುತ್ತದೆ.. ಇದಕ್ಕೆ ರಾಜಕೀಯವನ್ನಾಗಲಿ ಅಥವಾ ಮತ್ಯಾವುದೋ ಇಲ್ಲದ ಮಾತುಗಳನ್ನು ಸೇರಿಸಬೇಡಿ.. ಆದಷ್ಟು ಬೇಗ ಮೇಘನಾ ಅವರು ಈ ನೋವಿನಿಂದ ಹೊರ ಬರಲಾಗದಿದ್ದರೂ.. ಕನಿಷ್ಠ ಗಟ್ಟಿಯಾಗಲಿ.. ಕೆಲ ತಿಂಗಳಲ್ಲಿ ಪುಟ್ಟ ಚಿರು ಜನಿಸಿ ಮೇಘನಾರ ಮಡಿಲು ಸೇರಲಿ.. ಆ ಕುಟುಂಬಕ್ಕೆ ಆ ಕಂದನಿಂದ ಒಂದಷ್ಟು ಸಂತೋಷ ಸಿಗಲಿ.. ಆ ದೇವರು ನೂರ್ಕಾಲ ಚೆನ್ನಾಗಿ ಬದುಕುವಂತೆ ಆಶೀರ್ವದಿಸಲಿ..

Be the first to comment

Leave a Reply

Your email address will not be published.


*