ಸಿನಿಮಾ ಮಾಡಲು ಚಿರುಗೆ ಹಣ ಕೊಟ್ಟಿದ್ದವರಿಗೆ ಧೃವ ಹೇಳಿದ ಮಾತೇನು ಗೊತ್ತಾ?

ಧೃವ ಸರ್ಜಾ.‌. ತಾನು ಜೀವ ಎಂದುಕೊಂಡಿದ್ದ ಅಣ್ಣನ ಸಾವಿನ ನಂತರ ಕುಗ್ಗಿ ಹೋಗಿದ್ದ ಧೃವ ಇದೀಗ ಮರಳಿ ತಾನು ಮಾಡಬೇಕಾದ ಜವಾಬ್ದಾರಿಗಳ ಬಗ್ಗೆ ಗಮನ ಹರಿಸುತ್ತಿದ್ದಾರೆ..‌ ಹೌದು ಅಣ್ಣನ ಸಾವಿನ ನೋವಿನಿಂದ ಹೊರ ಬರಲಾಗದಿದ್ದರೂ ಮಾಡಬೇಕಾದ ಕರ್ತವ್ಯಗಳನ್ನು ಮಾಡಲೇಬೇಕಾದ್ದರಿಂದ ಇದೀಗ ಒಂದೊಂದೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ..

ಅದೇ ರೀತಿ ಅಣ್ಣನಿಗೆ ಸಿನಿಮಾ ವಿಚಾರವಾಗಿ ಹಣ ಕೊಟ್ಟವರ ಬಗ್ಗೆ ಇದೀಗ ಧೃವ ಸರ್ಜಾ ಮಹತ್ವದ ನಿರ್ಣಯವೊಂದನ್ನು ತೆಗೆದುಕೊಂಡಿದ್ದಾರೆ.. ಹೌದು ಮೊನ್ನೆ ಮೊನ್ನೆಯಷ್ಟೇ ಪೊಗರು ಸಿನಿಮಾದ ಹಾಡೊಂದರ ಚಿತ್ರೀಕರಣ ಬಾಕಿ ಇರುವುದರಿಂದ 10 ದಿನಗಳ ಹಾಡಿನ ಚಿತ್ರೀಕರಣದಲ್ಲಿ ಧೃವ ಸರ್ಜಾ ಭಾಗಿಯಾಗಲಿದ್ದಾರೆ ಎಂಬ ವಿಚಾರ ತಿಳಿದು ಬಂತು.. ಕೇವಲ ತನ್ನ ಸಿನಿಮಾ ಮಾತ್ರವಲ್ಲದೇ ಇದೀಗ ಅಣ್ಣ ಒಪ್ಪಿಕೊಂಡಿದ್ದ ಸಿನಿಮಾಗಳ ಬಗ್ಗೆ ಏನು ಮಾಡಬೇಕು ಎಂಬ ನಿರ್ಧಾರ ತೆಗೆದುಕೊಂಡಿದ್ದಾರೆ..

ಹೌದು ಚಿರು ಅವರು ಈ ವರ್ಷ ಸಹಿ ಮಾಡಿದ ಚಿತ್ರಗಳಷ್ಟೇ ಅಲ್ಲದೇ ಈಗಾಗಲೇ ನಾಲ್ಕು ಸಿನಿಮಾಗಳ ಚಿತ್ರೀಕರಣ ಈಗಾಗಲೇ ನಡೆಯುತಿತ್ತು.. ರಾಜ ಮಾರ್ತಾಂಡ, ರಣಂ, ಕ್ಷತ್ರಿಯ, ಏಪ್ರಿಲ್ ಸಿನಿಮಾಗಳ ಕೆಲಸ ಚಿರು ಅಕಾಲಿಕ ಮರಣದ ಕಾರಣ ಅರ್ಧಕ್ಕೆ ನಿಂತಿತು.. ಅದರಲ್ಲೂ ರಾಜ ಮಾರ್ತಾಂಡ ಸಿನಿಮಾದ ಚಿತ್ರೀಕರಣ ಸಂಪೂರ್ಣಗೊಂಡಿದ್ದು, ಡಬ್ಬಿಂಗ್ ಕೆಲಸವೂ ಬಹುತೇಕ ಪೂರ್ಣಗೊಂಡಿದ್ದು, ಕೆಲ ಭಾಗದ ಡಬ್ಬಿಂಗ್ ಮಾತ್ರ ಬಾಕಿ ಉಳಿದಿದೆ.. ಲಾಕ್ ಡೌನ್ ಬಳಿಕ ಡಬ್ಬಿಂಗ್ ಮಾಡೋಣ ಎಂದು ಚಿರು ತಿಳಿಸಿದ್ದರಂತೆ.. ಆದರೆ ಅಷ್ಟರಲ್ಲಿ ಚಿರು ಇಹಲೋಕ ತ್ಯಜಿಸಿದರು.. ಇದೀಗ ಚಿರು ಅವರ ಸಿನಿಮಾ ವಿಚಾರದಲ್ಲಿ ಧೃವ ಅವರು ನಿರ್ಧಾರ ತೆಗೆದುಕೊಂಡಿದ್ದು, ರಾಜ ಮಾರ್ತಾಂಡ ಸಿನಿಮಾದಲ್ಲಿ ಅಣ್ಣನ ಭಾಗದ ಡಬ್ಬಿಂಗ್ ಅನ್ನು ತಾನೇ ಮಾಡುವುದಾಗಿ ತಿಳಿಸಿದ್ದಾರಂತೆ.. ಅಷ್ಟೇ ಅಲ್ಲದೆ ಕ್ಷತ್ರಿಯಾ ಸಿನಿಮಾದ ಚಿತ್ರೀಕರಣ ಕೂಡ ಕೊನೆ ಹಂತ ತಲುಪಿತ್ತು.. ಜೊತೆಗೆ ಇನ್ನು ಎರಡು ಸಿನಿಮಾಗಳಿಗೆ ಚಿರು ಸರ್ಜಾ ಸಹಿ ಮಾಡಿದ್ದರು.

ಈ ಎಲ್ಲಾ ನಿರ್ಮಾಪಕರ ಬಳಿಯೂ ಮುಂದಿನ ತಿಂಗಳು ಅಂದರೆ ಜುಲೈ ನಲ್ಲಿ ಮಾತನಾಡಿ ಏನು ಮಾಡಬೇಕೆಂಬ ನಿರ್ಧಾರ ಕೈಗೊಳ್ಳಲಿದ್ದಾರೆ.. ಚಿತ್ರೀಕರಣವಾಗದ ಸಿನಿಮಾಗಳ ನಿರ್ಮಾಪಕರಿಂದ ಅಡ್ವಾನ್ಸ್ ಹಣ ಪಡೆದಿದ್ದರೆ ಅದನ್ನೆಲ್ಲಾ ಮರಳಿಸಲಿದ್ದು, ಅರ್ಧ ಚಿತ್ರೀಕರಣಗೊಂಡ ಸಿನಿಮಾಗಳನ್ನು ಏನು ಮಾಡಬಹುದೆಂದು ನಿರ್ಮಾಪಕರೊಂದಿಗೆ ಯೋಚಿಸಿ ನಿರ್ಧರಿಸಲಿದ್ದಾರೆ ಎಂದು ತಿಳಿದುಬಂದಿದೆ..

Be the first to comment

Leave a Reply

Your email address will not be published.


*