ಪಾರು ಧಾರಾವಾಹಿಯ ಈ ನಟಿ ನಿಜಕ್ಕೂ ಯಾರು ಗೊತ್ತಾ?

ತೆರೆಯ ಮೇಲೆ ಕಲಾವಿದರನ್ನು ನೋಡಿದಾಗ ಅವರೆಲ್ಲಾ ದೊಡ್ಡ ದೊಡ್ಡ ಶ್ರೀಮಂತರು.. ಅನುಕೂಲಸ್ಥರು.. ಅವರಿಗೆ ಏನು ಕಡಿಮೆ ಅನ್ನೋ ಭಾವನೆ ನೋಡುಗರ ಮನಸ್ಸಿನಲ್ಲಿ ಮೂಡೋದು ಸಹಜ.. ಆದರೆ ವಾಸ್ತವ ಬೇರೆಯೇ ಇರುತ್ತದೆ.‌ ಕಲಾವಿದರೆಲ್ಲಾ ಅದೃಷ್ಟವಂತರಲ್ಲ, ರಾಜ ವೈಭೋಗದಲ್ಲಿ ಬೆಳೆದು ಬಂದವರಲ್ಲ. ಎಲ್ಲೋ ಕೆಲವರು ಮಾತ್ರ ಒಳ್ಳೆಯ ಬ್ಯಾಕ್ ಗ್ರೌಂಡ್ ಮೂಲಕ ಇಂಡಸ್ಟ್ರಿಗೆ ಬಂದಿರಿತ್ತಾರೆ. ಆದರೆ ಬಹುತೇಕ ಕಲಾವಿದರು ಕಲ್ಲು ಮುಳ್ಳಿನ ಹಾದಿಯನ್ನು ತುಳಿದು, ಬದುಕಿನ ಬಂಡಿ ಸಾಗಿಸಲು ಈಗಲೂ ಕೂಡ ಕಷ್ಟ ಪಡುತ್ತಲೇ ಇರುತ್ತಾರೆ. ಅಂತವರಲ್ಲಿ ಒಬ್ಬರು ಈ ದಾಮಿನಿ. ಹೌದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಮನ ಗೆದ್ದಿರುವ ಪಾರು ಧಾರಾವಾಹಿಯಲ್ಲಿ ಅರಸನ ಕೋಟೆ ಅಖಿಲಾಂಡೇಶ್ವರಿ ಮನೆಯಲ್ಲಿ ಇರುವ ಹಾಸ್ಯ ಕಲಾವಿದೆ ದಾಮಿನಿ ಅವರು ತೆರೆಯ ಮೇಲೆ ತಮ್ಮ ನಟನೆಯ ಮೂಲಕ ಜನರನ್ನು ಮನರಂಜಿಸುತ್ತಿದ್ದಾರೆ. ಅಗ್ನಿ ಸಾಕ್ಷಿ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಹೆಸರು ಮಾಡಿದ ಈ ನಟಿಯ ನಿಜ ಜೀವನದ ಕತೆ ಕಣ್ಣೀರು ತರಿಸುತ್ತದೆ..

ಹೌದು ದಾಮಿನಿ ಅವರಿಗೆ ಅಪ್ಪ ಅಮ್ಮ ಯಾರೂ ಇಲ್ಲ, ತನ್ನವರೆಲ್ಲಾ ದೂರಾದರು. ಈಕೆ ಯಾರಿಗೂ ಬೇಡವಾದರು. ಇವರು ಬೆಳೆದದ್ದೆಲ್ಲಾ ಒಂದು ಅನಾಥ ಆಶ್ರಮದಲ್ಲಿ. ಅಲ್ಲಿನ ಗುರುಗಳೇ ಇವರಿಗೆ ತಂದೆ ತಾಯಿ ಗುರು ಎಲ್ಲವೂ ಆಗಿದ್ದರು. ನಂತರ ಜೀವನ ರೂಪಿಸಿಕೊಳ್ಳುವ ಸಮಯದಲ್ಲಿ ಸಾಕಷ್ಟು ಅವಮಾನಗಳನ್ನು ಅನುಭವಿಸಿ ಅವಕಾಶಕ್ಕಾಗಿ ಅಂಗಲಾಚುತ್ತಿದ್ದ ಈಕೆ ನಿಜಕ್ಕೂ ಹುಟ್ಟು ಕಲಾವಿದೆ ಎನ್ನಬಹುದು. ಅಷ್ಟರ ಮಟ್ಟಿಗೆ ಇವರ ಅಭಿನಯ ಮನರಂಜಿಸುತ್ತದೆ. ಕೊನೆಗೆ ಆ ಕಲಾ ಸರಸ್ವತಿ ಈಕೆಯ ಕೈ ಬಿಡಲಿಲ್ಲ.. ಅಗ್ನಿ ಸಾಕ್ಷಿ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡರು.. ಇದೀಗ ಪಾರು ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನೂ ಹೇಳಬೇಕೆಂದರೆ ಅರಸನ ಕೋಟೆ ಅಖಿಲಾಂಡೇಶ್ವರಿ ಪಾತ್ರ ಮಾಡಿರುವ ವಿನಯಾ ಪ್ರಸಾದ್ ಅವರು ನಿಜ ಜೀವನದಲ್ಲಿ ಶ್ರೀಮಂತರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ವಿನಯಾ ಪ್ರಸಾದ್ ಅವರು ದಾಮಿನಿ ಅವರಿಗೆ ತೆರೆಯ ಮೇಲೆ ಚೆನ್ನಾಗಿ ಕಾಣಲಿ ಎಂದು ಸಾಕಷ್ಟು ರೇಶಿಮೆಯ ಸೀರೆಗಳನ್ನು ಆಗಾಗ ಉಡುಗೊರೆಯಾಗಿ ನೀಡುತ್ತಿರುತ್ತಾರಂತೆ.

