ಜೀವ ಕಳೆದು ಕೊಂಡ ಟಿಕ್ ಟಾಕ್ ಸ್ಟಾರ್ ಆಗಿ ಮೆರೆದ ಯುವತಿ..

ನಿಜಕ್ಕೂ ಈ ಟಿಕ್ ಟಾಕ್ ಇನ್ನೆಷ್ಟು ಯುವ ಜನತೆಯ ಜೀವ ಪಡೆವುದೋ ಆ ದೇವರೇ ಬಲ್ಲ.. ಮೊನ್ನೆ ಮೊನ್ನೆಯಷ್ಟೇ ತಮಿಳುನಾಡಿನಲ್ಲಿ ಟಿಕ್ ಟಾಕ್ ಮಾಡುವ ಸಲುವಾಗಿ ಜೀವಂತ ಮೀನು ನುಂಗಿದ ಯುವಕ ಜೀವ ಕಳೆದುಕೊಂಡಿದ್ದ.. ಕೂಲಿ ಮಾಡಿ ಸಂಸಾರ ಸಾಗಿಸುತ್ತಿದ್ದ ಆತನ ಕುಟುಂಬ ಮಗನನ್ನು ಕಳೆದುಕೊಂಡು ಬೀದಿಗೆ ಬಿತ್ತು.. ಕೆಲ ತಿಂಗಳ ಹಿಂದೆ ತುಮಕೂರಿನ ಯುವಕನೊರ್ವ ಟಿಕ್ ಟಾಕ್ ಮಾಡಲು ಹೋಗಿ ಕತ್ತು ಮುರಿದುಕೊಂಡು ಆತನೂ ಇಲ್ಲವಾದ.. ಇದೀಗ ಟಿಕ್ ಟಾಕ್ ಬಳಸಿ ಸ್ಟಾರ್ ಆಗಿದ್ದ ಯುವತಿಯೊರ್ವಳು ಜೀವ ಕಳೆದುಕೊಂಡಿದ್ದಾಳೆ..

ಮನರಂಜನೆಗಾಗಿ ಬಂದ ಆಪ್ ಒಂದು ಜೀವನವನ್ನೇ ಈ ರೀತಿ ಆವರಿಸಿಕೊಂಡು ಅದಿಲ್ಲದಿದ್ದರೆ ಬಾಳುವುದೇ ಸಾಧ್ಯವಿಲ್ಲ ಎನ್ನುವ ಮಟ್ಟಕ್ಕೆ ಕೆಲವರು ಹೋಗಿಬಿಟ್ಟಿದ್ದಾರೆ.. ಇನ್ನು ಕೆಲವರು ಇದರಿಂದ ದೊಡ್ಡ ಸ್ಟಾರ್ ಆಗಿಬಿಟ್ಟೆ ಎಂದು ಬೀಗುತ್ತಿದ್ದಾರೆ.. ಆದರೆ ವಾಸ್ತವ ಬೇರೆಯೇ ಇದೆ.. ಇದನ್ನೇ ಜೀವನ ಎಂದುಕೊಂಡಿರುವ ಅನೇಕ ಯುವ ಜನತೆ ಮುಂದೆ ತಿನ್ನಲು ಅನ್ನ ಸಿಗದೇ ಜೀವನ ಕಟ್ಟಿಕೊಳ್ಳಲು ಹೆಣಗಾಡುವ ಸಂದರ್ಭದಲ್ಲಿ ತಾವು ಕಳೆದುಕೊಂಡ ಅತ್ಯಮೂಲ್ಯ ಸಮಯದ ಬಗ್ಗೆ ಅರಿವಾಗಬಹುದೇನೋ.. ಅದೇನೇ ಆದರೂ ಒಂದು ಇತಿಮಿತಿಯಲ್ಲಿದ್ದರೇ ಎಲ್ಲವೂ ಒಳ್ಳೆಯದೇ.. ಮಿತಿ ಮೀರಿದರೆ ಈ ರೀತಿಯ ಘಟನೆ ನಡೆಯುತ್ತವೆ..

ಹೌದು ಟಿಕ್ ಟಾಕ್ ಸ್ಟಾರ್ ಸಿಯಾ ಕಕ್ಕರ್ ಕೇವಲ 16 ವರ್ಷದ ಯುವತಿ‌ ಇಂದು ಜೀವ ಕಳೆದುಕೊಂಡಿದ್ದಾಳೆ.. ಮುಂಬೈ ನವಳಾದ ಸಿಯಾ ತನ್ನ ಟಿಕ್ ಟಾಕ್ ಡ್ಯಾನ್ಸ್ ವೀಡಿಯೋ ಮೂಲಕ ಚಿಕ್ಕ ವಯಸ್ಸಿಗೇ ಅಪಾರ ಫಾಲೋವರ್ಸ್ ಗಳಿಸಿದ್ದಳು.. ಆದರೆ ವಿಧಿ ಚಿಕ್ಕ ವಯಸ್ಸಿನಲ್ಲಿಯೇ ಜೀವ ಹೋಗುವಂತಾಗಿ ಹೋಯ್ತು.. ಈ ಬಗ್ಗೆ ವಿರಲ್ ಬಯಾನಿ ಎಂಬಾತ ಪೋಸ್ಟ್ ಮಾಡಿದ್ದು, ಬುಧವಾರ ಸಂಜೆಯ ವರೆಗೂ ಆಕೆ ಚೆನ್ನಾಗಿದ್ದಳು.. ಅವಳ ಹಾಡಿನ ಮಾತುಕತೆಯೊಂದು ನಡೆದಿತ್ತು.. ಅವಳ ಜೊತೆ ಸದಾ ಜೊತೆಯಲ್ಲಿಯೇ ಇರುತ್ತಿದ್ದ ಮ್ಯಾನೇಜರ್ ಅರ್ಜುನ್ ಗೂ ಈ ವಿಚಾರ ತಿಳಿಯಲಿಲ್ಲ ಎಂದು ಬರೆದು ಪೋಸ್ಟ್ ಮಾಡಿದ್ದಾರೆ..

