ಮೇಘನಾರನ್ನು ಭೇಟಿ‌ ಮಾಡಿದ ಪ್ರಥಮ್ ಹಾಗೂ ಸಿದ್ದರಾಮಯ್ಯನವರ ಸೊಸೆ..

ಅತಿ ಹೆಚ್ಚು ಪ್ರೀತಿ ಕೊಡುವ ಪತಿಯನ್ನು ಪಡೆದ ಮೇಘನಾ ನಾನೇ ಅದೃಷ್ಟವಂತೆ ಎಂದು ಸಂತೋಷ ಪಡುತ್ತಿದ್ದ ಸಮಯದಲ್ಲಿ ಮೇಘನಾರ ಸಂತೋಷ ನೋಡಲಾಗದ ಜವರಾಯ ಅತಿ ಚಿಕ್ಕ ವಯಸ್ಸಿಗೇ ಚಿರುವನ್ನು ತನ್ನ ಬಳಿ ಕರೆದುಕೊಂಡುಬಿಟ್ಟು ಮೇಘನಾದು ಅದೃಷ್ಟವೋ ದುರ್ವುಧಿಯೋ ಎಂಬ ಯಕ್ಷ ಪ್ರಶ್ನೆಯನ್ನಿಟ್ಟು ಹೋಗಿಬಿಟ್ಟ‌..

ಅತಿಯಾಗಿ ಪ್ರೀತಿಸಿದ ಪತಿ‌ ಇಲ್ಲವಾಗಿ 18 ದಿನಗಳು ಕಳೆದೇ ಹೋದವು.. ಧೈರ್ಯ ತಂದುಕೊಳ್ಳಿ ನೋವು ಮರೆಯಿರಿ ಎನ್ನುವುದು ಸುಲಭ.. ಆದರೆ ಆ ನೋವು ಅನುಭವಿಸುವ ಮೇಘನಾರಿಗೆ ಮಾತ್ರವೇ ಗೊತ್ತು ಆ ನೋವೇನೆಂದು.. ಇದೀಗ ಅವರಿಗೆ ಇರುವುದು ಸಾಂತ್ವಾನದ ಅವಶ್ಯಕತೆ.. ಸದ್ಯ ಈ ಕಷ್ಟದ ಸನಯದಲ್ಲಿ ಹೆಗಲು ಕೊಟ್ಟ ತನ್ನ ಕುಟುಂಬ ಹಾಗೂ ಸ್ನೇಹಿತರಿಗೆ ಮತ್ತು ಅಭಿಮಾನಿಗಳಿಗೆ ಮೇಘನಾ ಧನ್ಯವಾದಗಳನ್ನು ತಿಳಿಸಿದ್ದರು..

ಇದೀಗ ಸಿದ್ದರಾಮಯ್ಯನವರ ಸೊಸೆ ಹಾಗೂ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಮೇಘನಾರ ಮನೆಗೆ ಭೇಟಿ‌ ನೀಡಿ ಮೇಘಾನಾರೊಂದಿಗೆ ಕೆಲ ಕಾಲ ಕಳೆದು ಅವರಿಗೆ ಧೈರ್ಯ ತುಂಬಿ ಒಂದಿಷ್ಟು ಸಾಂತ್ವಾನದ ಮಾತುಗಳನ್ನಾಡಿ ಮುಖದಲ್ಲಿ ಬಾರದಿದ್ದರೂ ಬಲವಂತವಾಗಿಯಾದರೂ ಕೆಲ ಕಾಲ ನೋವು ಮರೆಸಿ ಸಣ್ಣ ನಗು ಮೂಡಿಸಿ.. ಸಾಂತ್ವಾನ ಹೇಳಿ‌ ಬಂದಿದ್ದಾರೆ..

ಹೌದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೊ ಹಂಚಿಕೊಂಡಿರುವ ಪ್ರಥಮ್ “ಒಂದು ಹೃದಯಸ್ಪರ್ಶಿ ಭೇಟಿ.. ನಮ್ಮ‌ ಸಿದ್ಧರಾಮಯ್ಯ‌ನವರ ಸೊಸೆ ಇವತ್ತಿನ ತನಕ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಮೇಘನಾ ರಾಜ್ ಅವರ ಬಗ್ಗೆ ಒಂದು ವಿಶೇಷ ಪ್ರೀತಿ, ಕಳಕಳಿ.. ಒಂದಷ್ಟು ಮಾತಾಡಿ ಸಮಾಧಾನ ಹೇಳಿದ್ರು.. ಒಂದು ಸಾಂತ್ವಾನದ ಭೇಟಿ. ಬೇರೇನೂ ಇಲ್ಲ.. ಮೇಘನಾರ ಮುಖದಲ್ಲಿ ಗೆಲುವಿದೆ‌.. ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.. ಎಲ್ಲಕ್ಕಿಂತಲೂ ದೊಡ್ಡದು ಮಾನವೀಯತೆ..

ಸ್ಮಿತಾ ಅವರ ಭೇಟಿಯ ಬಗ್ಗೆ ಅನಾವಶ್ಯಕ ಕಲ್ಪನೆ ಬೇಡ.. ಒಂದು ವಿಶೇಷ ಮನವಿ.. ಸಂಬಂಧವೇ ಇರದ ಗಾಸಿಪ್ ಗಳು ಇಲ್ಲಸಲ್ಲದ ವಿಚಾರ ಯೂಟ್ಯೂಬ್ ಲಿ ಹಾಕೋ ಮುಂಚೆ ಒಂದು ಸಲ ಮೇಘನಾ ರಾಜ್ ರ ಬಗ್ಗೆ ಯೋಚಿಸಿ.. ಆದಷ್ಟು ಮೇಘನಾ ಅವ್ರ ಭಾವನೆಗಳನ್ನು ಗೌರವಿಸಿ.. ಎಲ್ಲಿಯೂ ಮಾತನಾಡದ ಸ್ಮಿತಾ ಅವರು ಬಹಳಷ್ಟು ವಿಚಾರಗಳನ್ನ ಅಕ್ಕನ ಜಾಗದಲ್ಲಿ ನಿಂತು ಮೇಘನಾರ ಜೊತೆ ಮಾತಾಡಿದ್ದಾರೆ.. ಮಗುವಿನ ಬಗ್ಗೆ ಬಹಳಷ್ಟು ಕನಸು ಕಂಡಿದ್ದಾರೆ. ಅವರ ಎಲ್ಲಾ ಆಸೆಗಳು ಈಡೇರಲೆಂದು ಸ್ವಚ್ಛ ಮನಸ್ಸಿನಿಂದ ಹಾರೈಸೋಣ..” ಎಂದು ಬರೆದು ಪೋಸ್ಟ್ ಮಾಡಿದ್ದಾರೆ..
All Rights Reserved RJ News Kannada.

Be the first to comment

Leave a Reply

Your email address will not be published.


*