ಅಷ್ಟೇ ಅಲ್ಲದೆ ಕಳೆದ ವರ್ಷ ಜೀ ವಾಹಿನಿಯ ಅವಾರ್ಡ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆಯಲು ವೇದಿಕೆಗೆ ಬಂದ ದಾಮಿನಿ ಅವರು “ನಾನು ಹಾಕಿರುವ ಬಟ್ಟೆ ಕೂಡ ನನ್ನದಲ್ಲ ಇದು ವಿದ್ಯಾ ಮೇಡಂ(ಧಾರಾವಾಹಿ ನಿರ್ಮಾಪಕ ದಿಲೀಪ್ ರಾಜ್ ಅವರ ಮಡದಿ) ಕೊಟ್ಟದ್ದು, ಅವರಿಗೆ ನಾನು ಧನ್ಯವಾದಗಳನ್ನು ಹೇಳುತ್ತೇನೆ ಎಂದಾಗ ನೆರೆದಿದ್ದವರ ಕಣ್ಣಾಲಿಗೆಗಳು ಒದ್ದೆಯಾಗಿದ್ದವು.. ನಂತರದಲ್ಲಿ ವೇದಿಕೆ ಮೇಲೆ ಬಂದ ಜೊತೆಜೊತೆಯಲಿ ಧಾರಾವಾಹಿಯ ಆರ್ಯವರ್ಧನ್ ಪಾತ್ರಧಾರಿ ಅನಿರುದ್ಧ್ ಅವರು, ದಾಮಿನಿ ಅವರ ಬಗ್ಗೆ ಮಾತನಾಡಿ ನೀವು ಇನ್ನು ಮುಂದೆ ನನ್ನ ಕುಟುಂಬದ ಸದಸ್ಯರು ಎಂದು ಕೂಗಿ ಹೇಳಿದರು, ಅಣ್ಣನಾಗಿ ಸದಾ ನಿಮ್ಮೊಂದಿಗೆ ಇರುವೆ ಎಂದಾಗ ಇಡೀ ವೇದಿಕೆ ಚಪ್ಪಾಳೆಯ ಮಳೆಗರೆದಿತ್ತು..‌ ಯಾರೇ ಕೈ ಬಿಟ್ಟರು ನಿಮ್ಮಲ್ಲಿನ ಪ್ರತಿಭೆಗೆ, ನಿಮ್ಮ ಶ್ರದ್ಧೆಗೆ, ನಿಮ್ಮ ಪರಿಶ್ರಮಕ್ಕೆ ದೇವರು ಒಂದಲ್ಲಾ ಒಂದು ದಿನ ಕೈ ಹಿಡಿಯುವನು ಎಂಬುದಕ್ಕೆ ದಾಮಿನಿ ಅವರೇ ನೈಜ್ಯ ಉದಾಹರಣೆ. ನಿಮ್ಮ ಕಲಾ ಸೇವೆ ಹೀಗೆ ಮುಂದುವರೆಯಲಿ.. ಇನ್ನೂ ದೊಡ್ಡ ಮಟ್ಟದ ಯಶಸ್ಸು ನಿಮ್ಮದಾಗಲಿ..

Be the first to comment

Leave a Reply

Your email address will not be published.


*