16 ವರ್ಷಕ್ಕೆ ಮ್ಯಾನೇಜರ್ ಅಂತೆ.. ಅದೊಂದು ಕಾಲವಿತ್ತು.. ವಯಸ್ಸಿಗೆ ಬಂದರೂ ಅಪ್ಪನನ್ನ ನೋಡಿ ನಡುಗುತ್ತಿದ್ದ ಕಾಲ.. 50 ರೂಪಾಯಿ ಬೇಕಿದ್ದರೂ ಅಮ್ಮನನ್ನು ಗೋಗರೆದು ಪಡೆಯುತ್ತಿದ್ದ ಕಾಲ.. 20 ರೂಪಾಯಿ ಟೆನಿಸ್ ಬಾಲ್ ಕೊಂಡುಕೊಂಡರೇ ನಾನೇ ರಾಜನೆಂದು ಭಾವಿಸುತ್ತಿದ್ದ ಕಾಲ.. ಆ ರೀತಿ ಬೆಳೆದವರು ಈಗ ಐಶಾರಾಮಿ‌ ಜೀವನ ಸಾಗಿಸದಿದ್ದರೂ.. ನೆಮ್ಮದಿಯಾಗಂತೂ ಬದುಕುತ್ತಿದ್ದಾರೆ.. ಕಾಲಕ್ಕೆ ತಕ್ಕಂತೆ ಬದಲಾಗಬೇಕು ನಿಜ.. ಆದರೆ ಆಟದ ವಯಸ್ಸಿನಲ್ಲಿ ಆಟ. ಜೀವನ ಕಟ್ಟಿಕೊಳ್ಳುವ ವಯಸ್ಸಿನಲ್ಲಿ ಕೆಲಸ, ಸಂಪಾದನೆ.. ನಮ್ಮ ಹಿರಿಯರು ಮಾಡಿದಂತೆ ಜೀವನ ಚಕ್ರ ಸಾಗಿದರೆ ಒತ್ತಡ ರಹಿತವಾಗಿ ಜೀವನ ಸಾಗಿಸಬಹುದು..

ಅದನ್ನು ಬಿಟ್ಟು ವಯಸ್ಸಲ್ಲದ ವಯಸ್ಸಲ್ಲಿ ವೀಡಿಯೋ ಮಾಡಿ ಫೇಮಸ್ ಆಗೋದೆ ಒಂದು ಸಾಧನೆ ಎಂದು ಭಾವಿಸಿದರೆ.. ಇಲ್ಲದ ಗೀಳು ಬೆಳೆಸಿಕೊಂಡರೆ.. ವಯಸ್ಸಲ್ಲದ ವಯಸ್ಸಿನಲ್ಲಿ‌ ಜೀವ ಕಳೆದುಕೊಳ್ಳುವಂತಹ ಸಂದರ್ಭ ಎದುರಾಗಿ ಬಿಡುತ್ತದೆ.. ಈಗ ಆಕೆಯ ಅಪ್ಪ ಅಮ್ಮನ ನೋವಿಗೆ ಯಾರು ಕಾರಣ? ಅವರೇನು ತಪ್ಪು ಮಾಡಿದ್ರು? ಆ ಜೀವ ಹೋದದ್ದಕ್ಕೆ ಯಾರು ಹೊಣೆ? ಟಿಕ್ ಟಾಕ್ ಅವರ? ಅಥವಾ ಈಗಿನ ಜನರೇಷನ್ ಅನ್ನೋ ಅಹಂ ಭಾವದಲ್ಲಿ ಬೇಕಾಬಿಟ್ಟಿ ಬದುಕುತ್ತಿರುವ ಕೆಲ ಯುವ ಜನತೆಯ ಮನಸ್ಥಿತಿಯೋ? ಇನ್ನಾದರೂ ಬದಲಾಗಬೇಕಿದೆ.. ಕನಿಷ್ಟ ಪಕ್ಷ ಕಡೆಗಾಲದಲ್ಲಿ ನಮ್ಮನ್ನು ಹೆತ್ತವರಿಗೆ ಒಂದೊತ್ತು ಅನ್ನವನ್ನು ಹಾಕುವುದಕ್ಕಾದರೂ ನಾವು ಬದಲಾಗಿ ಬದುಕಬೇಕಿದೆ..

Be the first to comment

Leave a Reply

Your email address will not be published.


*