ಜೊತೆಜೊತೆಯಲಿ ಧಾರಾವಾಹಿಯಲ್ಲಿ ಮತ್ತೊಂದು ತಿರುವು.. ನಡೆಯಲಿದೆಯಾ ಅನು ಕಲ್ಯಾಣ..

ಜೊತೆಜೊತೆಯಲಿ ಧಾರಾವಾಹಿಯಲ್ಲಿ ಈಗ ತಾನೆ ನಮ್ ಹೀರೋ ಆರ್ಯವರ್ಧನರಿಗೆ ಎದುರಾಗಿ ಜಲಂಧರನನ್ನು ತಂದು ನಿಲ್ಲಿಸಿ ಸ್ಟೋರಿಯಲ್ಲಿ ತಿರುವು ಕೊಟ್ಟು ಮುಂದೇನಾಗಬಹುದು ಎಂದು ಕಾಯುತ್ತಿರುವಾಗಲೇ ಇದೀಗ ನಿರ್ದೇಶಕರು ಮತ್ತೊಂದು ಟ್ವಿಸ್ಟ್ ಕೊಡೋ ಹಾಗೆ ಕಾಣುತ್ತಿದೆ..

ಇತ್ತ ಆರ್ಯ ಅನುವಿನ ಮನಸ್ಸಿನಲ್ಲಿನ ಪ್ರೀತಿ.. ನೋಡುವ ಕಾತುರ ಒಂದು ಕಡೆಯಾದರೆ ಅತ್ತ ಶ್ರೀ ಸುಬ್ರಹ್ಮಣ್ಯ ಸಿರಿಮನೆಯವರು ಅದ್ಯಾಕೋ‌ ನಮ್ ಅನುಗೆ ಮದುವೆ ಮಾಡೋ ಪ್ಲಾನ್ ನಲ್ಲಿ ಇದ್ದಹಾಗೆ ಕಾಣುತ್ತಿದೆ..

ಹೌದು ಆರ್ಯವರ್ಧನ್ ಯಾವಾಗ ಅನು ಮುಂದೆ ತಮ್ಮ ಪ್ರೀತಿಯನ್ನು ಹೇಳಿಕೊಳ್ತಾರೋ ಅಂತ ಪ್ರೇಕ್ಷಕರು ಕಾಯುತ್ತಿರುವಾಗ.. ಅತ್ತ ಸುಬ್ರಹ್ಮಣ್ಯ ಸಿರಿಮನೆ ಅವರು ದಿಡೀರ್ ಅಂತ ಅನುಗೆ ಗಂಡು ನೋಡೋಕೆ ಶುರು ಮಾಡುತ್ತಿದ್ದಾರೆ..

ಸಾಮಾನ್ಯವಾಗಿ ಓದಿಕೊಂಡಿದ್ದರೂ ಸಾಕು.. ಆದರೆ ವಯಸ್ಸು ಮಾತ್ರ 25 ದಾಟಿರಬಾರದೆಂಬ ಸುಬ್ರಹ್ಮಣ್ಯ ಸಿರಿಮನೆ ಅವರ ಕಂಡೀಷನ್ ಪುಷ್ಪರಿಗೂ ಒಪ್ಪಿಗೆಯಾಗಿ ಮಗಳ ಮದುವೆ ನೋಡುವ ಆಸೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ..

ಇನ್ನು ಮುಂದಿನ ಸಂಚಿಕೆಗಳಲ್ಲಿ ಸುಬ್ಬು ಮನೆಗೆ ಕ್ಲೋಸ್ ಆಗಿರುವ ನೀಲ್ ಹೆಸರೇ ಸುಬ್ಬು ಮನಸ್ಸಲ್ಲಿ ಬಂದರೂ ಬರಬಹುದು.. ಆದರೆ ಇವೆಲ್ಲವನ್ನು ದಾಟಿ ಆರ್ಯ ಅನುವಿನ ಪ್ರೀತಿ ಯಾವಾಗ ಮದುವೆಯವರೆಗೂ ಬಂದು ನಿಲ್ಲುವುದೋ ಕಾದು ನೋಡಬೇಕಿದೆ.. ಆದರೆ‌ ಇದ್ದಕ್ಕಿದ್ದ ಹಾಗೆ ಸುಬ್ಬು ಅವರು ಅನು ಮದುವೆ ಮಾಡುವ ನಿರ್ಧಾರಕ್ಕೆ ಏಕೆ ಬಂದರೆಂದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ..

Be the first to comment

Leave a Reply

Your email address will not be published.


*